ಅಸ್ಸಾಂ ಸರ್ಕಾರವು ಶನಿವಾರ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಡ್ರೆಸ್ ಕೋಡ್ (Dress Code) ಅನ್ನು ಪರಿಚಯಿಸಿದೆ. ಕಡ್ಡಾಯವಾಗಿ ಎಲ್ಲಾ ಶಿಕ್ಷಕರೂ ಸಹ ತಮ್ಮ ಡ್ರೆಸ್ಕೋಡ್ ಹೇಗಿದೆಯೋ ಅದೇ ರೀತಿ ಬಟ್ಟೆ (Cloth) ಅಂದರೆ ಸಮವಸ್ತ್ರ ಬರಬೇಕು ಎಂದು ತಿಳಿಸಲಾಗಿದೆ. ಶಿಕ್ಷಕರು ಜೀನ್ಸ್, ಟಿ-ಶರ್ಟ್ ಮತ್ತು ಲೆಗ್ಗಿಂಗ್ಸ್ ಧರಿಸುವುದನ್ನು ನಿಷೇಧಿಸಿದೆ ಎಂದು ವರದಿಯಾಗಿದೆ. ಶಾಲೆಗಳಲ್ಲಿ (School) ಟೀ ಶರ್ಟ್, ಜೀನ್ಸ್, ಲೆಗ್ಗಿಂಗ್ಸ್ ಇತ್ಯಾದಿಗಳನ್ನು ಧರಿಸದಂತೆ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಪುರುಷ ಮತ್ತು ಮಹಿಳಾ ಶಿಕ್ಷಕರಿಗೆ ತಿಳಿಸಿದೆ. ಅಧಿಕೃತ ಹೇಳಿಕೆಯಲ್ಲಿ ಈ ಕುರಿತು ಉಲ್ಲೇಖ ಮಾಡಲಾಗಿದೆ. ಶಾಲಾ ಶಿಕ್ಷಣ (Education) ಇಲಾಖೆಯು ಶಿಕ್ಷಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಎಲ್ಲಾ ರೀತಿಯ ಸಭ್ಯತೆಗೆ ಒಂದು ಉದಾಹರಣೆಯಾಗಿರುತ್ತಾರೆ.
ಆದ್ದರಿಂದ ಡ್ರೆಸ್ ಕೋಡ್ ಅನ್ನು ಅನುಸರಿಸುವುದು ಅಗತ್ಯವಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳ ಶಿಕ್ಷಕರು ತಮ್ಮ ಆಯ್ಕೆಯ ಉಡುಗೆಯನ್ನು ಧರಿಸುವ ಅಭ್ಯಾಸವನ್ನು ಹೊಂದಿರುವುದು ತಿಳಿದು ಬಂದಿದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ನೀಡಿದ ಈ ಮಾಹಿತಿಯನ್ನು ಅನುಸರಿಸಲೇ ಬೇಕಾಗುತ್ತದೆ. ಸಭ್ಯತೆ, ವೃತ್ತಿಪರತೆ ಮತ್ತು ಉದ್ದೇಶದ ಗಂಭೀರತೆಯನ್ನು ಶಿಕ್ಷಕರು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Uniform: ಶಾಲೆಗಳಲ್ಲಿ ಸಮವಸ್ತ್ರ ಏಕೆ ಧರಿಸುತ್ತಾರೆ? ಇಲ್ಲಿದೆ ಮಾಹಿತಿ
ಸಭ್ಯತೆ ಪ್ರತಿಬಿಂಬಿಸುವ ಡ್ರೆಸ್ ಕೋಡ್ ಅನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇಲಾಖೆಯು ಶಿಕ್ಷಕರಿಗೆ ಸ್ವಚ್ಛ, ಸಾಧಾರಣ ಮತ್ತು ಸಭ್ಯವಾದ ಬಟ್ಟೆಗಳನ್ನು ಮಾತ್ರ ಧರಿಸುವಂತೆ ಸೂಚಿಸಲಾಗಿದೆ. ಕ್ಯಾಶುಯಲ್ ಮತ್ತು ಪಾರ್ಟಿ ಉಡುಪುಗಳನ್ನು ಕಟ್ಟುನಿಟ್ಟಾಗಿ ಹಾಕಲೇ ಬಾರದು ಎಂಬ ಸೂಚನೆ ನೀಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರವು ಎಲ್ಲಾ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಈ ಕೆಳಗಿನ ಡ್ರೆಸ್ ಕೋಡ್ ಅನ್ನು ಸೂಚಿಸಿದೆ.
ಪುರುಷ ಶಿಕ್ಷಕರು ತಮ್ಮ ಉಡುಗೆಯನ್ನು ಯಾವ ರೀತಿ ಹಾಕಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ತಮ್ಮ ಕರ್ತವ್ಯಗಳಿಗೆ ಹಾಜರಾಗುವ ಸಮಯದಲ್ಲಿ ಟಿ-ಶರ್ಟ್, ಜೀನ್ಸ್ ಇತ್ಯಾದಿ ಉಡುಪುಗಳನ್ನು ತೊಡುವ ಹಾಗಿಲ್ಲ. ಪಾರ್ಟಿ ವೇರ್ ಅಥವಾ ಕ್ಯಾಶುವಲ್ ಅಂಗಿ ಧರಿಸುವ ಹಾಗಿಲ್ಲ.
ಮಹಿಳಾ ಶಿಕ್ಷಕರು ತಮ್ಮ ಕರ್ತವ್ಯಗಳಿಗೆ ಹಾಜರಾಗುವ ಸಂದರ್ಭದಲ್ಲಿ ಯೋಗ್ಯವಾದ ಸಲ್ವಾರ್ ಸೂಟ್ / ಸೀರೆ / ಮೇಖೇಲಾ-ಚಾದರ್ ನಲ್ಲಿ ಹಾಜರಾಗಬೇಕು ಮತ್ತು ಟಿ-ಶರ್ಟ್, ಜೀನ್ಸ್, ಲೆಗ್ಗಿಂಗ್ಸ್ ಮುಂತಾದ ಕ್ಯಾಶುಯಲ್ ಉಡುಗೆಯನ್ನು ಶಾಲೆಗೆ ಹಾಕಿಕೊಂಡು ಬರುವಂತಿಲ್ಲ ಎಂದು ನಾರಾಯಣ ಕೋನ್ವಾರ್, ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.
ಆ ಆದೇಶವನ್ನು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಅನುಸರಿಸಬೇಕು ಮತ್ತು ಯಾವುದೇ ಉಲ್ಲಂಘನೆಯನ್ನು ಮಾಡಿದರೆ ನಿಯಮಗಳಿಗೆ ಅನುಸಾರವಾಗಿ ಶಿಸ್ತು ಕ್ರಮಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅಸ್ಸಾಂ ಶಿಕ್ಷಣ ಸಚಿವ ಡಾ ರನೋಜ್ ಪೆಗು, ಅಸ್ಸಾಂ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಿಗೆ ಶಾಲಾ ನಿಯಮ ಪುಸ್ತಕವನ್ನು ಪರಿಚಯಿಸಲು ಹೊರಟಿದೆ.
ಈ ಶಾಲಾ ನಿಯಮ ಪುಸ್ತಕದಲ್ಲಿ ಶಿಕ್ಷಕರು ಸಭ್ಯವಾಗಿ, ಸರಿಯಾಗಿ ಧರಿಸಬೇಕು ಮತ್ತು ಅವರು ಫಾರ್ಮಲ್ ಡ್ರೆಸ್ ಧರಿಸಬೇಕು, ವಿದ್ಯಾರ್ಥಿಗಳಿಗೆ ಸಮವಸ್ತ್ರವಿದೆ, ಆದ್ದರಿಂದ ಶಿಕ್ಷಕರು ಫಾರ್ಮಲ್ ಡ್ರೆಸ್ ಧರಿಸಿ ಶಾಲೆಗೆ ಬರಬೇಕು ಎಂದು ಆ ಪುಸ್ತಕದಲ್ಲಿ ಸರಿಯಾಗಿ ವಿವರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ