Savarkar Flex: ವೋಟ್‌ಗಾಗಿ ಸಿದ್ದರಾಮಯ್ಯ ಸಾವರ್ಕರ್ ಅವಹೇಳನ ಮಾಡುತ್ತಿದ್ದಾರೆ -ಗೃಹಸಚಿವ ಆರಗ ಜ್ಞಾನೇಂದ್ರ ಆಕ್ರೋಶ

ಸಾವರ್ಕರ್ ಒಬ್ಬ ಸ್ವತಂತ್ರ ಹೋರಾಟಗಾರ. ಅವರು 13 ವರ್ಷ ಕರಿ ನೀರಿನ ಶಿಕ್ಷೆ ಅನುಭವಿಸಿದ್ದರು. ಅವರು ಈ ದೇಶದ ಸ್ವತಂತ್ರಕ್ಕೋಸ್ಕರ ಹೋರಾಡಿದ್ದಾರೆ ಅಂತ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಆರಗ ಜ್ಞಾನೇಂದ್ರ

ಸಿದ್ದರಾಮಯ್ಯ ಮತ್ತು ಆರಗ ಜ್ಞಾನೇಂದ್ರ

  • Share this:
ಶಿವಮೊಗ್ಗ: ಮಾಜಿ ಸಿಎಂ (Ex CM) ಸಿದ್ದರಾಮಯ್ಯ (Siddaramaiah) ವಿರುದ್ಧ ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ (Araga Janendra) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ನವರು ವೋಟಿಗಾಗಿ (Vote) ಓಲೈಕೆ ಮಾಡಿ, ವಿ.ಡಿ. ಸಾವರ್ಕರ್ (VD Savarkar) ಅವರ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, ಸಾವರ್ಕರ್ ಬ್ರಿಟಿಷರ (British) ಬೂಟು (Shoe) ನೆಕ್ಕಿದರು ಎಂಬ ಹೇಳಿಕೆ ಕೆಲವರಿಗೆ ಪ್ರಚೋದನೆ ನೀಡಿದೆ. ಹಿರಿಯ ರಾಜಕಾರಣಿಯಾಗಿ (Senior Politician) ಅವರ ನೀಡಿದ ಹೇಳಿಕೆ ಸಮುದಾಯವನ್ನು ಎತ್ತಿಕಟ್ಟಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಘಟನೆ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೆವೆ ಎಂದ ಗೃಹಸಚಿವರು, ಯಾವ ಯಾವ ಸಂಘಟನೆ‌ ಹಿನ್ನಲೆ ಇದೆ ಯಾರ್ಯಾರ ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ತಾರ್ಕಿಕ ಅಂತ್ಯದವರೆಗೂ ಕೊಂಡೋಯ್ಯುತ್ತೇವೆ ಅಂತ ಭರವಸೆ ನೀಡಿದ್ದಾರೆ.

“ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು”

ಸಾವರ್ಕರ್ ಒಬ್ಬ ಸ್ವತಂತ್ರ ಹೋರಾಟಗಾರ. ಅವರು 13 ವರ್ಷ ಕರಿ ನೀರಿನ ಶಿಕ್ಷೆ ಅನುಭವಿಸಿದ್ದರು. ಅವರು ಈ ದೇಶದ ಸ್ವತಂತ್ರಕ್ಕೋಸ್ಕರ ಹೋರಾಡಿದ್ದಾರೆ ಅಂತ ಆರಗ ಜ್ಞಾನೇಂದ್ರ ಹೇಳಿದ್ದಾರೆ.ಸಿದ್ದರಾಮಯ್ಯ ವಿರುದ್ಧ ಗೃಹಸಚಿವರ ಆಕ್ರೋಶ

ವೀರಸಾರ್ವಕರ್ ಪೋಟೋ ಅಳವಡಿಕೆ ವಿಚಾರದಲ್ಲಿ ಉಂಟಾದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರ್ವಕರ್ ಪೋಟೋ ಈ ದೇಶದಲ್ಲಿ ಹಾಕಬಾರದಾ? ಇಲ್ಲಿ ನಿಷೇಧ ಮಾಡಲಾಗಿದಿಯೇ? ಮುಸ್ಲಿಂ ಗಲ್ಲಿಗಳು ಈ ದೇಶದ ಭಾಗವಲ್ಲವೇ? ಸಿದ್ದರಾಮಯ್ಯ ನವರು ಹೀಗೆ ಮಾಡಿಯೇ ಅವರ ಆಳ್ವಿಕೆಯಲ್ಲಿ ಒಂದು ಸಮುದಾಯ ಎತ್ತಿಕಟ್ಟಿದ್ದರು. ಸಿದ್ದರಾಮಯ್ಯ ಇಂತಹ ಮಾತುಗಳನ್ನು ಆಡುವುದರಿಂದ ಒಂದು ಸಮುದಾಯಕ್ಕೆ ಪ್ರಚೋದನೆಯಾಗುತ್ತದೆ. ಚುನಾವಣಾ ವರ್ಷ ಆಗಿರೋದರಿಂದ ಈ ರೀತಿ ಮಾತನಾಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.

ಇದನ್ನೂ ಓದಿ: Praveen Nattar: ಪ್ರವೀಣ್ ನೆಟ್ಟಾರ್‌ ಹತ್ಯೆ ಕೇಸ್ ಎನ್‌ಐಎಗೆ ಹಸ್ತಾಂತರ, ಕೊಲೆ ಹಿಂದಿದ್ದವರ ಎದೆಯಲ್ಲಿ ಶುರುವಾಗಿದೆ ನಡುಕ!

“ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ”

ಶಿವಮೊಗ್ಗದಲ್ಲಿ ನಿನ್ನೆ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಎಷ್ಟು ಜನರನ್ನು ಬಂಧಿಸಬೇಕು ಎಂಬ ಬಗ್ಗೆ ಪೊಲೀಸರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪೊಲೀಸರಿಗೆ ಪ್ರೀ ಹ್ಯಾಂಡ್ ಕೊಡಲಾಗಿದೆ. ಆರೋಪಿಗಳ ಹಿಂದೆ ಯಾವ ಸಂಘಟನೆ ಕೈವಾಡ ಇದೆ, ಎಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಸುಮ್ಮನೆ ಯಾವುದೋ ಕೇಸ್ ಹಾಕಿ ಮುಚ್ಚಿಹಾಕುವಂತಹದ್ದಲ್ಲ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ . ಪ್ರಕರಣದಲ್ಲಿ ಯಾವುದೇ ಸಂಘಟನೆ ಇದ್ದರು ಕಠಿಣ ಕ್ರಮ‌ಕೈಗೊಳ್ಳುತ್ತೇವೆ ಅಂತ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.

ಎಡಿಜಿಪಿ ಜೊತೆ ಚರ್ಚೆ

ಶಿವಮೊಗ್ಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಜೊತೆ ಚರ್ಚೆ ನಡೆಸಲಾಗಿದೆ. ಹಲ್ಲೆ ಹಾಗೂ ಅವಹೇಳನದಂತಹ‌ ಪ್ರಕರಣದಲ್ಲಿ ಯಾರೇ ಇದ್ರು ಸಹ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಶಿವಮೊಗ್ಗದ ಪ್ರೇಮ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದವರ ಹಿಂದೆ ಯಾವ ಸಂಘಟನೆ ಇದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯದವರೆಗೂ ತೆಗೆದುಕೊಂಡು ಹೋಗುತ್ತೇವೆ ಎಂದರು.

ಇದನ್ನೂ ಓದಿ: Savarkar Flex: ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದವರನ್ನು ಕಂಡಲ್ಲಿ ಗುಂಡಿಟ್ಟು ಸಾಯಿಸಿ! ಸೊಗಡು ಶಿವಣ್ಣ ಆಕ್ರೋಶದ ಮಾತು

ಗುರುವಾರದವರೆಗೂ ನಿಷೇಧಾಜ್ಞೆ ಮುಂದುವರಿಕೆ

ಶಿವಮೊಗ್ಗ ಸಿಟಿ ಸಧ್ಯ ಶಾಂತಿಯುತವಾಗಿದೆ. ಶಿವಮೊಗ್ಗ, ಭದ್ರಾವತಿ ನಾಗರಿಕರು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಗುರುವಾರದ ವರೆಗಬ ನಿಷೇಧಾಜ್ಞೆ ಮುಂದುವರಿಯುತ್ತೆ. ಬೇರೆ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ , ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ತರಿಸಲಾಗಿದೆ ಅಂತ ಗೃಹ ಸಚಿವರು ಹೇಳಿದ್ದಾರೆ.
Published by:Annappa Achari
First published: