• Home
  • »
  • News
  • »
  • breaking-news
  • »
  • Assembly Election: ಕಾಂಗ್ರೆಸ್​ ಟಿಕೆಟ್​ಗಾಗಿ ಸಿದ್ದರಾಮಯ್ಯ ಅರ್ಜಿ; ಕ್ಷೇತ್ರದ ಹೆಸರು ಖಾಲಿ ಖಾಲಿ!

Assembly Election: ಕಾಂಗ್ರೆಸ್​ ಟಿಕೆಟ್​ಗಾಗಿ ಸಿದ್ದರಾಮಯ್ಯ ಅರ್ಜಿ; ಕ್ಷೇತ್ರದ ಹೆಸರು ಖಾಲಿ ಖಾಲಿ!

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ ಆಪ್ತ ಸಹಾಯಕರಾದ ಪ್ರಭಾಕರ್ ಹಾಗೂ ವೆಂಕಟೇಶ್​ ಅವರು ಸಿದ್ದರಾಮಯ್ಯ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರ ಆಯ್ಕೆ ಎಂದು ಬರೆಯಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.21): ವಿಧಾನಸಭೆ ಚುನಾವಣೆಗೆ (Assembly Election) ಕಾಂಗ್ರೆಸ್​ ಪಕ್ಷದ ಟಿಕೆಟ್ (Congress Ticket)​ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವಕಾಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (D K Shivakumar) ಘೋಷಣೆ ಮಾಡಿದ್ರು. ಕ್ಷೇತ್ರದ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಅರ್ಜಿ ಸಲ್ಲಿಸಿರಲಿಲ್ಲ. ಕೊನೆಯ ದಿನವಾದ ಇಂದು (ನ.21) ರಂದು ಸಿದ್ದರಾಮಯ್ಯ ಪರವಾಗಿ ಆಪ್ತ ಸಹಾಯಕ (Personal Assistant) ಅರ್ಜಿ ಸಲ್ಲಿಸಿದ್ದಾರೆ. 


ಸಿದ್ದು ಆಪ್ತ ಸಹಾಯಕರಿಂದ ಅರ್ಜಿ ಸಲ್ಲಿಕೆ


ಸಿದ್ದರಾಮಯ್ಯ ಆಪ್ತ ಸಹಾಯಕರಾದ ಪ್ರಭಾಕರ್ ಹಾಗೂ ವೆಂಕಟೇಶ್​ ಅವರು ಸಿದ್ದರಾಮಯ್ಯ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರ ಆಯ್ಕೆ ಎಂದು ಬರೆಯಲಾಗಿದೆ. ಕ್ಷೇತ್ರದ ಹೆಸರು ತುಂಬದೆ ಅರ್ಜಿ ಸಲ್ಲಿಸಲಾಗಿದೆ.


siddaramaiah has demanded that the bjp should apologize in the case of paresh mesta s death
ವಿಪಕ್ಷ ನಾಯಕ ಸಿದ್ದರಾಮಯ್ಯ


ಗುಟ್ಟು ಬಿಟ್ಟು ಕೊಡದ ಸಿದ್ದರಾಮಯ್ಯ


ಬಾದಾಮಿ ತೊರೆದು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ, ಕ್ಷೇತ್ರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀನಿ ಎಂದು ಸಿದ್ದರಾಮಯ್ಯ ಎಲ್ಲೂ ಹೇಳದೆ ಗುಟ್ಟಾಗಿಟ್ಟಿದ್ದಾರೆ. ಟಿಕೆಟ್​ಗಾಗಿ ಅರ್ಜಿ ಸಲ್ಲಿಸುವ ವೇಳೆಯಾದ್ರೂ ಈ ಗುಟ್ಟು ರಟ್ಟಾಗುತ್ತೆ ಎಂದು ಕಾದವರಿಗೆ ನಿರಾಸೆಯಾಗಿದೆ. ಅರ್ಜಿಯಲ್ಲಿ ಕ್ಷೇತ್ರದ ಕಾಲಂದಲ್ಲಿ ಹೈಕಮಾಂಡ್​ ನಿರ್ಧಾರದ ಮೇರೆಗೆ ಎಂದು ಬರೆದು ಜಾಣತನ ತೋರಿದ್ದಾರೆ.


ಒಂದೇ ಕ್ಷೇತ್ರದಿಂದ ಸ್ಪರ್ಧೆ


ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ (Competition) ಒತ್ತಾಯ ಬಂದಿದೆ. ನಾನು 3 ಕ್ಷೇತ್ರಗಳನ್ನ ಶಾರ್ಟ್ ಲಿಸ್ಟ್ ಮಾಡಿದ್ದೇನೆ ಎಂದ್ರು. ಕೋಲಾರ, (Kolara) ಬಾದಾಮಿ (Badami) ಹಾಗೂ ವರುಣ (Varuna) ಕ್ಷೇತ್ರ ಶಾರ್ಟ್ ಲಿಸ್ಟ್​ನಲ್ಲಿದೆ. ಚುನಾವಣೆ ಘೋಷಣೆ ನಂತರ ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ತಿಳಿಸುತ್ತೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು.


ಸರ್ವೆ ಮಾಡಿಸಿದ್ರೆ ತಪ್ಪೇನು? ಮೋದಿ ಮಾಡಿಸಿಲ್ವಾ?


ಸೋಲಿನ ಭಯದಲ್ಲಿ ಸರ್ವೆ ಮೊರೆ ಹೋಗಿದ್ದಾರೆ ಎಂಬ ಆರೋಪ ವಿಚಾರಕ್ಕೆ ಈ ಹಿಂದೆ ಮಾತಾಡಿದ್ದ ಸಿದ್ದರಾಮಯ್ಯ, ಸರ್ವೆ ಮಾಡಿಸಿದ್ರೆ ತಪ್ಪೇನು, ನರೇಂದ್ರ ಮೋದಿ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರಲಿಲ್ವಾ. ಹಾಗಾದ್ರೆ ಅವ್ರು ಸರ್ವೆ  ಮಾಡಿಸಿರಲಿಲ್ವಾ. ನಾವು ರಾಜ್ಯವ್ಯಾಪಿ ಪ್ರವಾಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಇದನ್ನೂ ಓದಿ: Karnataka Politics: ಕಾಂಗ್ರೆಸ್​ನಲ್ಲಿ ಡಿಕೆಶಿ-ಸಿದ್ದು ಟಿಕೆಟ್​ ಫೈಟ್​! ಅಭ್ಯರ್ಥಿ ಘೋಷಿಸುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ ಎಂದ್ರು ಕೆಪಿಸಿಸಿ ಅಧ್ಯಕ್ಷ

ನಾನು ಸರ್ವೆ ಮಾಡಿಸಿಲ್ಲ, ಪಕ್ಷ ಸರ್ವೆ ಮಾಡಿಸಿದೆ


ಸುರಕ್ಷಿತ ಕ್ಷೇತ್ರಕ್ಕಾಗಿ ಸರ್ವೆ ಮಾಡಿಸ್ತಾರೆ. ನಾನು ಸರ್ವೆ ಮಾಡಿಸಿಲ್ಲ, ಪಕ್ಷ ಸರ್ವೆ ಮಾಡಿಸಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಆರಂಭಕ್ಕೆ ಸಂಬಂಧಿಸಿದಂತೆ ಮಾತಾಡಿದ ಸಿದ್ದರಾಮಯ್ಯ, ಯಾವ ಯಾತ್ರೆ ಮಾಡಿದ್ರು ಪರವಾಗಿಲ್ಲ. ಪಂಚರತ್ನ, ಅಷ್ಟರತ್ನ, ದಶರತ್ನ ಬೇಕಾದರೆ ಮಾಡಲಿ ಅವರ ಸಂಘಟನೆ ಅವರಿಗೆ ನಾನು ಯಾರಿಗೂ ತಲೆ ಕೆಡೆಸಿಕೊಳ್ಳಲ್ಲ ಎಂದು ಜೆಡಿಎಸ್ ಪಂಚರತ್ನ ಯಾತ್ರೆಯನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ  ಲೇವಡಿ ಮಾಡಿದ್ದರು.


ಸಿದ್ದರಾಮಯ್ಯ ತನ್ನ ಕೊನೆಯ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಅಖಾಡಕ್ಕಿಳಿತಾರೆ ಅನ್ನೋ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ಮೂಡಿದೆ. ಅಂತಿಮವಾಗಿ ಹೈಕಮಾಂಡ್​ ನಿರ್ಧಾರವೇ ನನ್ನ ನಿರ್ಧಾರ ಎಂದು ಸಿದ್ದರಾಮಯ್ಯ ಹೇಳಿದ್ದು, ಕ್ಷೇತ್ರದ ಬಗ್ಗೆ ಅವ್ರೇ ಘೋಷಣೆ ಮಾಡೋದಾಗಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: