ರಾಯಚೂರು: ರಾಜ್ಯ ಪೊಲೀಸ್ ಇಲಾಖೆ (Karnataka Police) ಮತ್ತು ರಾಜ್ಯ ಸರ್ಕಾರ (Karnataka Govt) ಮುಜುಗರ ತಂದಿದ್ದ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi)ಯನ್ನು ಮೈಸೂರು ಪೊಲೀಸರು (Mysuru) ಗುಜರಾತ್ನಲ್ಲಿ (Santro Ravi Arrest) ನಿನ್ನೆ ಬಂಧಿಸಿ ರಾತ್ತೋರಾತ್ರಿ ರಾಜ್ಯಕ್ಕೆ ಕರೆತಂದಿದ್ದಾರೆ. ಈ ನಡುವೆ ಕರ್ನಾಟಕದಿಂದ ಎಸ್ಕೇಪ್ ಆಗಿದ್ದ ಸ್ಯಾಂಟ್ರೋ ರವಿ, ಗುಜರಾತ್ನಲ್ಲಿ ಸಿಕ್ಕಿ ಬಿದ್ದದ್ದು ಹೇಗೆ ಎಂಬ ಕುತೂಹಲಕಾರಿ ಮಾಹಿತಿ ಲಭ್ಯವಾಗಿದೆ. ಗುಜರಾತ್ನ ವಡೋದರಾದಲ್ಲಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದು, ಸದ್ಯ ಆತನನ್ನು ಪತ್ನಿ ದೂರಿನ ಮೇರೆಗೆ ಬಂಧನ ಮಾಡಲಾಗಿದೆ.
ಮೊಬೈಲ್ ಸ್ವಿಚ್ ಆಫ್, ಎಟಿಎಂ ಕಾರ್ಡ್ ಬಳಸದ ಆರೋಪಿ
ಆರೋಪಿ ವಿರುದ್ಧ ಪತ್ನಿ ದೂರು ನೀಡುತ್ತಿದ್ದಂತೆ ಮೈಸೂರಿನಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ರವಿ, ಕಳೆದ ಜನವರಿ 3ರ ವರೆಗೂ ಬೆಂಗಳೂರಲ್ಲೇ ಇದ್ದ ಎನ್ನಲಾಗಿದೆ. ಗಾಂಧಿನಗರ ಬಳಿ ಖಾಸಗಿ ಹೋಟೆಲ್ನಲ್ಲಿ ರೂಮ್ ಮಾಡಿಕೊಂಡಿದ್ದ ಆತ, ನಂತರ ಖಾಸಗಿ ಬಸ್ ಮೂಲಕ ಕೇರಳಕ್ಕೆ ಪ್ರಯಾಣಿಸಿದ್ದನಂತೆ.
ಕೇರಳದಿಂದ ಗುಜರಾತ್ಗೆ ವಿಮಾನ ಹತ್ತಿದ್ದ ಆರೋಪಿ, ಕೆಲ ಆಪ್ತರ ಜೊತೆ ಸಂಪರ್ಕದಲ್ಲಿದ್ದನಂತೆ. ಆದರೆ ಆತನ ಮೊಬೈಲ್ ಆನ್ ಮಾಡ್ತಿರಲಿಲ್ಲವಂತೆ. ಅಲ್ಲದೇ ಹಣ ನೀಡಲು ಎಟಿಎಂ ಕಾರ್ಡ್ ಕೂಡ ಬಳಸುತ್ತಿರಲಿಲ್ಲವಂತೆ. ಎಲ್ಲೂ ಆನ್ಲೈನ್ ಪೇಮೆಂಟ್ ಮಾಡದ ಆರೋಪಿ, ಈ ಬಾರಿ ಆಪ್ತರನ್ನು ಸಂಪರ್ಕಿಸಿ ಪೊಲೀಸರ ಖೆಡ್ಡಾಕೆ ಬಿದ್ದದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಪ್ರತಿಯೊಬ್ಬ ಪೊಲೀಸರೂ ಅಲರ್ಟ್
ಹೌದು, ಕರ್ನಾಟಕದಿಂದ ನಾಪತ್ತೆಯಾಗಿದ್ದ ಸ್ಯಾಂಟ್ರೋ ರವಿಗಾಗಿ ಪೊಲೀಸರು ಬಹುತೇಕ ಅರ್ಧ ದೇಶದಲ್ಲಿ ಹುಡುಕಾಟ ನಡೆಸಿದ್ದರು. ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ಮೇರೆಗೆ ಅಲರ್ಟ್ ಕರ್ನಾಟಕದ ಪ್ರತಿಯೊಬ್ಬ ಪೊಲೀಸರೂ ಅಲರ್ಟ್ ಆಗಿದ್ದರು.
ಈ ವೇಳೆ ಆರೋಪಿ ಪರ ವಕೀಲ ಚೇತನ್ ಮಂತ್ರಾಲಯಕ್ಕೆ ಬಂದಿದ್ದ ಮಾಹಿತಿ ರಾಯಚೂರು ಎಸ್ಪಿ ನಿಖಿಲ್.ಬಿ ಅವರಿಗೆ ಸಿಕ್ಕಿತ್ತು. ಈ ಸುಳಿವಿನ ಮೇರೆಗೆ ಆರೋಪಿ ಲೋಕೇಷನ್ ಪತ್ತೆಗೆ ಮುಂದಾಗಿದ್ದ ಎಸ್ಪಿ ಅವರಿಗೆ ಸ್ಯಾಂಟ್ರೋ ಅಹ್ಮದಾಬಾದ್ನಲ್ಲಿರೋ ಬಗ್ಗೆ ಮಾಹಿತಿ ತಿಳಿದು ಬಂದಿರುತ್ತದೆ.
ಮಂತ್ರಾಲಯಲ್ಲಿ ಸಿಕ್ತು ಮೊದಲ ಸುಳಿವು
ವಕೀಲನ ಹಿಂಬಾಲಿಸಿದ ವೇಳೆ ಸಿಕ್ಕ ಮಾಹಿತಿ ಮೈಸೂರು ಪೊಲೀಸರಿಗೆ ರವಾನೆ ಮಾಡಲಾಗಿತ್ತು. ಈ ಮಾಹಿತಿಯನ್ನು ಮೈಸೂರು ಪೊಲೀಸರು ರಾಮನಗರ ಎಸ್ಪಿ ಸಂತೋಷ್ ಬಾಬು ಅವರಿಗೆ ನೀಡಿದ್ದರು. ರಾಮನಗರ ಎಸ್ಪಿ ಅವರ ಬ್ಯಾಚ್ಮೇಟ್ ಅಹ್ಮದಾಬಾದ್ ಡಿಸಿಪಿ, ಗುಜರಾತ್ನ 2011ರ ಬ್ಯಾಚ್ IPS ಅಧಿಕಾರಿ ಚೈತನ್ಯ ಮಾಂಡಲಿಕ್ ಹೆಚ್ಚು ಕಾಳಜಿ ವಹಿಸಿ ಸ್ಯಾಂಟ್ರೋ ರವಿಗಾಗಿ ಹುಡುಕಾಟ ನಡೆಸಿದ್ದರಂತೆ.
ಕರ್ನಾಟಕ ಪೊಲೀಸರ ಲೀಡ್ ಆಧರಿಸಿ ಹುಡುಕಾಟ ನಡೆಸಿದ ವೇಳೆ ಕೊನೆಗೆ ಸ್ಯಾಂಟ್ರೋ ರವಿ ಇರುವ ಸ್ಥಳವನ್ನು ಗುಜರಾತ್ ಪೊಲೀಸರು ಪತ್ತೆ ಮಾಡಿ ಆತನನ್ನು ಹಿಡಿದು ತಂದಿದ್ದರು. ಆದ್ರೆ ಆರೋಪಿ ಗುರುತು ಮರೆಮಾಚಲು, ವಿಗ್ ದೂರ ಮಾಡಿದ್ದ, ಅಲ್ಲದೇ ಮೀಸೆಯನ್ನು ತೆಗೆದಿದ್ದ. ಆದರೆ ಆತನ ಕಣ್ಣನ್ನು ನೋಡಿ ಪೊಲೀಸರು ಇತನೇ ಆರೋಪಿ ಎಂದು ಗುರುಸಿದ್ದರಂತೆ. ಆ ವೇಳೆಗೆ ಪುಣೆಯಲ್ಲಿದ್ದ ಮೈಸೂರು ಪೊಲೀಸರ ತಂಡ ಗುಜರಾತ್ಗೆ ಶಿಫ್ಟ್ ಆಗಿ ಅಲ್ಲಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆ ತಂದಿದ್ದರು.
ಬೆಂಗಳೂರಿನಿಂದ ಸೀದಾ ಮೈಸೂರಿಗೆ ಸ್ಯಾಂಟ್ರೋ ರವಿ ಶಿಫ್ಟ್
ಇನ್ನು, ನಿನ್ನೆ ತಡರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆರೋಪಿ ಸ್ಯಾಂಟ್ರೋ ರವಿಯನ್ನು ಕರೆ ತಂದಿದ್ದ ಪೊಲೀಸರು, ಮಾಧ್ಯಮಗಳ ಕಣ್ತಪ್ಪಿಸಲು ವಿಐಪಿ ಗೇಟ್ ಮೂಲಕ ಆತನನ್ನು ಕರೆಕೊಂಡು ಹೋಗಿದ್ದರು. ಬೆಂಗಳೂರಿನಿಂದ ನೇರ ಮೈಸೂರಿಗೆ ಆರೋಪಿಯನ್ನು ಶಿಫ್ಟ್ ಮಾಡಲಾಗಿದ್ದು, ಮೈಸೂರಿನಲ್ಲಿ ಅಜ್ಞಾತ ಸ್ಥಳದಲ್ಲಿ ಸ್ಯಾಂಟ್ರೋ ರವಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಯಚೂರು ಎಸ್ಪಿ, ರಾಮನಗರ ಎಸ್ಪಿ, ಮೈಸೂರು ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನವಾಗಿರುವ ಆರೋಪಿಯನ್ನು ಸದ್ಯ ಅಜ್ಞಾತ ಸ್ಥಳದಲ್ಲಿಟ್ಟಿರುವ ಪೊಲೀಸರು, ವಿಚಾರಣೆ ಸಂದರ್ಭದಲ್ಲಿ ಬೇರೆಬೇರೆ ಕೇಸ್ಗಳ ಸಂಬಂಧವೂ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಅಲ್ಲದೇ ಸ್ಯಾಂಟ್ರೋ ರವಿ ಹಳೇ ಕೇಸ್ಗಳನ್ನ ರೀಓಪನ್ ಮಾಡಬಹುದು ಹಾಗೂ ಬೆಂಗಳೂರು ಸಿಸಿಬಿ ಕೂಡ ವಶಕ್ಕೆ ಪಡೆದು ವಿಚಾರಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ