Johnny Depp: ನಟ ಜಾನಿ ಡೆಪ್-ಅಂಬರ್ ಪ್ರಕರಣ, ಜಾನಿ ತಂಡದಲ್ಲಿರುವುದು ನನ್ನ ಅದೃಷ್ಟ ಅಂದಿದ್ಯಾಕೆ ವಕೀಲೆ?

ಜಾನಿ ಮತ್ತು ಅಂಬರ್ ಅವರ ಮಾನನಷ್ಟ ವಿಚಾರಣೆಯು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದು, ತೀರ್ಪು ಜಾನಿಯ ಪರವಾಗಿ ಜೂನ್ 1 ರಂದು ಹೊರಬಿದ್ದಿತ್ತು. ನಟ ಜಾನಿ ಡೆಪ್ ಅವರ ವಕೀಲೆ ಕ್ಯಾಮಿಲ್ಲೆ ವಾಸ್ಕ್ವೆಜ್ ಸಂದರ್ಶನವೊಂದರಲ್ಲಿ ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಯಲ್ಲಿ ಅವರ ಪರ ವಹಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ 'ಅದೃಷ್ಟ' ಎಂದು ಹೇಳಿದ್ದಾರೆ.

ಜಾನಿ ಡೆಪ್ ಮತ್ತು ವಕೀಲೆ ಕ್ಯಾಮಿಲ್ಲೆ ವಾಸ್ಕ್ವೆಜ್

ಜಾನಿ ಡೆಪ್ ಮತ್ತು ವಕೀಲೆ ಕ್ಯಾಮಿಲ್ಲೆ ವಾಸ್ಕ್ವೆಜ್

  • Share this:
ಪೈರೇಟ್ಸ್ ಆಫ್ ದಿ ಕೆರಿಬಿಯನ್ (Pirates of the Caribbean) ಸರಣಿ ಖ್ಯಾತಿಯ ಜಾನಿ ಡೆಪ್ ಮತ್ತು ಅವರ ಪತ್ನಿ ಅಂಬರ್ ಹರ್ಡ್ (Amber Heard) ಜೊತೆಗಿನ ವಿವಾಹ ಬಂಧನವನ್ನು ಕೊನೆಗೊಳಿಸಿ ಇತ್ತೀಚೆಗೆ ಮಾಜಿ ದಂಪತಿಗಳು ಭಾರಿ ಸುದ್ದಿಯಾಗಿದ್ದರು. ಈ ಹಿಂದಿನ ವಿಚಾರಣೆಯಲ್ಲಿ ನಟ ಜಾನಿ ಡೆಪ್ (Johnny Depp) ಅವರ ವಕೀಲ ಕ್ಯಾಮಿಲ್ಲೆ ವಾಸ್ಕ್ವೆಜ್ ಜಾನಿ ಪರ ವಾದ ಮಾಡಿ ಗೆದ್ದಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನನಷ್ಟ ವಿಚಾರಣೆಯಲ್ಲಿ (Defamation trial) ಅವರನ್ನು ಪ್ರತಿನಿಧಿಸಲು ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಸಂದರ್ಶನದ ಸಮಯದಲ್ಲಿ, ಜಾನಿ ಕೂಡ ನನ್ನ ಪ್ರಕರಣದಲ್ಲಿ ನಾನು ನನ್ನ ವಕೀಲರನ್ನಾಗಿ ಕ್ಯಾಮಿಲ್ಲೆಯನ್ನೇ ತನ್ನ ಕಾನೂನು ತಂಡದಲ್ಲಿ ಬಯಸುತ್ತಾನೆ ಎಂದು ಬಹಿರಂಗಪಡಿಸಿದರು.

ಸಂದರ್ಶನವೊಂದರಲ್ಲಿ ವಕೀಲೆ ಕ್ಯಾಮಿಲ್ಲೆ ವಾಸ್ಕ್ವೆಜ್ ಏನು ಹೇಳಿದ್ದಾರೆ?
ಜಾನಿ ಮತ್ತು ಅಂಬರ್ ಅವರ ಮಾನನಷ್ಟ ವಿಚಾರಣೆಯು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದು, ತೀರ್ಪು ಜಾನಿಯ ಪರವಾಗಿ ಜೂನ್ 1 ರಂದು ಹೊರಬಿದ್ದಿತ್ತು. ನಟ ಜಾನಿ ಡೆಪ್ ಅವರ ವಕೀಲೆ ಕ್ಯಾಮಿಲ್ಲೆ ವಾಸ್ಕ್ವೆಜ್ ಸಂದರ್ಶನವೊಂದರಲ್ಲಿ ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಯಲ್ಲಿ ಅವರ ಪರ ವಹಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ 'ಅದೃಷ್ಟ' ಎಂದು ಹೇಳಿದ್ದಾರೆ.ಸಿಬಿಎಸ್‌ ಮಾರ್ನಿಂಗ್ ಅವರು ಆತಿಥೇಯ ಗೇಲ್ ಕಿಂಗ್ ಅವರೊಂದಿಗೆ ಕ್ಯಾಮಿಲ್ಲೆ ವಾಸ್ಕ್ವೆಜ್ ಅವರ ಮುಂಬರುವ ಸಂದರ್ಶನದ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಈ ಸಂವಾದದ ಸಮಯದಲ್ಲಿ ಗೇಲ್ ಅವರು ಕ್ಯಾಮಿಲ್ಲೆ ಅವರನ್ನು ಜಾನಿ ಡೆಪ್ ನಿಮ್ಮನ್ನೇ ನಿರ್ದಿಷ್ಟವಾಗಿ ಅಂಬರ್ ಹರ್ಡ್ ವಿರುದ್ಧದ ತನ್ನ ಉನ್ನತ ಮಟ್ಟದ ಮಾನನಷ್ಟ ಮೊಕದ್ದಮೆ ಪರ ವಕೀಲೆಯಾಗಿ ಏಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಕ್ಯಾಮಿಲ್ಲೆ “ಇದು ಮಹಿಳಾ ದೃಷ್ಟಿಕೋನದ ಪ್ರಕರಣವಾದ್ದರಿಂದ ಜಾನಿ ಡೆಪ್‌ ಅವರ ಕಾನೂನು ತಂಡದಲ್ಲಿ ಮಹಿಳೆಯರು ಇರುವುದು ಬಹು ಮುಖ್ಯವಾಗಿತ್ತು. ಹಾಗಾಗಿ ನನ್ನನ್ನು ಆಯ್ಕೆ ಮಾಡಲಾಯಿತು “ ಎಂದು ಉತ್ತರಿಸಿದರು.

ಅಂತಿಮ ತೀರ್ಪು ಏನಾಗಿದೆ?
ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಜಾನಿಗೆ ತೀರ್ಪು ಅವರ ಪರವಾಗಿ ಬರುವುದರ ಜೊತೆ ಮಿಲಿಯನ್ ಗಟ್ಟಲೇ ಹಣವನ್ನು ನೀಡುವಂತೆ ಪತ್ನಿ ಅಂಬರ್ ಗೆ ಕೋರ್ಟ್ ಆದೇಶ ಮಾಡಿತ್ತು. ಆದರೆ ಮತ್ತೆ ಇದೇ ಕೋರ್ಟ್ ಆದೇಶದ ವಿರುದ್ಧ ಪತ್ನಿ ಅಂಬರ್ ಮರುವಿಚಾರಣೆ ಆಗುವಂತೆ ಮನವಿ ಸಲ್ಲಿಸಿದ್ದಾರೆ

ಇದನ್ನೂ ಓದಿ: Johnny Depp ನಿಂದ ಅಂಬರ್ ಹರ್ಡ್​ಗೆ ಮೋಸ ಆಗಿದ್ಯಂತೆ! ಮದುವೆ ಆದ್ರೆ ನಿಮ್ಮನ್ನೇ ಎಂದಿದ್ಯಾಕೆ ಸೌದಿ ಮೂಲದ ವ್ಯಕ್ತಿ?

ಏನಿದು ಪ್ರಕರಣ:
ಅಂಬರ್ ಹರ್ಡ್ 2018 ರಲ್ಲಿ 'ದಿ ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದಾರೆ. ಇದರಿಂದ ಅವರ ವೃತ್ತಿಜೀವನ ಹಾಳಾಗಿದೆ ಎಂದು ಜಾನಿ ಡೆಪ್ ಅವರು ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಲೇಖನದಲ್ಲಿ, ಅಂಬರ್ ಕೌಟುಂಬಿಕ ಹಿಂಸಾಚಾರದ ಬಗ್ಗೆ ಬರೆಯುತ್ತಾರೆ. ಆದರೆ ಎಲ್ಲಿಯೂ ಜಾನಿ ಡೆಪ್ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ. ಆದರೂ, ಈ ಲೇಖನವು ತನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಜಾನಿ ಡೆಪ್ ಅವರು ಅಂಬರ್ ಅವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದರು.

ಜಾನಿ ಡೆಪ್ ಮತ್ತು ಅಂಬರ್ ಹರ್ಡ್ 2015ರಲ್ಲಿ ವಿವಾಹವಾದರು. ಆದರೆ ಮೇ 2016 ರಲ್ಲಿ ಅವರು ಪರಸ್ಪರ ಬೇರ್ಪಟ್ಟರು. ಜಾನಿ ವಿರುದ್ಧ ಅಂಬರ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಜಾನಿ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಅವರು ಆಗಸ್ಟ್ 2016 ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಜಾನಿ ಡೆಪ್ ಅವರು ತಮ್ಮ ಮಾಜಿ ಪತ್ನಿ ವಿರುದ್ದ ಮಾನನಷ್ಟ ಮೊಕದ್ದಮೆ ಮಾಡಿದ್ದರು. ಇದೀಗ ಪ್ರಕರಣವನ್ನು ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ: Johnny Depp: ಕೇಸ್ ಗೆದ್ದ ಖುಷಿಗೆ ಭಾರತೀಯ ರೆಸ್ಟೊರೆಂಟ್ ನಲ್ಲಿ ಪಾರ್ಟಿ ಮಾಡಿದ ಡೆಪ್, ಲಕ್ಷಗಟ್ಟಲೆ ಬಿಲ್ ಆದ್ರೂ ಡೋಂಟ್ ಕೇರ್!

ಹಾಲಿವುಡ್ ನಟಜಾನಿ ಡೆಪ್ ಹೆಚ್ಚು ಜ್ಯಾಕ್ ಸ್ಪ್ಯಾ ರೋ ಅಂತಾನೇ ಫೇಮಸ್ ಆಗಿದ್ದಾರೆ. ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸರಣಿಯ ಚಿತ್ರ ಗಳಲ್ಲಿ ಜ್ಯಾಕ್ ಸ್ಪ್ಯಾ ರೋ ಆಗಿ ನಟಿಸಿದ್ಧ ಡೆಪ್ ಅಮೇರಿಕಾದ ಖ್ಯಾತ ನಟ, ನಿರ್ಮಾಪಕ ಮತ್ತು ಸಂಗೀತಗಾರ ಕೂಡ ಹೌದು. ಇನ್ನೂ ಅಂಬರ್ ಹರ್ಡ್ ಕೂಡ ಅಮೇರಿಕಾದ ನಟಿ . ಆಲ್ ದಿ ಬಾಯ್ಸ್ ಲವ್ ಮ್ಯಾಂಡಿ ಲೇನ್, ದಿ ವಾರ್ಡ್ ಮತ್ತು ಡ್ರೈವ್ ಆಂಗ್ರಿಯಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
Published by:Ashwini Prabhu
First published: