ಬಾಲಿವುಡ್ನಲ್ಲಿ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತ ಹೇಳಿದರೆ ಸಾಕು ನಟ ಆಮೀರ್ ಖಾನ್ ಕಡೆಗೆ ಮುಖ ಮಾಡುತ್ತಾರೆ ಸಿನಿ ಪ್ರೇಕ್ಷಕರು (Cinema audience) ಮತ್ತು ಆತನ ಅಭಿಮಾನಿಗಳು. ಅಷ್ಟರ ಮಟ್ಟಿಗೆ ಈ ನಟ ಮಾಡುವ ಕೆಲಸಗಳು ಅಚ್ಚುಕಟ್ಟಾಗಿರುತ್ತವೆ ಅಂತಾನೇ ಹೇಳಬಹುದು. ಹೌದು.. ವರ್ಷಕ್ಕೆ ಒಂದೇ ಚಿತ್ರ ಮಾಡಿದರೂ ಅದರಲ್ಲಿರುವ ಪಾತ್ರಕ್ಕೆ ಜೀವ ತುಂಬುವಂತೆ ಎಲ್ಲಾ ರೀತಿಯ ರಿಸರ್ಚ್ (Research) ಮಾಡಿ, ಸಿದ್ದತೆ ಮಾಡಿಕೊಂಡು ಅಷ್ಟೇ ಚೆನ್ನಾಗಿ ನಟಿಸುವ ನಟ ಈತ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಟ (Actor) ಆಮೀರ್ ಖಾನ್ (Amir Khan) ಅವರ ಅಭಿನಯದ ಚಿತ್ರ ಇನ್ನೇನು ಬಿಡುಗಡೆ ಆಗುತ್ತದೆ ಅಂತ ಸುದ್ದಿ ತಿಳಿದರೆ ಸಾಕು ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು ‘ಸಿನಿಮಾ (Cinema) ಯಾವಾಗಪ್ಪಾ ಬಿಡುಗಡೆಯಾಗುತ್ತೆ’ ಅಂತ ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ.
ಈಗಾಗಲೇ ತುಂಬಾನೇ ಸುದ್ದಿ ಮಾಡಿದ ಆಮೀರ್ ಅವರ ಮುಂದಿನ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಬಿಡುಗಡೆಗಾಗಿ ಕಾತುರತೆಯಿಂದ ಕಾಯುತ್ತಿದ್ದಾರೆ ಸಿನಿ ಪ್ರಿಯರು.
ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ದಿನ ಬಿಡುಗಡೆಯಾದ ಚಿತ್ರದ ಟ್ರೈಲರ್
‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಟ್ರೈಲರ್ ಮೇ 29 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದ ದಿನದಂದು ಬಿಡುಗಡೆ ಮಾಡಿದ್ದು ಎಲ್ಲಾ ಸಿನಿ ಪ್ರೇಕ್ಷಕರಿಗೆ ಗೊತ್ತಿರುವ ವಿಚಾರವಾಗಿದೆ. ಇನ್ನೇನು ಚಿತ್ರ ಸಹ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ ಎಂದು ಹೇಳಲಾಗುತ್ತಿದೆ. ನಟ ಆಮೀರ್ ಈ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ ಆರಾಮಾಗಿ ಪ್ರೀಮಿಯರ್ ಶೋ ಅನ್ನು ಬೇರೆ ಬೇರೆ ಚಿತ್ರೋದ್ಯಮದ ಜನಪ್ರಿಯ ನಟ ಮತ್ತು ನಿರ್ದೇಶಕರಿಗೆ ತೋರಿಸಲು ಆಯೋಜಿಸುತ್ತಿದ್ದಾರೆ ಎಂದು ಹೇಳಬಹುದು.
ಆಮೀರ್ ಖಾನ್ ಇತ್ತೀಚೆಗೆ ಹೈದ್ರಾಬಾದ್ಗೆ ಬಂದು ತೆಲುಗು ಚಿತ್ರೋದ್ಯಮದ ಸೆಲೆಬ್ರಿಟಿಗಳಿಗಾಗಿ ತಮ್ಮ ಮುಂಬರುವ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿರುವ ಟಾಲಿವುಡ್ನ ನಟ ನಾಗಚೈತನ್ಯ ಅವರು ಹೈದರಾಬಾದಿನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇವರಷ್ಟೇ ಅಲ್ಲದೆ ಹಿರಿಯ ನಟರಾದ ನಾಗಾರ್ಜುನ ಅಕ್ಕಿನೆನಿ, ಜನಪ್ರಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ, ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಸುಕುಮಾರ್ ಅವರು ಸಹ ಆಮೀರ್ ಮತ್ತು ನಾಗಚೈತನ್ಯ ಅವರೊಂದಿಗೆ ಕುಳಿತುಕೊಂಡು ಚಿತ್ರವನ್ನು ವೀಕ್ಷಿಸಿದರು.
ಇದನ್ನೂ ಓದಿ: Ponniyin Selvan: 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೂ ಎದುರಾಯ್ತು ಸಂಕಷ್ಟ, ನೋಟಿಸ್ ಜಾರಿ ಮಾಡಿದ ಕೋರ್ಟ್
ಈ ಚಿತ್ರದ ಬಿಡುಗಡೆಗೆ ಮುಂಚಿತವಾಗಿ, ಆಮೀರ್ ಖಾನ್ ಹೈದರಾಬಾದ್ನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನವನ್ನು ಚಿರಂಜೀವಿ, ನಾಗ ಚೈತನ್ಯ, ನಾಗಾರ್ಜುನ, ಎಸ್.ಎಸ್.ರಾಜಮೌಳಿ ಮತ್ತು ನಿರ್ದೇಶಕ ಸುಕುಮಾರ್ ಅವರು ನೋಡಿ ತುಂಬಾನೇ ಇಷ್ಟ ಪಟ್ಟಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ
‘ಲಾಲ್ ಸಿಂಗ್ ಚಡ್ಡಾ’ ಚಿತ್ರವು ಮುಂದಿನ ತಿಂಗಳು ಎಂದರೆ ಆಗಸ್ಟ್ 11 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಹಾಲಿವುಡ್ ಚಿತ್ರವಾದ ‘ಫಾರೆಸ್ಟ್ ಗಂಪ್’ ನ ಅಧಿಕೃತ ಹಿಂದಿ ರಿಮೇಕ್ ಆಗಿದೆ.
ಆಮೀರ್ ಖಾನ್ ಮತ್ತು ನಟಿ ಕರೀನಾ ಕಪೂರ್ ಖಾನ್ ಹೊರತಾಗಿ, ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಮೋನಾ ಸಿಂಗ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಇನ್ನೊಂದು ವಿಶೇಷವಾದ ಸಂಗತಿಯೆಂದರೆ ನಟ ಶಾರುಖ್ ಖಾನ್ ಸಹ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Shilpa Shetty: ಯಾವ 5 ಸ್ಟಾರ್ ಹೋಟೆಲ್ ರೂಮ್ಗೂ ಕಡಿಮೆ ಇಲ್ಲ ಶಿಲ್ಪಾ ಶೆಟ್ಟಿ ವ್ಯಾನಿಟಿ ವ್ಯಾನ್, ಏನೇನಿದೆ ಇದರ ಒಳಗಡೆ?
ಮೂಲ ಹಾಲಿವುಡ್ ಚಿತ್ರದಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿದ್ದರು ಮತ್ತು ವರದಿಗಳ ಪ್ರಕಾರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಟಾಮ್ ಅವರಿಗೆ ತೋರಿಸಲು ನಟ ಆಮೀರ್ ತುಂಬಾನೇ ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ