• Home
  • »
  • News
  • »
  • breaking-news
  • »
  • Suicide: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಡೆತ್​ ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

Suicide: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಡೆತ್​ ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಮೃತ ಯುವಕ ಮೋಹನ್​

ಮೃತ ಯುವಕ ಮೋಹನ್​

ಪ್ರೀತಿಸಿ ಹುಡುಗಿ ಸಿಗದ ಹಿನ್ನೆ ಡೆತ್ ನೋಟ್ ಬರೆದಿಟ್ಟು ಜೊತೆಗೆ ತನ್ನ ಮೊಬೈಲ್ ನಲ್ಲಿ ನನ್ನ ಸಾವಿಗೆ ಯಾರು ಕಾರಣ ಎಂದು ರೆಕಾರ್ಡ್ ಮಾಡಿಟ್ಟು ಮೋಹನ್​ ನೇಣಿಗೆ ಶರಣಾಗಿದ್ದಾನೆ.

  • Share this:

ರಾಮನಗರ (ಡಿ.06): ಪ್ರೀತಿಸಿದ ಹುಡುಗಿ (Loved Girl) ಸಿಗೋದಿಲ್ಲ ಎಂದು ಮನನೊಂದ ಯುವಕ ನೇಣಿಗೆ ಶರಣಾಗಿರುವ ಘಟನೆ ಮಾಗಡಿ ತಾಲೂಕಿನ ದೊಡ್ಡ ಸೋಮನ ಹಳ್ಳಿ ಗ್ರಾಮದಲ್ಲಿ (Somanahalli) ನಡೆದಿದೆ. ಮೋಹನ್ (29) ಆತ್ಮಹತ್ಯೆಗೆ (Suicide) ಶರಣಾದ ಯುವಕ. ಕಳೆದ 3 ವರ್ಷಗಳಿಂದಲೂ ಪ್ರೀತಿ ಮಾಡ್ತಿದ್ದ ಮೋಹನ್ (Mohan), ಯುವತಿ ಮನೆಗೆ ಹೋಗಿ ಪ್ರೀತಿಯ ವಿಷಯ ತಿಳಿಸಿದ್ದಾನೆ. ಹುಡುಗಿ ಮನೆಗೆ ಮಗಳ ಪ್ರೀತಿ ವಿಚಾರ ಸಹ ತಿಳಿಸಿದ್ದ ಆದ್ರೆ ಮನೆಯವರು ಮದುವೆ ಮಾಡಿಕೊಡಲು ಒಪ್ಪಿಲ್ಲ ಇದ್ರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.


ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ


ಡೆತ್​ ನೋಟ್​ ಬರೆದಿಟ್ಟು ಯುವಕ ನೇಣಿಗೆ ಶರಣಾಗಿದ್ದಾನೆ. ಯುವತಿಯನ್ನು ಬೇರೆಯವರಿಗೆ ಮದುವೆ ಮಾಡುತ್ತಾರೆ ಎಂದು ನೊಂದಿದ್ದ ಯುವಕ, ಡೆತ್ ನೋಟ್ ಬರೆದಿಟ್ಟು ತನ್ನ ಮೊಬೈಲ್ ನಲ್ಲಿ ನನ್ನ ಸಾವಿಗೆ ಯಾರು ಕಾರಣ ಎಂದು ರೆಕಾರ್ಡ್ ಮಾಡಿಟ್ಟು ಮೋಹನ್​ ನೇಣಿಗೆ ಶರಣಾಗಿದ್ದಾನೆ.




ಮಾಗಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ


ಮೃತ ಯುವಕನಿಂದ ಹುಡುಗಿ ಮನೆಯವರು ಹಣ ಪಡೆದಿದ್ದ ಆರೋಪ ಕೂಡ ಕೇಳಿ ಬಂದಿದೆ. ಈ ಸಂಬಂಧ ಮೃತ ಯುವಕನ ಸಂಬಂಧಿಕರು ಠಾಣೆಗೆ ದೂರು ನೀಡಿದ್ದಾರೆ.  ಈ ಸಂಬಂಧ ಮಾಗಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ಯುವಕ ಆತ್ಮಹತ್ಯೆ 


ಬೆಂಗಳೂರು: ಪ್ರೀತಿಸಿದ ಯುವತಿ (Girl) ಕೈಕೊಟ್ಟಳು, ಮೋಸ ಮಾಡಿದಳು ಅಂತ ನೊಂದು ಯುವಕನೋರ್ವ (Boy) ಆತ್ಮಹತ್ಯೆಗೆ (Suicide) ಶರಣಾಗಿದ್ದ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿವಾಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Madiwala Station Limit) ನಡೆದಿತ್ತು. ಮಣಿಕಂಠ ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಈತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾ ಇದ್ದು, ಇತ್ತೀಚಿಗೆ ಆಕೆ ಈತನನ್ನು ತೊರೆದು ಹೋಗಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ನೊಂದಿದ್ದ ಮಣಿಕಂಠ ತನ್ನ ರೂಮ್‌ನಲ್ಲೇ ನೇಣಿಗೆ (Hanging) ಶರಣಾಗಿದ್ದ. ಸಾಯುವ ಮುನ್ನ ಆಡಿಯೋ (Audio) ಮಾಡಿದ್ದು, ಅದರಲ್ಲಿ ತನ್ನ ದುಃಖವನ್ನು ತೋಡಿಕೊಂಡಿದ್ದಾನೆ.


ಮನೆಯ ಕೋಣೆಯಲ್ಲೇ ನೇಣಿಗೆ ಏರಿದ ಯುವಕ


ಮಡಿವಾಳದ ಮಾರುತಿನಗರ ನಿವಾಸಿ ಮಣಿಕಂಠ ಎಂಬ ಯುವಕ ತನ್ನ ಮನೆಯ ಕೋಣೆಯಲ್ಲಿಯೇ ನೇಣಿಗೆ ಶರಣಾಗಿದ್ದ. ಎಂದಿನಂತೆ ಮನೆಗೆ ಬಂದ ಮಣಿಕಂಠ, ಮಲಗುವುದಾಗಿ ರೂಮ್​ಗೆ ಹೋಗಿದ್ದ. ಬಳಿಕ ಎಷ್ಟು ಹೊತ್ತಾದರೂ ರೂಮಿಂದ ಆಚೆ ಬರಲಿಲ್ಲ. ಮನೆಯವರು ಬಾಗಿಲು ತಟ್ಟಿದರೂ‌ ಕದ ತೆರೆಯದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಬಳಿಕ ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಹೋಗಿ ನೋಡಿದಾಗ ಮಣಿಕಂಠ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.


ಇಬ್ಬರ ನಡುವೆ ವೈಮನಸ್ಸು‌


ಯುವಕ ಮಣಿಕಂಠ ಕಳೆದ‌ ಆರು ತಿಂಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ‌.ಈ ಪ್ರೀತಿಗೆ ಯುವತಿಯಿಂದಲೂ‌ ಒಪ್ಪಿಗೆಯಿತ್ತು. ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು‌ ಮೂಡಿ, ಇಬ್ಬರೂ ದೂರವಾಗಿದ್ದರು ಎನ್ನಲಾಗ್ತಿದೆ. ಇದೇ ಕಾರಣಕ್ಕೆ ನೊಂದಿದ್ದ. ಇದೇ ನೋವಿನಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ: Crime News: ಬೆಂಗಳೂರಿನಲ್ಲೊಂದು ಬಂಟಿ ಔರ್ ಬಬ್ಲಿ ಜೋಡಿ! ಈ ಕಳ್ಳ ಪ್ರೇಮಿಗಳ ಕಥೆ ಕೇಳಿದ್ರೆ ಶಾಕ್ ಆಗ್ತೀರಿ


ಸಾಯುವ ಮುನ್ನ ಆಡಿಯೋ ಮಾಡಿದ್ದನಾ ಯುವಕ?


ಇನ್ನು ಯುವಕ ಮಣಿಕಂಠ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದರಲ್ಲಿ ತನ್ನ ಪ್ರೀತಿಯ ಬಗ್ಗೆ, ಪ್ರೇಮ ವೈಫಲ್ಯದ ಬಗ್ಗೆ ಹೇಳಿ ಕೊಂಡಿದ್ದ ಎನ್ನಲಾಗುತ್ತಿದೆ. ಇನ್ನು ಮಣಿಕಂಠ ಆತ್ಮಹತ್ಯೆ ಸಂಬಂಧ ಮಡಿವಾಳ‌ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Published by:ಪಾವನ ಎಚ್ ಎಸ್
First published: