Building Collapse: ರಾಜಧಾನಿಯಲ್ಲಿ ಕುಸಿದೇ ಹೋಯ್ತು 3 ಅಂತಸ್ತಿನ ಕಟ್ಟಡ! ಸಿಹಿ ನಿದ್ದೆಯಲ್ಲಿದ್ದಾಗಲೇ ದುರಂತ!

ನಿನ್ನೆ ವರಮಹಾಲಕ್ಷ್ಮೀ ಹಬ್ಬವಿದ್ದು ಸಂಜೆವರೆಗೂ ಈ ರಸ್ತೆಯಲ್ಲಿ ಜನರ ಓಡಾಟ ಜಾಸ್ತಿಯಾಗಿತ್ತು. ಆಗ ಏನಾದರೂ ಕಟ್ಟಡ ಕುಸಿದು ಬಿದ್ದಿದ್ದರೆ ದೊಡ್ಡ ದುರಂತವೇ ನಡೆಯುತ್ತಿತ್ತು ಅಂತ ಜನ ಮಾತನಾಡುತ್ತಿದ್ದಾರೆ.

ಕುಸಿದು ಬಿದ್ದ ಕಟ್ಟಡ

ಕುಸಿದು ಬಿದ್ದ ಕಟ್ಟಡ

  • News18
  • Last Updated :
  • Share this:
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಳೆ (Rain) ಆರ್ಭಟ ಮುಂದುವರೆದಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ 3 ಅಂತಸ್ತಿನ ಕಟ್ಟಡ (Building)  ಕುಸಿದು ಬಿದ್ದಿದೆ. ಕೆಆರ್ ಮಾರುಕಟ್ಟೆ (KR Market) ಠಾಣಾ ವ್ಯಾಪ್ತಿಯ ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಭಂಡಾರಿ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದ್ದು, ಇಂದು ಬೆಳಗ್ಗಿನ ಜಾವವೇ ಕುಸಿದು ಬಿದ್ದಿದೆ. ನಿನ್ನೆ ವರಮಹಾಲಕ್ಷ್ಮೀ ಹಬ್ಬವಿದ್ದು (Varamahalakshmi Festival) ಸಂಜೆವರೆಗೂ ಈ ರಸ್ತೆಯಲ್ಲಿ ಜನರ ಓಡಾಟ ಜಾಸ್ತಿಯಾಗಿತ್ತು. ಆಗ ಏನಾದರೂ ಕಟ್ಟಡ ಕುಸಿದು ಬಿದ್ದಿದ್ದರೆ ದೊಡ್ಡ ದುರಂತವೇ ನಡೆಯುತ್ತಿತ್ತು ಅಂತ ಜನ ಮಾತನಾಡುತ್ತಿದ್ದಾರೆ. ಅದೃಷ್ಟವಶಾತ್ ಬೆಳಗ್ಗಿನ ಜಾವ ಕಟ್ಟಡ ಕುಸಿದು ಬಿದ್ದರೂ, ಅದರಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕುಸಿದ ಕಟ್ಟಡ

ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಇರುವ ಈ 3 ಅಂತಸ್ತಿನ ಕಟ್ಟಡವು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಪ್ಲಾಸ್ಟಿಕ್ ಮತ್ತು ಗಿಫ್ಟ್ ಶಾಪ್ ಗಳಿದ್ದ ಕಟ್ಟಡ ಇದಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ‌. ಘಟನೆ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ದೌಡಾಯಿಸಿದ್ದು ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿತು.

10 ವರ್ಷಗಳ ಹಿಂದೆಯೇ ಕಟ್ಟಡ ಮಾಲೀಕರಿಗೆ ನೋಟಿಸ್

ಸುಮಾರು10 ವರ್ಷಗಳ ಹಿಂದೆ ಈ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ನೊಟೀಸ್ ನೀಡಿತ್ತು. ಕಟ್ಟಡ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳು ನೊಟೀಸ್ ನೀಡಿದ್ದರು. ಆದರೆ ಕಟ್ಟಡವು 4 ಮಂದಿ ಮಾಲೀಕರ ಒಡೆತನಕ್ಕೆ ಸೇರಿತ್ತು. ಹೀಗಾಗಿ 4 ಮಂದಿ ಮಾಲೀಕರ ಮನಸ್ತಾಪದಿಂದ ಕಟ್ಟಡ ತೆರವು ಮಾಡದೇ ಹಾಗೆ ಉಳಿದಿತ್ತು.

ಇದನ್ನೂ ಓದಿ: Crime News: ಒಮ್ಮೆ ಮಗು ಬಿಟ್ಟು ಬಂದಿದ್ದಳು, ನಿನ್ನೆ ಮಹಡಿಯಿಂದ ಎಸೆದು ಕೊಂದಳು! ಪಾಪಿ ತಾಯಿಯ ಪಾಪದ ಕೃತ್ಯ ಬೆಳಕಿಗೆ

ಎಲ್ಲರೂ ಮನೆಗೆ ತೆರಳಿದ್ದ ವೇಳೆ ಘಟನೆ

ಕಟ್ಟಡದಲ್ಲಿ 3 ಅಂಗಡಿಗಳಿದ್ದು, ಅದರಲ್ಲಿ ಸುಮಾರು 20 ಜನ ಕೆಲಸ ಮಾಡ್ತಾ ಇದ್ರು. ನಿನ್ನೆ ರಾತ್ರಿವರೆಗೂ ಕಾರ್ಮಿಕರೆಲ್ಲ ಕೆಲಸ ಮಾಡುತ್ತಿದ್ದರು. ಆದರೆ ತಡರಾತ್ರಿ ಆಗಿರುವುದರಿಂದ ಎಲ್ಲಾ ಕೆಲಸ ಮುಗಿಸಿ ಮನೆಗೆ ತೆರಳಿದ್ದರು.

ತಪ್ಪಿದ ಭಾರೀ ದುರಂತ

ನಿನ್ನೆ ವರಮಹಾಲಕ್ಷ್ಮೀ ಹಬ್ಬವಿದ್ದು ಸಂಜೆವರೆಗೂ ಈ ರಸ್ತೆಯಲ್ಲಿ ಜನರ ಓಡಾಟ ಜಾಸ್ತಿಯಾಗಿತ್ತು. ಆಗ ಏನಾದರೂ ಕಟ್ಟಡ ಕುಸಿದು ಬಿದ್ದಿದ್ದರೆ ದೊಡ್ಡ ದುರಂತವೇ ನಡೆಯುತ್ತಿತ್ತು ಅಂತ ಜನ ಮಾತನಾಡುತ್ತಿದ್ದಾರೆ. ಅದೃಷ್ಟವಶಾತ್ ಬೆಳಗ್ಗಿನ ಜಾವ ಕಟ್ಟಡ ಕುಸಿದು ಬಿದ್ದರೂ, ಅದರಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: Heavy Rain: ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ, ಕೇವಲ ಒಂದೇ ತಿಂಗಳಲ್ಲಿ 1 ಸಾವಿರ ಕೋಟಿಗೂ ಹೆಚ್ಚು ನಷ್ಟ!

ಕಟ್ಟಡ ಗಟ್ಟಿ ಮುಟ್ಟಾಗಿತ್ತು ಎಂದ ಮಾಲೀಕ

ಕಟ್ಟಡದಲ್ಲಿ ಒಂದೊಂದು ಮಹಡಿ ಒಬ್ಬರು ತಗೊಂಡಿದ್ರು. ನಾವು ಕೆಳ ಮಹಡಿಯಲ್ಲಿ ಅಂಗಡಿ ಇಟ್ಟಿದ್ದೇವೆ. ಮೇಲಿನ ಮಹಡಿಯಲ್ಲಿ ಯಾರು ಇರಲಿಲ್ಲ, ಹೀಗಾಗಿ  ಖಾಲಿ ಇತ್ತು. ಮಳೆ ಬಂದಾಗ ಹೀಗೆ ಆಗಿದೆ. ಹಳೆ ಕಟ್ಟಡವಾದ್ರು ಗಟ್ಟಿಯಾಗಿತ್ತು ಅಂತ ಕಟ್ಟಡದ ಮಾಲೀಕರಲ್ಲಿ ಒಬ್ಬರಾದ ಪ್ರತೀಕ್ ಎನ್ನುವವರು ಹೇಳಿದ್ದಾರೆ, ಇನ್ನು ದುರಂತದಿಂದ ಸುಮಾರು 70 ಲಕ್ಷದಷ್ಟು ನಷ್ಟ ಆಗಿದೆ ಅಂತ ಅಂದಾಜಿಸಲಾಗಿದೆ.
Published by:Annappa Achari
First published: