• Home
  • »
  • News
  • »
  • breaking-news
  • »
  • Bomb Threat Message: ಡಿಕೆಶಿ ಮಾಲೀಕತ್ವದ ಶಾಲೆಗೆ ಬಾಂಬ್ ಬೆದರಿಕೆ! ಮಕ್ಕಳು, ಪೋಷಕರಲ್ಲಿ ಆತಂಕ

Bomb Threat Message: ಡಿಕೆಶಿ ಮಾಲೀಕತ್ವದ ಶಾಲೆಗೆ ಬಾಂಬ್ ಬೆದರಿಕೆ! ಮಕ್ಕಳು, ಪೋಷಕರಲ್ಲಿ ಆತಂಕ

ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

ಬೆಂಗಳೂರಿನ ಆರ್‌ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ನಿನ್ನೆ ಸಂಜೆಯೇ ಶಾಲೆಯ ಮೇಲ್ ಐಡಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದಾರೆ.

  • Share this:

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ (Bengaluru) ಖಾಸಗಿ ಶಾಲೆಗಳಿಗೆ (Privet Schools) ಬಾಂಬ್ ಬೆದರಿಕೆ ಕರೆ (Bomb threat call) ಬಂದಿತ್ತು. ಇದರಿಂದ ಶಿಕ್ಷಕರು, ಪೋಷಕರು, ಮಕ್ಕಳು ಆತಂಕಕ್ಕೆ ಒಳಗಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಪರಿಶೀಲನೆ ವೇಳೆ ಅವೆಲ್ಲ ಹುಸಿ ಬಾಂಬ್ ಕರೆ (Hoax Bomb Call) ಎನ್ನುವುದು ಸಾಬೀತಾಗಿತ್ತು. ಇದೀಗ ಬೆಂಗಳೂರು ನಗರದ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಆರ್‌ಆರ್‌ ನಗರದಲ್ಲಿರುವ (RR Nagar) ಡಿಕೆ ಶಿವಕುಮಾರ್ (DK Shivakumar) ಮಾಲೀಕತ್ವದ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ (Email) ಬಂದಿದೆ. ನಿನ್ನೆ ಇಮೇಲ್ ಮೂಲಕ ಕಿಡಿಗೇಡಿಗಳು ಬೆದರಿಕೆ ಹಾಕಿದ್ದು, ಇದೀಗ ಶಿಕ್ಷಕರು, ಪೋಷಕರು ಹಾಗೂ ಮಕ್ಕಳಲ್ಲಿ ಆತಂಕ ಶುರುವಾಗಿದೆ.  


ಡಿಕೆ ಶಿವಕುಮಾರ್ ಮಾಲೀಕತ್ವದ ಶಾಲೆಗೆ ಬಾಂಬ್ ಬೆದರಿಕೆ


ಬೆಂಗಳೂರಿನ ಆರ್‌ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ನಿನ್ನೆ ಸಂಜೆಯೇ ಶಾಲೆಯ ಮೇಲ್ ಐಡಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದಾರೆ. ಇಂದು ಬೆಳಗ್ಗೆ ಶಾಲೆಯ ಇ-ಮೇಲ್ ಚೆಕ್ ಮಾಡಿದ ವೇಳೆ ಬೆದರಿಕೆ ಪತ್ರ ಬಂದಿರುವುದು ಪತ್ತೆಯಾಗಿದೆ. ಈ ಶಾಲೆಯು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಾಲೀಕತ್ವದ್ದು ಎನ್ನಲಾಗಿದೆ.




ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ದೌಡು


ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರ್ ಆರ್ ನಗರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ರು. ಮಕ್ಕಳನ್ನ ಸ್ಥಳಾಂತರ ಮಾಡಿ, ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ, ಶಾಲಾ ಆವರಣದಲ್ಲಿ ಎರಡು ತಂಡಗಳು ಪರಿಶೀಲನೆ ನಡೆಸುತ್ತಿವೆ.


ಇದನ್ನೂ ಓದಿ: Bengaluru Mosque: ಒತ್ತುವರಿ ಆರೋಪ, ಮಸೀದಿ ಕೆಡವಲು ಮುಂದಾದ ಬಿಬಿಎಂಪಿ


ಪೋಷಕರು, ಮಕ್ಕಳಲ್ಲಿ ಆತಂಕ


ಬಾಂಬ್ ಇಟ್ಟಿದ್ದಾರಂತೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಸುದ್ದಿ ತಿಳಿದ ಪೋಷಕರು ಆತಂಕದಿಂದಲೇ ಶಾಲೆಗೆ ಓಡೋಡಿ ಬಂದಿದ್ದಾರೆ. ಇನ್ನು ಶಾಲಾ ಸಿಬ್ಬಂದಿ ಯೂನಿಟ್ 1 ನಿಂದ ಯೂನಿಟ್ 2ಕ್ಕೆ ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ. ಇದೀಗ ಶಾಲೆಗೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.


ಶಾಲೆಗೆ ದೌಡಾಯಿಸಿದ ಡಿಕೆಶಿ ಪುತ್ರಿ ಐಶ್ವರ್ಯ


ತಮ್ಮ ಮಾಲೀಕತ್ವದ ಶಾಲೆಯಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಇಮೇಲ್ ವಿಚಾರ ತಿಳಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಕೂಡ ಶಾಲೆಗೆ ದೌಡಾಯಿಸಿದ್ದಾರೆ. ಶಾಲಾ ಸಿಬ್ಬಂದಿಯಿಂದ ಐಶ್ವರ್ಯಾ ಮಾಹಿತಿ ಪಡೆಯುತ್ತಿದ್ದಾರೆ.


ಇದನ್ನೂ ಓದಿ: Selfie Death: ಸೆಲ್ಫಿ ಹುಚ್ಚಾಟ, ನೀರಸಾಗರದಲ್ಲಿ ಕೊಚ್ಚಿ ಹೋದ ಯುವಕ


ಈ ಬಗ್ಗೆ ಗೃಹಸಚಿವರು ಹೇಳಿದ್ದೇನು?


ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆರ್ ಆರ್ ನಗರದ ಖಾಸಗಿ ಕಾಲೇಜ್ ಗೆ ಬಾಂಬ್ ಕರೆ ಬಂದಿದೆ. ಇದರ ಬಗ್ಗೆ ಪೊಲೀಸ್ರು ಕ್ರಮವಹಿಸಿದ್ದಾರೆ. ಬಾಂಬ್ ಸ್ಕ್ವಾಡ್ ಅಲ್ಲಿಗೆ ಹೋಗಿದೆ, ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಯಾವುದೇ ಆತಂಕ ಪಡುವುದು ಅಗತ್ಯವಿಲ್ಲ. ಈ ಹಿಂದೆಯೂ ಶಾಲೆಗಳಿಗೆ ಇಂತಹ ಕರೆ ಬಂದಿತ್ತು, ಆದರೆ ಆ ಬಳಿಕ ಬೆದರಿಕೆ ಕರೆಗಳು ಹುಸಿಯಾಗಿದ್ವು. ಇವತ್ತು ಕೂಡ ಬೆದರಿಕೆ ಕರೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಅಂತ ಹೇಳಿದ್ದಾರೆ.

Published by:Annappa Achari
First published: