ಸದ್ಯ ಟೂರಿಸಂಗೆ ಹೇಳಿ ಮಾಡಿಸಿದ ಕಾಲ, ಉಡುಪಿಯ ಮಲ್ಪೆ ಬೀಚ್ (Malpe Beach) ಗಂತೂ ಲಕ್ಷಾಂತರ ಜನ ಭೇಟಿ ಕೊಡುತ್ತಿದ್ದಾರೆ. ಹೊರ ಜಿಲ್ಲೆ ಹೊರ ರಾಜ್ಯದಿಂದ ವಿದ್ಯಾರ್ಥಿಗಳು, ಪ್ರವಾಸಿಗರು ಹರಿದುಬರುತ್ತಿದ್ದಾರೆ. ಮಲ್ಪೆ ಬೀಚ್ಗೆ ಬಂದವರಿಗೆ ಥ್ರಿಲ್ ಕೊಡೋದಕ್ಕೆ ಫ್ಲೋಟಿಂಗ್ ಬೀಚ್ ಸಿದ್ಧವಾಗಿದೆ. ಜಿಲ್ಲೆಯ ಪ್ರಮುಖ ಪ್ರವಾಸಿತಾಣದಲ್ಲೊಂದಾದ ಮಲ್ಪೆಯಲ್ಲಿ ಇದೀಗ ಜನವೋ ಜನ.. ಹೊರ ಜಿಲ್ಲೆ ಹೊರ ರಾಜ್ಯದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು (Student), ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಮಲ್ಪೆ ಬೀಚ್ ಗೆ ಹರಿದುಬರುತ್ತಿದ್ದಾರೆ. ಸಮುದ್ರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ಆಗಮಿಸುವ ಪ್ರವಾಸಿಗರಿಗೆ ಫ್ಲೋಟಿಂಗ್ ಬ್ರಿಡ್ಜ್ (Floating Bridge) ಮತ್ತಷ್ಟು ಹೊಸ ಅನುಭವ ನೀಡಲಿದೆ.
ಕಳೆದ ವರ್ಷ ಸುದೇಶ್, ಧನಂಜಯ ಹಾಗೂ ಶೇಖರ್ ಎಂಬ ಮೂವರು ಉದ್ಯಮಿಗಳು ಥಾಯ್ ಲ್ಯಾಂಡ್ ನಿಂದ 80 ಲಕ್ಷ ಕೊಟ್ಟು ತೇಲುವ ಸೇತುವೆ ನಿರ್ಮಿಸಿದ್ದರು. ಉದ್ಘಾಟನೆ ಕೂಡ ಅದ್ದೂರಿಯಾಗಿ ನಡೆದಿತ್ತು. ಶಾಸಕ ರಘುಪತಿ ಭಟ್ ಸೇರಿದಂತೆ ಮಾಜಿ ಸಚಿವರು, ಸ್ಥಳೀಯಾಡಳಿತ ಅಧಿಕಾರಿಗಳೆಲ್ಲಾ ತೂಗು ಸೇತುವೆ ಅನುಭವ ಪಡೆದು ಎಂಜಾಯ್ ಮಾಡಿದ್ರು.
ಮುರಿದು ಬಿದ್ದಿದ್ದ ಸೇತುವೆ
ಶಾಸಕ ರಘುಪತಿ ಭಟ್ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದರು. ಕಳೆದ ವರ್ಷ ತೇಲುವ ಸೇತುವೆ ಉದ್ಘಾಟನೆ ವೇಳೆ ಉಡುಪಿಯ ಜನತೆ ಹಾಗೂ ಪ್ರವಾಸಿಗರೆಲ್ಲಾ ತೂಗು ಸೇತುವೆ ಮೇಲೆ ಖುಷಿಯಲ್ಲಿ ತೇಲಿದ್ರು. ಇದೇ ಸೇತುವೆ ಉದ್ಘಾಟನೆಗೊಂಡು ಎರಡೇ ದಿನಕ್ಕೆ ಅಸಾನಿ ಚಂಡಮಾರುತಕ್ಕೆ ತುಂಡು ತುಂಡಾಗಿ ನೀರುಪಾಲಾಗಿತ್ತು. ಅಕ್ಷರಶಃ ಸೇತುವೆ ಮೇಲೆ ಸಮಯ ಕಳೆದವರೆಲ್ಲ ಸೇತುವೆ ಸ್ಥಿತಿ ಕಂಡು ಶಾಕ್ ಆಗಿದ್ರು. ಈ ಮೂಲಕ ದೇಶಾದ್ಯಂತ ಕುಸಿತ ಬ್ರಿಡ್ಜ್ ಸದ್ದು ಮಾಡಿತ್ತು.
ಸುರಕ್ಷತಾ ಕ್ರಮದೊಂದಿಗೆ ಮತ್ತೆ ಸೇತುವೆ ನಿರ್ಮಾಣ
ಆದರೆ ಈ ಬಾರಿ ಸುಧಾರಿತ ವ್ಯವಸ್ಥೆಗಳೊಂದಿಗೆ ಹೆಚ್ಚಿನ ಸುರಕ್ಷತಾ ಕ್ರಮಗಳ ಜೊತೆ 150 ಅಡಿ ಉದ್ದದ ತೇಲುವ ಸೇತುವೆ ಸಿದ್ಧವಾಗಿದೆ. ಮತ್ತೆ ಈ 3 ಉದ್ಯಮಿಗಳು ಈ ಬಾರಿ ಮುಂಬೈನ ಮೆರೈನ್ ಎಂಬ ಕಂಪನಿಯಿಂದ 80 ಲಕ್ಷಕ್ಕೆ ಖರೀದಿಸಿ ನಿರ್ಮಿಸಿದ್ದಾರೆ. ಸ್ವತಃ ಮೆರೈನ್ ಕಂಪೆನಿ ಸಿಬ್ಬಂದಿಗಳೇ ಬೀಚ್ ನಲ್ಲಿ ತಯಾರಿಸಿ 3 ತಿಂಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸಿದ್ದಾರೆ.
3 ತಿಂಗಳ ಕಾಲ ಪ್ರಯೋಗಿಕ ಪರಿಶೀಲನೆ
ಈ ಸೇತುವೆಯ ಬ್ಲಾಕ್ ಗಳು ಮಾಂಡೌಸ್ ಚಂಡಮಾರುತಕ್ಕೂ ಹಾನಿಯಾಗಿಲ್ಲ. ಹೆಚ್ಚು ದೃಢವಾದ ಜೋಡಣೆಯಿಂದ ಈ ಸೇತುವೆ ಗಟ್ಟಿಯಾಗಿದೆ. ಕೇರಳ ಬಿಟ್ಟರೆ ಇಡೀ ದೇಶದಲ್ಲಿ ಮಲ್ಪೆ ಬೀಚ್ ನಲ್ಲಿ ಮಾತ್ರ ನಿರ್ಮಾಣಗೊಂಡಿರುವ ಸೇತುವೆ ಇದಾಗಿದೆ.
ಇದನ್ನೂ ಓದಿ: Nikhil Kumaraswamy: ನನ್ನ ಮಗ ನಿಖಿಲ್ ಕುಮಾರಸ್ವಾಮಿಯೇ ರಾಮನಗರ JDS ಅಭ್ಯರ್ಥಿ! ಅನಿತಾ ಕುಮಾರಸ್ವಾಮಿ ಘೋಷಣೆ
ಜಿಲ್ಲಾಡಳಿತ ಕೂಡ ಸುರಕ್ಷತಾ ಕ್ರಮ ಕೈಗೊಂಡಿದೆ
ಇನ್ಮುಂದೆ ದೇಶದ ಎರಡನೇ ತೇಲುವ ಸೇತುವೆಯ ಮೇಲೆ ನಿಂತು ಪ್ರವಾಸಿಗರು ಸಖತ್ ಮಜಾ ಮಾಡಬಹುದು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವ ಕಾರಣ ಜಿಲ್ಲಾಡಳಿತ ಕೂಡ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕಿದೆ. ಸೇತುವೆಗೆ ಗ್ಯಾರೆಂಟಿ ಇದ್ರೂ ಪ್ರವಾಸಿಗರ ಸುರಕ್ಷತೆ ಕಡೆ ಹೆಚ್ಚಿನ ನಿಗಾ ಇಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ