ಯಾದಗಿರಿ: ಹೆತ್ತ ಮಗಳನ್ನು (daughter) ಪ್ರೀತಿಯಿಂದ ಬೆಳೆಸಬೇಕಾದ ಹೆತ್ತ ತಂದೆ (father) ಈಗ ಮಗಳ ಪಾಲಿಗೆ ವಿಲನ್ (villain) ಆಗಿದ್ದಾನೆ. ಅಳುವ ಪುಟ್ಟ ಹೆಣ್ಣು ಮಗಳಿಗೆ (baby girl) ನಗು ನಗುತ್ತಾ ಇದ್ದು ಆಟವಾಡಿಸಬೇಕಾದ ತಂದೆ, ತನ್ನ ಕೈಯಿಂದಲೇ ಕೊಲೆ (Murder) ಮಾಡಿದ್ದಾನೆ. ಕುಡಿದ ನಶೆಯಲ್ಲಿ (drunkenness) ಮಗಳನ್ನೆ ಪಾಪಿ ತಂದೆ ಬಲಿ ಪಡೆದಿದ್ದಾನೆ. ಕೊಲೆ ಮಾಡಿ ಕಥೆ ಕಟ್ಟಿದ್ದ ಪಾಪಿ ಈಗ ಜೈಲು (Jail) ಸೇರಿದ್ದಾನೆ. ಯಾದಗಿರಿ (Yadagiri) ಜಿಲ್ಲೆಯ ಗುರುಮಿಠಕಲ್ (Gurmithakal) ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಕುಡುಕ ತಂದೆಯೊಬ್ಬ ತನ್ನ 9 ತಿಂಗಳ ಮಗುವನ್ನು (Baby) ಕೊಲೆ ಮಾಡಿದ್ದಾನೆ. ಆಕೆ ಅತ್ತಳು ಎಂಬ ಕಾರಣಕ್ಕೆ ಸಮಾಧಾನ ಮಾಡುವುದನ್ನು ಬಿಟ್ಟು, ಕೊಲೆ ಮಾಡಿದ್ದಾನೆ. ಮಗಳ ಕೊರಳಲ್ಲಿದ್ದ ದಾರವನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕುಡುಕ ತಂದೆಯಿಂದ ಮಗುವಿನ ಕೊಲೆ
ಸಾವಿತ್ರಮ್ಮ ಹಾಗೂ ರಾಮು ದಂಪತಿಗಳು ಊರಲ್ಲಿ ಕಷ್ಟ ನಷ್ಟದ ನಡುವೆ ಬದುಕು ನಡೆಸುತ್ತಿದ್ದರು. ಮದುವೆಯಾಗಿ ಮೂರು ವರ್ಷವಾಗಿದೆ. ದಂಪತಿಗಳಿಗೆ 9 ತಿಂಗಳ ತನುಶ್ರೀ ಎಂಬ ಮಗಳಿದ್ದಳು. ಪತಿರಾಯ ರಾಮು ಮದ್ಯವೇಸನಿಯಾಗಿದ್ದು, ಹೆಂಡತಿ ಸಾವಿತ್ರಮ್ಮನೇ ಕೂಲಿ ನಾಲಿ ಮಾಡಿ ಮನೆ ನಡೆಸುವ ಜವಾಬ್ದಾರಿ ಹೊತ್ತಿದ್ದಾಳೆ. ಆದರೆ ಇದೀಗ ರಾಮುನಿನ ಕುಡಿತದ ಚಟವು ಏನೂ ಅರಿಯದ ಪುಟ್ಟ ಮಗಳನ್ನೇ ಬಲಿ ಪಡೆದಿದೆ.
ತಂದೆ ಬಳಿ ಮಗಳನ್ನು ಬಿಟ್ಟು ಹೋಗಿದ್ದ ತಾಯಿ
ಮಗಳು ಒಂದೇ ಅಳುತ್ತಿದ್ದಾಳೆಂದು ಹೆಂಡತಿಯು ಕೂಲಿ ಹೊಗಲು ನಿರಾಕರಿಸಿದ್ದಾಳೆ. ಆದರೆ, ಕುಡುಕ ಗಂಡ ರಾಮು, ನೀನು ಕೂಲಿ ಕೆಲಸಕ್ಕೆ ಹೋಗದೆ ಇದ್ದರೆ ಮನೆ ಹೇಗೆ ನಡೆಯುತ್ತದೆ. ಮಗಳನ್ನು ನಾನೆ ಎತ್ತಿಕೊಂಡು ಇರುತ್ತೇನೆ. ನೀನು ಹತ್ತಿ ಬಿಡಿಸಲು ಹೋಗು ಎಂದು ಹೇಳುತ್ತಾನೆ. ನಂತರ ಪತ್ನಿ ಸಾವಿತ್ರಮ್ಮ ಆಯ್ತು ಎಂದು ಹೇಳಿ ಮಗಳಿಗೆ ಹಾಲು ಕುಡಿಸಿ ಕೂಲಿ ಕೆಲಸಕ್ಕೆ ಹೋಗುತ್ತಾಳೆ.
ಇದನ್ನೂ ಓದಿ: Facebook Cheating: ನಟಿ ಕೀರ್ತಿ ಸುರೇಶ್ ಫೇಕ್ ಫೋಟೋಗೆ ಮರುಳಾದ ಯುವಕ! 40 ಲಕ್ಷ ವಂಚಿಸಿದ್ದ ಕಿಲಾಡಿ ಆಂಟಿಗೆ ಗಂಡನೂ ಸಾಥ್!
ಕುಡಿತ ದಾಸನಾಗಿದ್ದ ತಂದೆ ಮಟ ಮಟ ಮಧ್ಯಾಹ್ನವೇ ಮನೆಗೆ ಮದ್ಯ ತಂದು, ಅದನ್ನು ಕುಡಿಯೋದಕ್ಕೆ ಮುಂದಾಗಿದ್ದಾನೆ. ಆಗ ಮನೆಯಲ್ಲಿ ಮಗಳು ನಿದ್ದೆ ಮಾಡದೆ ಜೋರಾಗಿ ಅಳುವುದಕ್ಕೆ ಶುರು ಮಾಡಿದ್ದಾಳೆ. ಹೆಣ್ಣು ಮಗು ಇದೆ ಎನ್ನುವ ಕಾರಣವೂ ಒಂದಾದರೇ, ನಿದ್ದೆ ಮಾಡದೇ ಒಂದೇ ಸಮನೆ ಅಳುತ್ತಾ ಇರುವುದಕ್ಕೆ ಕೊಪಗೊಂಡು ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟಿದ್ದಾನೆ. ಕುಡಿತದ ಅಮಲಿನಲ್ಲಿದ್ದ ರಾಮು ಪುಟ್ಟ ಮಗಳ ಕೊರಳಲ್ಲಿದ್ದ ದಾರವನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಮಗಳನ್ನು ಕೊಲೆಗೈದು ಕಥೆ ಕಟ್ಟಿದ ಪಾಪಿ
ಮಗಳನ್ನು ಕೊಲೆ ಮಾಡಿ ನಂತರ ಪಾಪಿ ತಂದೆ ಕಥೆ ಕಟ್ಟಿದ್ದಾನೆ. ಪಕ್ಕದ ಮನೆಯ ವೃದ್ದೆಗೆ ನೀಡಿ ಮಗು ಸತ್ತಿದೆ ಎಂದು ಹೇಳಿದ್ದಾನೆ. ನಂತರ ಹೆಂಡತಿ ಹತ್ತಿರ ಹೋದಾಗ ಕೂಸು ಎಲ್ಲಿದೆ ಎಂದು ಪತ್ನಿ ಕೇಳಿದ್ದಾಳೆ. ಆಗ ಕೂಸು ಸತ್ತಿದೆ ಎಂದು ತಿಳಿಸಿದ್ದಾನೆ.
ಅಮಲಿನಲ್ಲಿ ಸತ್ಯ ಹೇಳಿದ ಪಾಪಿ
ತಾನು ಕೊಲೆ ಮಾಡಿ ಮಗಳು ಸತ್ತಿದ್ದಾಳೆಂದು ಹೇಳದೇ, ಬೇರೆ ಬೇರೆ ಕಥೆ ಕಟ್ಟಿದ್ದಾನೆ. ನಂತರ ಹಲವು ಆಯಾಮದಲ್ಲಿ ಪ್ರಶ್ನೆ ಕೇಳಿದಾಗ ಕುಡಿದ ನಶೆಯಲ್ಲಿ ಸತ್ಯವನ್ನು ಕಕ್ಕಿದ್ದಾನೆ. ಮಗಳು ಅಳುತ್ತಿರುವದಕ್ಕೆ ಕೋಪಗೊಂಡು ದಾರ ಹಿಡಿದು ಕೊಲೆ ಮಾಡಿದ್ದೆನೆಂದು ತಿಳಿಸಿದ್ದಾನೆ.
ಇದನ್ನೂ ಓದಿ: Bengaluru: ಬೆಂಗಳೂರಲ್ಲಿ ಚಿರತೆ ಆತಂಕ! ಒಂದಲ್ಲ, ಎರಡಲ್ಲ ನಾಲ್ಕು ಏರಿಯಾಗಳಲ್ಲಿ ಪ್ರತ್ಯಕ್ಷ!
ಆರೋಪಿಯನ್ನು ಬಂಧಿಸಿದ ಪೊಲೀಸರು
ಪತಿರಾಯನೆ ಮಗಳ ಹಂತಕನಾಗುತ್ತಾನೆಂದು ಪತ್ನಿ ಕಲ್ಪನೆ ಮಾಡಿಕೊಂಡಿರಲಿಲ್ಲ. ಆದರೆ, ಕುಡಿತದ ದಾಸನಾದ ಪತಿರಾಯ, ತನ್ನ ಕೆಟ್ಟ ಚಟದಿಂದ ಮಗಳನ್ನೆ ಬಲಿ ಪಡೆದಿದ್ದಾನೆ. ಇನ್ನು ವಿಚಾರ ತಿಳಿದು ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಪತಿರಾಯ ರಾಮುನ ವಿರುದ್ಧ ಪತ್ನಿ ಸಾವಿತ್ರಮ್ಮ ದೂರು ನೀಡಿದ್ದಾಳೆ. ಆರೋಪಿ ರಾಮುನನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆ. ಮದ್ಯದ ನಶೆಯಲ್ಲಿ ಎನೆಲ್ಲಾ ಅನಾಹುತ ಆಗುತ್ತದೆಂಬುದಕ್ಕೆ ಈ ಘಟನೆಯ ಸಾಕ್ಷಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ