• Home
  • »
  • News
  • »
  • breaking-news
  • »
  • HIV+ and Cancer: ಏಡ್ಸ್ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಎರಡೂ ರೋಗಗಳಿಂದ ಗುಣಪಡಿಸಿದ ವೈದ್ಯರು

HIV+ and Cancer: ಏಡ್ಸ್ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಎರಡೂ ರೋಗಗಳಿಂದ ಗುಣಪಡಿಸಿದ ವೈದ್ಯರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಏಡ್ಸ್ ಅನ್ನು ಸಹ ಗುಣಪಡಿಸಬಹುದು ಎಂದು ಹಲವಾರು ವೈದ್ಯರು ಹೇಳುತ್ತಾರೆ. ಹಾಗಾಗಿ ವೈದ್ಯಕೀಯ ಲೋಕದಲ್ಲಿ ಯಾವುದು ಅಸಾಧ್ಯವಿಲ್ಲ. ಒಮೊಮ್ಮೆ ಪವಾಡ ಅಂತಾ ನಾವು ಕರೆಯುವುದು ನಡೆದು ಹೋಗುತ್ತದೆ. ಇಲ್ಲೊಬ್ಬ ವ್ಯಕ್ತಿಯ ವಿಚಾರದಲ್ಲೂ ಇದೇ ಆಗಿದೆ ನೋಡಿ. ಹತ್ತಾರು ವರ್ಷಗಳಿಂದ ಕ್ಯಾನ್ಸರ್ ಮತ್ತು ಏಡ್ಸ್ ನಿಂದ ಬಳಲುತ್ತಿದ್ದ ವ್ಯಕ್ತಿ ಎರಡೂ ರೋಗಗಳಿಂದ ಗುಣಮುಖನಾಗಿದ್ದಾನೆ.

ಮುಂದೆ ಓದಿ ...
  • Share this:

ಏಡ್ಸ್ (AIDS) ಮತ್ತು ಕ್ಯಾನ್ಸರ್ (Cancer), ಜಗತ್ತಿನ ಭಯಾನಕ ಕಾಯಿಲೆಗಳಲ್ಲಿ ಇವುಗಳ ಹೆಸರು ಮೊದಲಿಗೆ ಕೇಳಿ ಬರುತ್ತದೆ. ಎರಡೂ ಕಾಯಿಲೆಗಳು (Disease) ತದ್ವಿರುದ್ಧವಾದರೂ ಎರಡೂ ಮಾರಾಣಾಂತಿಕ ರೋಗಗಳು. ಏಡ್ಸ್ ಮತ್ತು ಕ್ಯಾನ್ಸರ್ ಇದುವರೆಗೂ ವಿಶ್ವದಾದ್ಯಂತ ಮಿಲಿಯನ್ ಗಟ್ಟಲೇ ಜನರನ್ನು ಬಲಿಪಡೆದಿದೆ. ಕ್ಯಾನ್ಸರ್ ರೋಗ ಗುಣಪಡಿಸಬಹುದಾದರೂ, ಲಕ್ಷಣಗಳು (Symptoms) ಮೊದಲ ಹಂತದಲ್ಲಿಯೇ ಕಂಡುಬರುವುದು ತುಂಬಾ ವಿರಳ. ಇನ್ನೂ ಏಡ್ಸ್ ಅನ್ನು ಸಹ ಗುಣಪಡಿಸಬಹುದು ಎಂದು ಹಲವಾರು ವೈದ್ಯರು ಹೇಳುತ್ತಾರೆ. ಹಾಗಾಗಿ ವೈದ್ಯಕೀಯ ಲೋಕದಲ್ಲಿ ಯಾವುದು ಅಸಾಧ್ಯವಿಲ್ಲ. ಒಮೊಮ್ಮೆ ಪವಾಡ ಎಂದು ನಾವು ಕರೆಯುವುದು ನಡೆದು ಹೋಗುತ್ತದೆ.


ಇಲ್ಲೊಬ್ಬ ವ್ಯಕ್ತಿಯ ವಿಚಾರದಲ್ಲೂ ಇದೇ ಆಗಿದೆ ನೋಡಿ. ಹತ್ತಾರು ವರ್ಷಗಳಿಂದ ಕ್ಯಾನ್ಸರ್ ಮತ್ತು ಏಡ್ಸ್ ನಿಂದ ಬಳಲುತ್ತಿದ್ದ ವ್ಯಕ್ತಿ ಎರಡೂ ರೋಗಗಳಿಂದ ಗುಣಮುಖನಾಗಿದ್ದಾನೆ.


ಕ್ಯಾನ್ಸರ್ ಮತ್ತು ಏಡ್ಸ್ ನಿಂದ ಗುಣಮುಖರಾದ ವ್ಯಕ್ತಿ
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹೆಚ್ಐವಿ ಪಾಸಿಟಿವ್ (HIV+) ವ್ಯಕ್ತಿಯನ್ನು ಕ್ಯಾನ್ಸರ್ ಮತ್ತು ಏಡ್ಸ್ ನಿಂದಾಗಿ ಗುಣಪಡಿಸಲಾಗಿದೆ. ಪ್ಯಾರೀಸ್‍ನಲ್ಲಿ ಏಡ್ಸ್ ಸಂಶೋಧಕರು ಈ ಬಗ್ಗೆ ಬುಧವಾರ ಘೋಷಿಸಿದ್ದಾರೆ ಮತ್ತು ಏಡ್ಸ್ ನಿಂದ ಗುಣಮುಖರಾದ ನಾಲ್ಕನೇ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. 66 ವರ್ಷದ ಅಮೆರಿಕಾದ ವ್ಯಕ್ತಿಯು ರಕ್ತದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು, ಇದಕ್ಕೆ ಚಿಕಿತ್ಸೆ ನೀಡಲು ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ನೀಡಲಾಯಿತು. ಸಂಕೀರ್ಣ ಕಾರ್ಯವಿಧಾನದ ನಂತರ ವ್ಯಕ್ತಿ ಕ್ಯಾನ್ಸರ್ ಮತ್ತು ಏಡ್ಸ್ ವೈರಸ್‌ನಿಂದ ಗುಣಮುಖರಾಗಿದ್ದಾರೆ ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ.


ಕಳೆದ ಶುಕ್ರವಾರ ಕೆನಡಾದ ಮಾಂಟ್ರಿಯಲ್‌ನಲ್ಲಿ ಪ್ರಾರಂಭವಾಗುವ ಅಂತರಾಷ್ಟ್ರೀಯ ಏಡ್ಸ್ ಸಮ್ಮೇಳನದ ಮುನ್ನಾದಿನದಂದು ಈ ಬಗ್ಗೆ ಘೋಷಿಸಲಾಯಿತು.


ಏಡ್ಸ್ ನಿಂದ ಗುಣಮುಖರಾದ ಎರಡನೇ ವ್ಯಕ್ತಿ
ಫೆಬ್ರವರಿಯಲ್ಲಿ ನ್ಯೂಯಾರ್ಕ್ ನ ಮಹಿಳಾ ರೋಗಿ ಕೂಡ ಏಡ್ಸ್ ನಿಂದ ಗುಣಮುಖರಾಗಿದ್ದು ಈ ವರ್ಷ ಗುಣಮುಖರಾಗಿ ಘೋಷಿಸಲ್ಪಟ್ಟ ಎರಡನೇ ವ್ಯಕ್ತಿಯಾಗಿದ್ದಾರೆ ಎಂದು ಸಂಶೋಧಕರಿಂದ ತಿಳಿದು ಬಂದಿದೆ. 66 ವರ್ಷದ ಅಮೆರಿಕಾದ ವ್ಯಕ್ತಿಯು ಈ ಮೊದಲಿನ ಬರ್ಲಿನ್ ಮತ್ತು ಲಂಡನ್ ಮೂಲದ ರೋಗಿಗಳಂತೆ, ಕ್ಯಾನ್ಸರ್ ಚಿಕಿತ್ಸೆಗಾಗಿ ಮೂಳೆ ಮಜ್ಜೆಯ ಕಸಿ ಮಾಡಿದ ನಂತರ ವೈರಸ್‌ನಿಂದ ಶಾಶ್ವತವಾದ ಉಪಶಮನವನ್ನು ಪಡೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ, ಡ್ಯುಸೆಲ್ಡಾರ್ಫ್ ಎಂಬ ರೋಗಿಯು ಸಹ ಈ ಹಿಂದೆ ಏಡ್ಸ್ ನಿಂದ ಗುಣಮುಖರಾಗಿದ್ದಾರೆ ಎನ್ನಲಾಗಿದ್ದು, ಈ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.


ಇದನ್ನೂ ಓದಿ:  Hospital Beds: ಭಾರತದಲ್ಲಿ ದುಬಾರಿಯಾಗುತ್ತಿದೆ ಆರೋಗ್ಯ ಸೇವೆ, ಆಸ್ಪತ್ರೆ ಕೊಠಡಿಗೂ GST


ಕ್ಯಾಲಿಫೋರ್ನಿಯಾದ ಸಿಟಿ ಆಫ್ ಹೋಪ್‌ನ ಸಾಂಕ್ರಾಮಿಕ ರೋಗ ತಜ್ಞ ಜನಾ ಡಿಕ್ಟರ್ ಅವರನ್ನು ಕುರಿತು ರೋಗಿಯ ಕುರಿತಾದ ಸಂಶೋಧನೆಯ ಪ್ರಮುಖ ಲೇಖಕ ಮಾತನಾಡಿ “ಈ 66 ವರ್ಷದ ವ್ಯಕ್ತಿಯು ಏಡ್ಸ್ ನಿಂದ ಇನ್ನೂ ಗುಣಮುಖರಾಗದ ರೋಗಿಗಳಿಗೆ ಭರವಸೆಯಾಗಿದ್ದಾರೆ, ಹೆಚ್ಐವಿ ಪೀಡಿತರು ತಮ್ಮ ರೋಗ ಶಮನವಾಗುತ್ತದೆ ಎಂಬ ನಂಬಿಕೆ ಇಟ್ಟುಕೊಳ್ಳಬಹುದು” ಎಂದಿದ್ದಾರೆ.


‘ನಾನು ಆಭಾರಿಯಾಗಿದ್ದೇನೆ'
"1988 ರಲ್ಲಿ ನನಗೆ ಹೆಚ್‍ಐವಿ ಇರುವುದು ಪತ್ತೆಯಾದಾಗ, ಇತರರಂತೆ, ನಾನು ಇದನ್ನು ಮರಣದಂಡನೆ ಎಂದು ಭಾವಿಸಿದೆ" ಎಂದು ಗುರುತಿಸಲು ಬಯಸದ ರೋಗಿ ಹೇಳಿದರು. ನಾನು ಇನ್ನು ಮುಂದೆ ಹೆಚ್ಐವಿ ಹೊಂದಿಲ್ಲದ ದಿನವನ್ನು ಅನುಭವಿಸಲು ಬದುಕುತ್ತೇನೆ, ಇದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಸಿಟಿ ಆಫ್ ಹೋಪ್ ಆಸ್ಪತ್ರೆಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.


“ಈ ಸಂಕೀರ್ಣ ವಿಧಾನ ಹೆಚ್ಚು ಸೂಕ್ತವಲ್ಲ”
ಈ ಬಗ್ಗೆ ಮತ್ತಷ್ಟು ವಿವರಿಸಿದ ಡಿಕ್ಟರ್ ಈ ರೋಗಿಯೂ 31 ವರ್ಷಗಳ ಕಾಲ ಹೆಚ್‍ಐವಿ ಹೊಂದಿದ್ದರು, ಲ್ಯುಕೇಮಿಯಾ ರೋಗನಿರ್ಣಯ ಮಾಡಿದ ನಂತರ, 2019ರಲ್ಲಿ ಅವರು ದಾನಿಯಿಂದ ಕಾಂಡಕೋಶಗಳೊಂದಿಗೆ ಮೂಳೆ ಮಜ್ಜೆಯ ಕಸಿ ಮಾಡಿಸಿಕೊಂಡರು. ನಂತರ ಚಿಕಿತ್ಸೆ ನಿರಂತರವಾಗಿ ಮುಂದುವರೆದಿತ್ತು. ಕಡಿಮೆ-ತೀವ್ರತೆಯ ಕಿಮೊಥೆರಪಿಯು ರೋಗಿಗೆ ಕೆಲಸ ಮಾಡಿದೆ, ಕ್ಯಾನ್ಸರ್ ಹೊಂದಿರುವ ಹಳೆಯ ಹೆಚ್ಐವಿ ರೋಗಿಗಳಿಗೆ ಚಿಕಿತ್ಸೆಯನ್ನು ಪಡೆಯಲು ಸಂಭಾವ್ಯವಾಗಿ ಇದು ಅವಕಾಶ ನೀಡುತ್ತದೆ ಎಂದು ಡಿಕ್ಟರ್ ಹೇಳಿದರು.


ಆದರೆ ಇದು ಹಲವಾರು ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿರುವ ಸಂಕೀರ್ಣ ವಿಧಾನವಾಗಿದೆ ಮತ್ತು ಹೆಚ್‌ಐವಿ ಹೊಂದಿರುವ ಹೆಚ್ಚಿನ ಜನರಿಗೆ ಇದು ಸೂಕ್ತ ಆಯ್ಕೆಯಾಗಿಲ್ಲ ಎಂದು ಅವರು ಹೇಳಿದರು.


ಈ ಕುರಿತು ಹೆಚ್ಐವಿ ತಜ್ಞ ಸ್ಟೀವನ್ ಡೀಕ್ಸ್ ಏನು ಹೇಳಿದರು 
ಸಂಶೋಧನೆಯಲ್ಲಿ ಭಾಗಿಯಾಗದ ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹೆಚ್ಐವಿ ತಜ್ಞ ಸ್ಟೀವನ್ ಡೀಕ್ಸ್, ಮಾತನಾಡಿ "ಮೂಳೆ ಮಜ್ಜೆಯ ಕಸಿ ಮಾಡುವಲ್ಲಿ ನೀವು ಮಾಡುವ ಮೊದಲ ಕೆಲಸವೆಂದರೆ ನಿಮ್ಮ ಸ್ವಂತ ಪ್ರತಿರಕ್ಷಣಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಾಶಪಡಿಸುವುದು" ಎಂದು ಹೇಳಿದರು.


ಇದನ್ನೂ ಓದಿ:  Covid-19 Dose: ಒಂದೇ ಸಿರಿಂಜ್​ನಲ್ಲಿ 30 ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಡೋಸ್!


ಇದೇ ರೀತಿ 59 ವರ್ಷದ ಸ್ಪ್ಯಾನಿಷ್ ಮಹಿಳೆ ಕೂಡ ಹೆಚ್ಐವಿಯನ್ನು ಗೆದ್ದಿದ್ದಾಳೆ ಎಂದು ಸಂಶೋಧಕರು ಏಡ್ಸ್ ಸಮ್ಮೇಳನದಲ್ಲಿ ಘೋಷಿಸಿದರು. ಸಮ್ಮೇಳನವನ್ನು ಆಯೋಜಿಸುವ ಇಂಟರ್ನ್ಯಾಷನಲ್ ಏಡ್ಸ್ ಸೊಸೈಟಿಯ ಅಧ್ಯಕ್ಷ-ಚುನಾಯಿತ ಶರೋನ್ ಲೆವಿನ್ "ನಾವು ಮೊದಲು ಬೆರಳೆಣಿಕೆಯಷ್ಟು ವೈಯಕ್ತಿಕ ಚಿಕಿತ್ಸೆ ಪ್ರಕರಣಗಳನ್ನು ನೋಡಿದ್ದೇವೆ ಮತ್ತು ಇಂದು ಪ್ರಸ್ತುತಪಡಿಸಿದ ಪ್ರಕರಣಗಳು ಜನರಿಗೆ ನಿರಂತರ ಭರವಸೆ ಮತ್ತು ವೈಜ್ಞಾನಿಕ ಸಮುದಾಯಕ್ಕೆ ಸ್ಫೂರ್ತಿಯಾಗಿದೆ ಎಂದರು.


ಕಾನ್ಫರೆನ್ಸ್‌ನಲ್ಲಿ ಪ್ರಸ್ತುತಪಡಿಸಲಾದ ಹೊಸ ಸಂಶೋಧನೆಯ ಲೇಖಕರಾದ ಡೀಕ್ಸ್, ಇದು "ಸೋಂಕಿತ ಜೀವಕೋಶದ ಜೀವಶಾಸ್ತ್ರಕ್ಕೆ ಅಭೂತಪೂರ್ವ ಯಶಸ್ಸು" ಎಂದು ಹೇಳಿದರು.

Published by:Ashwini Prabhu
First published: