• Home
  • »
  • News
  • »
  • breaking-news
  • »
  • 2nd PUC Exam 2023: ದ್ವಿತೀಯ ಪಿಯು ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ರಿಲೀಸ್​

2nd PUC Exam 2023: ದ್ವಿತೀಯ ಪಿಯು ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ರಿಲೀಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2023 ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ಅ.21): 2023 ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ದಿನಾಂಕ 10-3-2023ರಿಂದ 29-3-2023ರ ವರೆಗೆ ನಡೆಸಲು ಪಿಯು ಬೋರ್ಡ್ ತೀರ್ಮಾನಿಸಿದ್ದು, ಇಂದು(ಅಕ್ಟೋಬರ್ 21) ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.


ಈ ವರ್ಷದಿಂದಲೇ ಭಗವದ್ಗೀತೆ ತರಬೇತಿ


ಬೆಂಗಳೂರು : ವಿದ್ಯಾರ್ಥಿಗಳಿಗೆ ಭಗವದ್ಗೀತೆ ಭೋದನೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಚರ್ಚೆಯಾಗಿದ್ದು, ಇದೀಗ ಪರಿಷತ್​ನಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ (Bhagavad Gita) ಬೋಧನೆ ಆರಂಭಿಸುವ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ತಿಳಿಸಿದರು. ವಿಧಾನ ಪರಿಷತ್​ನಲ್ಲಿ ಈ ವಿಚಾರವನ್ನು ಸದಸ್ಯ ಎಂ.ಕೆ.ಪ್ರಾಣೇಶ್ (MK Pranesh) ಪ್ರಸ್ತಾಪಿಸಿದರು.


ಏನಾಯ್ತು ಭಗವದ್ಗೀತೆ ಬೋಧನೆ ವಿಚಾರ

 ಪರಿಷತ್​ನಲ್ಲಿಈ ಬಗ್ಗೆ ಮಾತಾಡಿದ ಎಂ.ಕೆ ಪ್ರಾಣೇಶ್​, ಭಗವದ್ಗೀತೆ ಬೋಧನೆ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆಯೇ ಹೇಳಿಕೆ ಹೊರಬಂದಿದೆ. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ? ಮೊದಲು ಇದ್ದ ಆಸಕ್ತಿ ಈಗ ಯಾಕೆ ಇಲ್ಲ ಎಂದು ಕೇಳಿದರು.
ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ-ಬಿಸಿ ನಾಗೇಶ್​

 ಎಂ.ಕೆ ಪ್ರಾಣೇಶ್​ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.ಬನಾರಸ್ ವಿವಿ ಮಾಡಲ್ ಫಾಲೋ ಮಾಡಲು ಚಿಂತನೆ


ಸರ್ಕಾರ ಈಗಾಗಲೇ ಭಗವದ್ಗೀತೆಯ ಭೋಧನೆಗೆ ಸಂಬಂಧ ಸಮಿತಿ ರಚನೆ ಮಾಡಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಯಾವ ತರಗತಿಯಿಂದ ಯಾವ ತರಗತಿಗಳಿಗೆ ಯಾವ ಮಾದರಿಯಲ್ಲಿ ಭಗವದ್ಗೀತೆ ಭೋದನೆ ಮಾಡಬೇಕು? ಯಾವ ರೀತಿಯಲ್ಲಿ ನೈತಿಕ ಶಿಕ್ಷಣ ನೀಡಬೇಕು ಅಂತಾ ಸಮಿತಿ ಮಾಹಿತಿ ನೀಡಲಿದೆ. ಪ್ರತ್ಯೇಕವಾದ ಪಠ್ಯ ರಚನೆಯ ಮೂಲಕ ಮಕ್ಕಳಿಗೆ ಗೀತೆ ಭೋದನೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಗುಜರಾತ್ ಹಾಗೂ ಬನಾರಸ್ ವಿವಿ ಮಾಡಲ್ ಫಾಲೋ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಗುಜರಾತ್ ಸರ್ಕಾರ ಪಠ್ಯದಲ್ಲಿ ತಂದಿರುವ ಭಗ್ವತಗೀತಾ ಮಾದರಿಯಲ್ಲಿಯೇ rಆಜ್ಯದಲ್ಲೂ ಫಾಲೊ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.


ಇದನ್ನೂ ಓದಿ: BBMP: ವಿಪ್ರೋ ಮುಂದೆ ಮಂಡಿಯೂರಿದ್ರಾ ಬಿಬಿಎಂಪಿ, ಕಂದಾಯ ಇಲಾಖೆ ಅಧಿಕಾರಿಗಳು?


ಈ ವರ್ಷದಿಂದಲೇ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಭೋದನೆಗೆ ಶಿಕ್ಷಣ ಇಲಾಖೆ ಚಿಂತಿಸಿದ್ದು ಪ್ರಾಥಮಿಕ ಹಂತದಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ 6-12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಭೋದನೆಗೆ ಪ್ಲಾನ್ ಮಾಡಿದೆ. ಭಗವದ್ಗೀತೆ, ರಾಮಾಯಣ ಮಹಾಭಾರತದ ತತ್ವಗಳು ಮತ್ತು ಮೌಲ್ಯಗಳನ್ನು ಕಲಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸುತ್ತಿದೆ.Published by:ಪಾವನ ಎಚ್ ಎಸ್
First published: