• Home
 • »
 • News
 • »
 • breaking-news
 • »
 • 3ನೇ ಅಲೆ ಬೆಂಗಳೂರಿನ ಮಕ್ಕಳನ್ನು ಟಾರ್ಗೆಟ್ ಮಾಡಿಯೇ ಬಿಡ್ತಾ? 5 ದಿನದಲ್ಲಿ 242 ಮಕ್ಕಳಿಗೆ ಕೊರೊನಾ!

3ನೇ ಅಲೆ ಬೆಂಗಳೂರಿನ ಮಕ್ಕಳನ್ನು ಟಾರ್ಗೆಟ್ ಮಾಡಿಯೇ ಬಿಡ್ತಾ? 5 ದಿನದಲ್ಲಿ 242 ಮಕ್ಕಳಿಗೆ ಕೊರೊನಾ!

ಕಳೆದ ಐದು‌ ದಿನಗಳಲ್ಲಿ ನಗರದಲ್ಲಿ 242 ಮಕ್ಕಳು‌ ಕೊರೋನಾದಿಂದ ಬಾಧಿತರಾಗಿದ್ದಾರೆ. ಈ ಪೈಕಿ 123 ಹೆಣ್ಣು ಮಕ್ಕಳು ಹಾಗೂ 119 ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಅದ್ರಲ್ಲೂ ಮುಖ್ಯವಾಗಿ ನವಜಾತ ಶಿಶುಗಳಿಂದ 9 ವರ್ಷ ವರೆಗಿನ 106 ಮಕ್ಕಳು ಸೋಂಕಿತರಾಗಿದ್ದಾರೆ.

ಕಳೆದ ಐದು‌ ದಿನಗಳಲ್ಲಿ ನಗರದಲ್ಲಿ 242 ಮಕ್ಕಳು‌ ಕೊರೋನಾದಿಂದ ಬಾಧಿತರಾಗಿದ್ದಾರೆ. ಈ ಪೈಕಿ 123 ಹೆಣ್ಣು ಮಕ್ಕಳು ಹಾಗೂ 119 ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಅದ್ರಲ್ಲೂ ಮುಖ್ಯವಾಗಿ ನವಜಾತ ಶಿಶುಗಳಿಂದ 9 ವರ್ಷ ವರೆಗಿನ 106 ಮಕ್ಕಳು ಸೋಂಕಿತರಾಗಿದ್ದಾರೆ.

ಕಳೆದ ಐದು‌ ದಿನಗಳಲ್ಲಿ ನಗರದಲ್ಲಿ 242 ಮಕ್ಕಳು‌ ಕೊರೋನಾದಿಂದ ಬಾಧಿತರಾಗಿದ್ದಾರೆ. ಈ ಪೈಕಿ 123 ಹೆಣ್ಣು ಮಕ್ಕಳು ಹಾಗೂ 119 ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಅದ್ರಲ್ಲೂ ಮುಖ್ಯವಾಗಿ ನವಜಾತ ಶಿಶುಗಳಿಂದ 9 ವರ್ಷ ವರೆಗಿನ 106 ಮಕ್ಕಳು ಸೋಂಕಿತರಾಗಿದ್ದಾರೆ.

 • Share this:

  ಬೆಂಗಳೂರು: ಕೊರೋನಾ ಮೂರನೇ ಅಲೆ ಭೀತಿ ತಲೆದೂರಿರುವಾಗಲೇ ನಗರದ ಮಕ್ಕಳಲ್ಲಿ ಸೋಂಕು ಹೆಚ್ಚಾಗ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ತಜ್ಞರ ಅಭಿಪ್ರಾಯ ನಿಜವಾಗ್ತಿದ್ಯಾ ಅನ್ನೋ ಅನುಮಾನ ಮೂಡಲಾರಂಭಿಸಿದೆ. ಕಳೆದ ಕೆಲ‌ ದಿನಗಳ ಕೊರೋನಾ ವರದಿ ನೋಡಿದರೆ ಮಕ್ಕಳಲ್ಲಿ ಶರವೇಗದಲ್ಲಿ‌ ಸೋಂಕು ಹರಡುತ್ತಿರುವುದು ದೃಢವಾಗಿದೆ. 


  5 ದಿನದಲ್ಲಿ 242 ಮಕ್ಕಳಿಗೆ ಸೋಂಕು!


  ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೋನಾ ಆತಂಕ ಮನೆ ಮಾಡಿದೆ. ಅತ್ತ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಇತ್ತ ಮಕ್ಕಳಿಗೆ ಹೆಚ್ಚೆಚ್ಚು ಸೋಂಕು ತಗುಲುತ್ತಿದೆ. ಕಳೆದ ಐದು‌ ದಿನದ ಕೊರೋನಾ ವರದಿಯಲ್ಲಿ 200ಕ್ಕೂ ಅಧಿಕ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು, ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ತಜ್ಞರ ಅಭಿಪ್ರಾಯ ನಿಜವಾಗ್ತಿದ್ಯೇನೋ ಎನ್ನುವ ಅನುಮಾನ ಮೂಡಿಸಿದೆ. ಅಂದಹಾಗೆ, ಆಗಸ್ಟ್ 6 ರಿಂದ 10ರ ಐದು‌ ದಿನಗಳ ಅವಧಿಯಲ್ಲಿ 242 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬಿಬಿಎಂಪಿಯನ್ನು ಚಿಂತೆಗೀಡು ಮಾಡಿದೆ.


  ಕಳೆದ ಐದು‌ ದಿನಗಳಲ್ಲಿ ನಗರದಲ್ಲಿ 242 ಮಕ್ಕಳು‌ ಕೊರೋನಾದಿಂದ ಬಾಧಿತರಾಗಿದ್ದಾರೆ. ಈ ಪೈಕಿ 123 ಹೆಣ್ಣು ಮಕ್ಕಳು ಹಾಗೂ 119 ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಅದ್ರಲ್ಲೂ ಮುಖ್ಯವಾಗಿ ನವಜಾತ ಶಿಶುಗಳಿಂದ 9 ವರ್ಷ ವರೆಗಿನ 106 ಮಕ್ಕಳಿಗೆ ಹಾಗೂ 10 ವರ್ಷದಿಂದ 19ವರ್ಷದೊಳಗಿನ 136 ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಆತಂಕ ಇಮ್ಮಡಿಯಾಗಿಸಿದೆ.‌ ಹೀಗೆ ಒಟ್ಟಾರೆ ಕಳೆದ ಐದು ದಿನದಲ್ಲಿ ನಗರದಲ್ಲಿ 242 ಮಕ್ಕಳಿಗೆ ಸೋಂಕು ದೃಢವಾಗಿದೆ. ಈ ಬಗ್ಗೆ ಮಾಹಿತಿ‌ ಕೊಟ್ಟ ಬಿಬಿಎಂಪಿ ಆರೋಗ್ಯ ವಿಭಾದ ವಿಶೇಷ ಆಯುಕ್ಯ ಡಿ ರಂದೀಪ್, ಕೆಲ‌ ದಿನಗಳಿಂದ ಮಕ್ಕಳಲ್ಲಿ ಹೆಚ್ಚೆಚ್ಚು ಸೋಂಕು ದೃಢವಾಗುತ್ತಿದೆ. ಆದರೂ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಸೋಂಕಿನ ಪ್ರಮಾಣ ಇನ್ನೂ‌ ಶೇಕಡಾ 5 ಇನ್ನೂ ಮೀರಿಲ್ಲ. ಮಕ್ಕಳಿಗೆ ವಿಶೇಷ ಕ್ರಮಗಳನ್ನು ಪಾಲಿಕೆ ಕೈಗೊಂಡಿದೆ ಎಂದು‌ ತಿಳಿಸಿದರು.


  ಸಾಲು ಸಾಲು ಹಬ್ಬಗಳು.. ಮೈ‌ಮರೆಯದಂತೆ ಪಾಲಿಕೆ‌ ಎಚ್ಚರಿಕೆ.!!


  ಇನ್ನು ಅಗಸ್ಟ್ 15ರ ವರೆಗೆ ಸದ್ಯದ ಸ್ಥಿತಿಯೇ ಮುಂದುವರೆಯಲಿದೆ. ಯಾವುದೇ ಬಿಗಿ‌ ಕ್ರಮಗಳು ಇಲ್ಲಾ ಎಂದು ಪಾಲಿಕೆ‌ ಸ್ಪಷ್ಟಪಡಿಸಿದೆ. ಆದಾದ ಬಳಿಕ ಕಠಿಣ ಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ. ಯಾಕಂದ್ರೆ, ಇದಾದ ಬಳಿಕ‌ ಸಾಲು ಸಾಲು ಹಬ್ಬದ ದಿನಗಳು ಬರಲಿದೆ. ಈ ವೇಳೆ ಆಚರಣೆ ನೆಪದಲ್ಲಿ ಜನ ಸಂಧಣಿ ಹೆಚ್ಚಾದರೆ ಕೊರೋನಾ ಮತ್ತೆ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಧಾರ್ಮಿಕ ಕೇಂದ್ರಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆಯಾಗುವ ಸಂಭವವಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಜನರು‌ ಗುಂಪು ಸೇರಿದರೆ ಮಾರ್ಷಲ್ಸ್ ದಂಡ ಕಟ್ಟಿಸಿಕೊಳ್ಳಲಿದ್ದಾರೆ.


  ಇದನ್ನೂ ಓದಿ: Covid 3rd wave- ಬೆಂಗಳೂರಿನಲ್ಲಿ 3ನೇ ಕೋವಿಡ್ ಅಲೆ ಎದುರಿಸಲು ಸಿದ್ಧವಾಗಿದೆ 8000 ಬೆಡ್ ವ್ಯವಸ್ಥೆ


  ಜನರು ಮೈ ಮರೆತರೆ ಮತ್ತೊಮ್ಮೆ ಅಪಾಯ ತಪ್ಪಿದಲ್ಲ. ಅಲ್ದೇ ಕೊರೋನಾ ಹೊಸ ಮಾರ್ಗಸೂಚ ಶೀಘ್ರವೇ ಪಾಲಿಕೆ ಬಿಡುಗಡೆ ಮಾಡಲಿದೆ ಎಂದರು.‌ ಇನ್ನು ಕಳೆದ 16 ತಿಂಗಳ ಈ‌ ಕೊರೋನಾ ಅವಧಿಯಲ್ಲಿ ಬಿಬಿಎಂಪಿ ಒಟ್ಟು 16 ಕೋಟಿಗೂ ಅಧಿಕ‌ ದಂಡವನ್ನು ವಸೂಲಿ ಮಾಡಿಕೊಂಡಿದೆ. ಜನರ ನಿರ್ಲಕ್ಷ್ಯ ಪಾಲಿಕೆಗೆ ಒಂದು ಕಡೆ ಕೊರೋನಾ ನಿರ್ವಹಣೆ ಕ್ಲಿಷ್ಟಕರ ಮಾಡುತ್ತಿದೆ ಎಂಬುವುದರ ಜೊತೆಗೆ ಪಾಲಿಕೆಯ‌ ಖಜಾನೆಗೆ ಕೋಟಿ‌ ಕೋಟಿ ಹರಿದು ಬರುವಂತೆ ಮಾಡುತ್ತಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  First published: