ಬೀದರ್: ಕಳೆಗಟ್ಟಿದ ಕುಸ್ತಿ ಅಖಾಡ, ಒಬ್ರಿಗಿಂತ ಒಬ್ರು ಜಗಜಟ್ಟಿಗಳು! ಕುಸ್ತಿ ಪಟುಗಳ ನಾಡಿನಲ್ಲಿ ದಂಗಲ್ ಜಾತ್ರೆಯದ್ದೆ ಹವಾ! ಈ ಕುಸ್ತಿಪಟುಗಳ ಭರ್ಜರಿ ಕಾಳಗ ನೋಡ್ತಿದ್ರೆ ವೀಕ್ಷಕರ ಎದೆ ಝಲ್ ಅಂತಿತ್ತು! ಇದು ಬೀದರ್ ಜಿಲ್ಲೆಯ (Bidar News) ಬಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ (Wresting Match) ಸೆಣಸಾಟ.
ರೇವಪ್ಪಯ್ಯಾ ದೇವರ 33 ನೇ ಜಾತ್ರಾ ಮಹೊತ್ಸವ ಅಂಗವಾಗಿ ಏರ್ಪಡಿಸಿದ್ದ ಜಂಗಿ ಕುಸ್ತಿ ಮೈನವಿರೇಳಿಸಿತು. ಅಖಾಡದಲ್ಲಿ ಗೆಲ್ಲಲು ತೊಡೆ ತಟ್ಟಿ ಸೆಡ್ಡು ಹೊಡೆದ ಜಗಜಟ್ಟಿಗಳು ಪರಸ್ಪರ ತೀವ್ರ ಕಾದಾಟ ನಡೆಸಿದರು.
ಇದನ್ನೂ ಓದಿ: Jalebi Recipe: ಚಳಿಗಾಲಕ್ಕೆ ರುಚಿರುಚಿ ಜಿಲೇಬಿ ಸವಿಯಿರಿ; ಇಲ್ಲಿದೆ ಸುಲಭ ರೆಸಿಪಿ
ಪರಾಕ್ರಮ ಮೆರೆದ ಯುವ ಫೈಲ್ವಾನರು
ಪಂದ್ಯಾವಳಿ ವೀಕ್ಷಣೆಗೆ ಆಗಮಿಸಿದ ಅಭಿಮಾನಿಗಳ ಸಂಭ್ರಮ ಕೇಕೆ ಚಪ್ಪಾಳೆಗಳ ನಡುವೆ ಯುವ ಫೈಲ್ವಾನರು ಕಣಕ್ಕೆ ಇಳಿದು ಪರಾಕ್ರಮ ಮೆರೆದರು.
ಇದನ್ನೂ ಓದಿ: Inspiration: ಇಡೀ ಊರಿಗೇ ಅಗರಬತ್ತಿ ಪರಿಮಳ ಹರಡುವ ಸಾಧಕ! ಇವರದ್ದು ಸ್ಫೂರ್ತಿ ನೀಡುವ ಜೀವನ
ನೂರಕ್ಕೂ ಹೆಚ್ಚು ಕುಸ್ತಪಟುಗಳ ಕಸರತ್ತು
ಹಲವಾರು ಗ್ರಾಮಗಳಿಂದ ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿ ಪಂದ್ಯಾವಳಿ ಮೆರಗು ಹೆಚ್ಚಿಸಿದರು. ಕುಸ್ತಿಪಟುಗಳು ತಮ್ಮ ಎದುರಾಳಿಯನ್ನು ಬಗ್ಗು ಬಡಿಯಲು ಹಾಕುತ್ತಿದ್ದ ಪಟ್ಟುಗಳನ್ನು ಕಂಡು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ