ಬೀದರ್: ನೀರು.. ನೀರು.. ನೀರು.. (Water) ನೀರಿಗಾಗಿ ಮನುಷ್ಯರಷ್ಟೆ (Human) ಅಲ್ಲ ಕಾಡು ಪ್ರಾಣಿಗಳೂ (Wild Animals) ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೆತ್ತಿ ಸುಡುವ ಬಿಸಿಲಿನಲ್ಲಿ ಕುಡಿಯುವ ನೀರಿಗಾಗಿ (Drinking Water) ಮೂಕ ಪ್ರಾಣಿಗಳು ಅಲೆದಾಡುವಂತಾಗಿದೆ. ಬಿಸಿಲಿನ ತಾಪಕ್ಕೆ ಕಾಡು (Forest) ಒಣಗಿ ಹೋಗುತ್ತಿದೆ. ಅಷ್ಟೇ ಅಲ್ಲದೆ ಇತ್ತ ಕಾಡಿನಲ್ಲಿರುವ ಹಳ್ಳ, ಕೊಳ್ಳ, ಕೆರೆಕಟ್ಟೆಗಳು ನೀರಿಲ್ಲದೇ ಬತ್ತಿ ಹೋಗುತ್ತಿವೆ. ಬೀದರ್‌ನಲ್ಲಿ (Bidar) ಬಿಸಿ ಏರುತ್ತಿದೆ ನೀರು ಬತ್ತುತ್ತಿದೆ. ಹೀಗಾಗಿ ಕಾಡು ಪ್ರಾಣಿಗಳು ನೀರಿಗಾಗಿ ಬಳಲುತ್ತಿವೆ. ಕಾಡು ಪ್ರಾಣಿಗಳು ಮೈಲುಗಟ್ಟಲೆ ದೂರ ಹೋಗಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀದರ್‌ನಲ್ಲಿ ಕಾಡು ಪ್ರಾಣಿಗಳ ಪರದಾಟ
ಕಲ್ಯಾಣ ಕರ್ನಾಟಕ ಬಾಗದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿದ್ದು ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಅರಣ್ಯದಲ್ಲಿ ಸಾಕಷ್ಟು ಕೆರೆ ಕಟ್ಟೆಗಳಿವೆ. ಮಳೆ ಇಲ್ಲದೆ ಬತ್ತಿದ್ದು, ಗಿಡ, ಮರಗಳು ಒಣಗುತ್ತಿವೆ. ಹೀಗಾಗಿ ಕಾಡು ಪ್ರಾಣಿಗಳು ಅರಣ್ಯದಲ್ಲಿ ಮೇವು, ನೀರಿಲ್ಲದೆ ಪರದಾಡುವಂತಾಗಿದೆ. ಅರಣ್ಯ ಇಲಾಖೆಯು ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿದ್ದು, ಎಲ್ಲೂ ನೀರು ಸಿಗದೆ ಕಾಡು ಪ್ರಾಣಿಗಳು ಕೆರೆ ಕಟ್ಟೆಯಲ್ಲಿ ಉಳಿದಿರುವ ಅಲ್ಪಸ್ವಲ್ಪ ನೀರನ್ನೇ ಕುಡಿಯುವಂತಾಗಿದೆ.
ಖಾಲಿ ಇರುವ ನೀರಿನ ತೊಟ್ಟಿಗಳು
ಬೀದರ್ ಜಿಲ್ಲೆಯಲ್ಲಿ ಸಾಕಷ್ಟು ಅರಣ್ಯ ಪ್ರದೇಶ ಇರೋದರಿಂದ ಸಾಕಷ್ಟು ವಿಶಿಷ್ಟ ತಳಿಯ ಕಾಡು ಪ್ರಾಣಿಗಳಿವೆ. ವಿಶಾಲವಾದ ಕಾಡು ಇರೋದರಿಂದ ಜಿಂಕೆ, ಕಾಡು ಹಂದಿ ಅಪರೂಪದ ಜೀವ ಸಂಕುಲಗಳಿವೆ. ಕಾಡಿನಲ್ಲಿ ಪ್ರಾಣಿಗಳಿಗೆ ಅಂತಾನೆ ನೀರಿನ ತೊಟ್ಟಿಗಳು ಇದ್ರು ಕೂಡಾ ಅದರಲ್ಲಿ ನೀರಿಲ್ಲದೆ ಖಾಲಿ ಖಾಲಿಯಾಗಿವೆ.
ಇದನ್ನೂ ಓದಿ: Bidarನಲ್ಲಿ ನೀರಿಗೆ ಹಾಹಾಕಾರ; ನಮ್ಮ ಅಳಲು ಯಾರಿಗೂ ಬೇಡ ಎನ್ನುತ್ತಿದ್ದಾರೆ ಗ್ರಾಮಸ್ಥರು
ಜಿಲ್ಲೆಯಲ್ಲಿ ವಿಶಾಲವಾದ ಕಾಡಿನಲ್ಲಿ ಅಲ್ಲಲ್ಲಿ ನೀರಿನ ಆಶ್ರಯ ಇರುವುದರಿಂದ ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಸಮಸ್ಯೆ ಇರಲಿಲ್ಲ ಆದರೆ ಕಾಡ್ಗಿಚ್ಚು ಹಾಗೂ ಅರಣ್ಯ ಲೂಟಿಯಿಂದ ಕಾಡಿನ ಮರಗಳ ಸಂಖ್ಯೆಯೂ ಕ್ಷೀಣಿಸಿದೆ. ಊರಿನಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ತತ್ವಾರ ಉಂಟಾದಂತೆ ಕಾಡಿನಲ್ಲೂ ಪ್ರಾಣಿಗಳಿಗೆ ಜೀವಜಲದ ಸೆಲೆ ದೊರೆಯುತ್ತಿಲ್ಲ.
ಅರಣ್ಯ ಇಲಾಖೆ ಗಮನ ಹರಿಸುತ್ತಿಲ್ಲ
ಇನ್ನು ಸಾಮಾನ್ಯವಾಗಿ ಕಾಡುಪ್ರಾಣಿಗಳು ಕಾಡಿನಲ್ಲಿ ಕೆರೆಗಳು ನೀರಿನ ಒರತೆ ಬತ್ತಿಹೋದಾಗ ನೀರಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ ವನ್ಯಜೀವಿಗಳು ಕೂಗುತ್ತಾ ನೀರರಸುತ್ತಾ ಕಾಡಂಚಿನ ಭಾಗದಲ್ಲಿ ತಿರುಗಾಡುತ್ತಿವೆ ಎಪ್ರಿಲ್ನಿಂದಲೇ ಕಾಡಿನಲ್ಲಿ ನೀರಿನ ಸಮಸ್ಯೆ ಕೆಲವೆಡೆ ಕಾಣಿಸಿದೆ ಕೆರೆ ದುರಸ್ತಿಯತ್ತ ಅರಣ್ಯ ಇಲಾಖೆ ಗಮನಹರಿಸಿದರೆ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.
ಮಳೆ ಬೀಳುವವರೆಗೆ ಮುಗಿಯಲ್ಲ ಸಮಸ್ಯೆ
ಸರಿಯಾಗಿ ಮಳೆ ಬಿದ್ದು ಕಾಡಿನ ನೀರಿನ ಸಮಸ್ಯೆ ನಿವಾರಣೆಯಾಗುವವರೆಗೆ ಅರಣ್ಯಧಿಕಾರಿಗಳು ಪ್ರಾಣಿಗಳಿಗೆ ನೀರು ಕೋಡುವ ಕೆಲಸವನ್ನು ಮಾಡಬೇಕು. ಬಾಯಿಲ್ಲದ ಪ್ರಾಣಿಗಳು ಕುಡಿಯಲು ನೀರು ಕೋಡಿ ಎಂದು ಕೇಳುವುದಿಲ್ಲ ಹೀಗಾಗಿ ನೀರು ಕೊಟ್ಟು ಪ್ರಾಣಿಗಳನ್ನು ಕಾಪಾಡಿ ಎನ್ನುವುದು ಪರಿಸರ ಪ್ರೇಮಿಗಳ ಮನವಿ.
ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು
ಪರಿಸ್ಥಿತಿ ಪ್ರಕೋಪಕ್ಕೆ ಹೋಗುವ ಮುನ್ನ ಅರಣ್ಯ ಅಧಿಕಾರಿಗಳು ಟ್ಯಾಂಕರ್ ಮೂಲಕವಾದರೂ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿ, ವನ್ಯ ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಬೇಕು ಮತ್ತು ಈಗ ಬಿಸಿಲಿನ ಬೇಗೆಗೆ ಜನರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳೂ ಕೂಡ ತತ್ತರಿಸುವಂತಾಗಿದೆ.
ಇದನ್ನೂ ಓದಿ: Mud Pots: ಫ್ರಿಡ್ಜ್‌ಗೊಂದು ಕಾಲ, ಮಡಿಕೆಗೊಂದು ಕಾಲ! ಬೇಸಿಗೆಯಲ್ಲಿ ಬಡವರ ಫ್ರಿಡ್ಜ್‌ಗೆ ಭಾರೀ ಡಿಮ್ಯಾಂಡ್
ಮಾರ್ಚ್ ಆರಂಭದಲ್ಲೇ ಬೀದರ್ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಬಿಸಿಲಿನ ತಾಪಮಾನ ಏರುತ್ತಿರುವಂತೆಯೇ ಕೆರೆ ಕಟ್ಟೆ, ಹಳ್ಳ ಕೊಳ್ಳಗಳಲ್ಲಿ ನೀರು ಬತ್ತುತ್ತಿದೆ. ಈಗಾಗಲೇ ನೀರಿಲ್ಲದೇ ಅನೇಕ ಕಡೆ ಜನರು ಹನಿ ನೀರಿಗೂ ಪರದಾಡುವಂತಾಗಿದೆ. ಹೀಗಾಗಿ ಅರಣ್ಯದಲ್ಲಿ ನೀರಿನ ಕ್ಷಾಮ ಎದುರಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಖಾಲಿಯಾಗಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಮುಂದಾಗಬೇಕು ಎನ್ನುವುದು ಪ್ರಾಣಿ ಪ್ರಿಯರು ಒತ್ತಾಯ.
(ವರದಿ: ಚಮನ್ ಹೊಸಮನಿ, ಬೀದರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ