• Home
 • »
 • News
 • »
 • bidar
 • »
 • Jaggery Success Story: ಬೀದರ್ ಬೆಲ್ಲದ ಸಿಹಿ ಇನ್ನಷ್ಟು ಹೆಚ್ಚಾಯ್ತು! ರೈತರ ನೆಮ್ಮದಿಯೂ ದುಪ್ಪಟ್ಟಾಯ್ತು

Jaggery Success Story: ಬೀದರ್ ಬೆಲ್ಲದ ಸಿಹಿ ಇನ್ನಷ್ಟು ಹೆಚ್ಚಾಯ್ತು! ರೈತರ ನೆಮ್ಮದಿಯೂ ದುಪ್ಪಟ್ಟಾಯ್ತು

X
ಬೀದರ್ ಬೆಲ್ಲದ ರುಚಿ ಇನ್ನಷ್ಟು ಹೆಚ್ಚಾಯ್ತು!

"ಬೀದರ್ ಬೆಲ್ಲದ ರುಚಿ ಇನ್ನಷ್ಟು ಹೆಚ್ಚಾಯ್ತು!"

ಸದ್ಯ ಇವರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಲ್ಲ ತಯಾರಿಕಾ ಘಟಕವನ್ನ ಸ್ಥಾಪಿಸಿ 24 ಗಂಟೆ ಬೆಲ್ಲ ತಯಾರು ಮಾಡುತ್ತಿದ್ದಾರೆ. ಪ್ರತಿದಿನವೂ 50 ಟನ್​ಗಳಷ್ಟು ಕಬ್ಬು ನುರಿಸಿ ಬೆಲ್ಲ ತಯಾರಿಸುತ್ತಾರೆ ಇಲ್ಲಿನ ರೈತರು.

 • Share this:

  ಬೀದರ್: ಸಕ್ಕರೆ ಕಾರ್ಖಾನೆಗಳಿಗೆ ಸೆಡ್ಡು ಹೊಡೆದ ಗಡಿನಾಡಿನ ರೈತರು. ಹೌದು, ಬೀದರ್ ಜಿಲ್ಲೆಯಲ್ಲಿ (Bidar News) ವರ್ಷವಿಡಿ ಬೆವರು ಹರಸಿ ದುಡಿದು ಬೆಳೆಸಿದ ಕಬ್ಬಿಗೆ (Sugarcane) ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ದುಖಃದಲ್ಲಿದ್ದ ಬೀದರ್ ರೈತರ ಹೊಸ ಪ್ರಯತ್ನ ಫಲ ನೀಡಿದೆ.  (Bidar Farmers) ಬೆಂಬಲ ಬೆಲೆ ಕೊಡಿ ಎಂದು ಹೋರಾಡಿದರೂ ಸಕ್ಕರೆ ಕಾರ್ಖಾನೆಗಳು (Sugarcane Factory) ರೈತರು ಬೆಳೆದ ಕಬ್ಬಿಗೆ ಬೆಂಬಲ ಬೆಲೆ ಕೊಡುತ್ತಿರಲಿಲ್ಲ. ಆದರೂ ಮತ್ತಷ್ಟೂ ಬಾರಿ ಕಬ್ಬು ಬೆಳೆದ ರೈತರು ಹೋರಾಟ, ಪ್ರತಿಭಟನೆಗಳನ್ನ (Farmers Protest) ಮಾಡಿದರೂ ಸಹ ಅವರ ಕೈ ಹಿಡಿಯಲು ಯಾರು ಮುಂದೆ ಬಂದಿರಲಿಲ್ಲ. ಆದರೆ ಈ ನೋವುಗಳಿಂದ ಪಾರಾಗಲು ರೈತರು ಹೊಸ ಪ್ರಯತ್ನ ಕೈಗೊಂಡು ಯಶ ಸಾಧಿಸಿದ್ದಾರೆ. 


  ಹೀಗಾಗಿ ಕಾರ್ಖಾನೆಗೆ ಸಾಗಿಸೋ ಬದಲು ಪುಟ್ಟದಾಗಿ ತಮ್ಮ ಹೊಲದಲ್ಲೆ ಆಲೆಮನೆಗಳನ್ನ ಮಾಡಿಕೊಂಡು ಲಾಭ ಪಡೆಯುತ್ತಿರುವ ರೈತರು ಈಗ ನೆಮ್ಮದಿಯಲ್ಲಿ ಇದ್ದಾರೆ. ಹೀಗೆ ಕಬ್ಬು ಬೆಳೆಗಾರು ಆಲೆಮನೆಯಲ್ಲಿ ನೈಸರ್ಗಿಕ ಬೆಲ್ಲ ತಯಾರಿಸಿ, ವಾರಕ್ಕೆ ಸಾವಿರ ಸಾವಿರ ಹಣ ಗಳಿಸುತ್ತಿದ್ದಾರೆ.


  ಇದನ್ನೂ ಓದಿ: Volleyball Tournament: 10 ಜಿಲ್ಲೆಗಳ 150 ಪುರುಷ, 40 ಮಹಿಳಾ ವಾಲಿಬಾಲ್ ಆಟಗಾರರ ಜಿದ್ದಾಜಿದ್ದಿ!


  ಇವರೇ ನೋಡಿ ಸಕ್ಸಸ್ ಹೀರೋ!
  ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸೆ ಗ್ರಾಮದ ರೈತ ಓಂಪ್ರಕಾಶ್ ಪಾಟೀಲ್ ತಮ್ಮ ಜಮೀನಿನಲ್ಲಿ ಆಲೆ ಮನೆ ತಯಾರಿಸಿ ಬೆಲ್ಲ ತಯಾರಿಕೆಗೆ ಮುಂದಾದವರು. ಇವರೇ ನೋಡಿ ಈ ಸ್ಟೋರಿಯ ಹೀರೋ!


  ಇದನ್ನೂ ಓದಿ: Kalaburagi: 111 ದಿನ ಉಪವಾಸ, ಮೌನವ್ರತ ಮಾಡಿದ ಕಲಬುರಗಿಯ ಸ್ವಾಮೀಜಿ!


  24 ಗಂಟೆ ಬೆಲ್ಲ ತಯಾರಿ!
  ಸದ್ಯ ಇವರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಲ್ಲ ತಯಾರಿಕಾ ಘಟಕವನ್ನ ಸ್ಥಾಪಿಸಿ 24 ಗಂಟೆ ಬೆಲ್ಲ ತಯಾರು ಮಾಡುತ್ತಿದ್ದಾರೆ. ಪ್ರತಿದಿನವೂ 50 ಟನ್​ಗಳಷ್ಟು ಕಬ್ಬು ನುರಿಸಿ ಬೆಲ್ಲ ತಯಾರಿಸುತ್ತಾರೆ ಇಲ್ಲಿನ ರೈತರು. ಈ ಮೂಲಕ ಯಶಸ್ಸಿನ ದಾರಿಯನ್ನು ಕಂಡುಕೊಂಡಿದ್ದಾರೆ.


  ವಿಡಿಯೋ, ಮಾಹಿತಿ ಕೃಪೆ: ಚಮನ್‌ ಹೊಸಮನಿ, ಬೀದರ್

  Published by:ಗುರುಗಣೇಶ ಡಬ್ಗುಳಿ
  First published: