ಬೀದರ್: ಲಾಕ್ಡೌನ್ನಿಂದ (Covid Lockdown) ಸಮಸ್ಯೆ ಯಾರಿಗೆ ಆಗಿಲ್ಲ ಹೇಳಿ, ಪ್ರತಿಯೊಬ್ಬರೂ ಲಾಕ್ಡೌನ್ನಿಂದ ಕಷ್ಟಪಟ್ಟಿದ್ದಾರೆ. ಆದರೆ ಆ ಕಷ್ಟಗಳಿಗೆ ಕೆಲವರು ಪರಿಹಾರವನ್ನು ಸಹಾ ಕಂಡುಕೊಂಡಿದ್ದಾರೆ. ಇಂದು ನಾವು ಹೇಳ ಹೊರಟಿರುವುದು ಸಹ ಕೂಡ ಲಾಕ್ಡೌನ್ ಸಮಸ್ಯೆ ದೂರ ಮಾಡಿಕೊಂಡ ಜೀವನದಲ್ಲಿ ಸಕ್ಸಸ್ ಕಂಡ (Success Story) ಮಹಿಳೆಯೋರ್ವರ ಯಶೋಗಾಥೆ.
ಬೀದರ್ ಜಿಲ್ಲೆಯ ಕಮಲ ನಗರ ತಾಲೂಕಿನ ಕೊರೆಕಲ್ ಗ್ರಾಮದ ಅಂಬಿಕಾ ಎಂಬ ಮಹಿಳೆಯ ಕಥೆಯಿದು. ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಜನಪ್ರಿಯತೆಯನ್ನು ಪಡೆದ ಈ ಮಹಿಳೆ ಮನೆಯಲ್ಲಿ ಎಲ್ಇಡಿ ಬಲ್ಬ್ ತಯಾರಿಸುತ್ತಾರೆ.
ಮನೆಯಲ್ಲೇ ಬಲ್ಬ್ ತಯಾರಿ
ಕಳೆದ ಎರಡು ವರ್ಷಗಳಿಂದ ಎಲ್ಇಡಿ ಬಲ್ಬ್ ತಯಾರಿಕೆ ಮಾಡಿ ಅಂಬಿಕಾ ಅವರು ಮನೆ ನಡೆಸುತ್ತಿದ್ದಾರೆ. ಇವರ ಗಂಡ ತಯಾರಾದ ಬಲ್ಬ್ಗಳನ್ನು ಮಾರಾಟ ಮಾಡುತ್ತಾರೆ.
ಇದನ್ನೂ ಓದಿ: Jaggery Success Story: ಬೀದರ್ ಬೆಲ್ಲದ ಸಿಹಿ ಇನ್ನಷ್ಟು ಹೆಚ್ಚಾಯ್ತು! ರೈತರ ನೆಮ್ಮದಿಯೂ ದುಪ್ಪಟ್ಟಾಯ್ತು
ಯೂಟ್ಯೂಬ್ ನೋಡಿ ಕಲಿಕೆ!
ಪ್ರತಿ ದಿನ 50 ರಿಂದ 100 ಬಲ್ಬ್ ಗಳನ್ನು ತಯಾರಿಸುವ ಅಂಬಿಕಾ ಅವರು 9 ವ್ಯಾಟ್ 12 ವ್ಯಾಟ್ 15 ಹಾಗೂ 18 ವ್ಯಾಟ್ ಗಳ ಎಲ್ಇಡಿ ಬಲ್ಬ್ ತಯಾರಿಸುತ್ತಾರೆ. ಕಲಿಕೆಯಲ್ಲಿ
ಬಿಎ ಪದವಿಯನ್ನು ಪಡೆದಿರುವ ಅಂಬಿಕಾ ಅವರು ಯೂಟ್ಯೂಬ್ ನೋಡಿ ಸ್ವತಃ ಉದ್ಯೋಗ ಬಲ್ಬ್ ತಯಾರಿ ಕಲಿತಿದ್ದಾರೆ.
ಇದನ್ನೂ ಓದಿ: Kannada: ಕನ್ನಡ ತಾಯಿಯ ತೇರು ಹೊರಟಿತು, ಆಹಾ! ವೈಭವ ನೋಡಿ
ಗಂಡನ ಸಾಥ್!
ಮಧ್ಯಪ್ರದೇಶದಿಂದ ಕಚ್ಚಾ ವಸ್ತುಗಳು ತಂದು ಬಲ್ಬ್ ತಯಾರಿಕೆ ಮಾಡುತ್ತಾರೆ. ಅಂಬಿಕಾಗೆ ಪತಿ ವೆಂಕಟ್ ಅವರು ಸಾಥ್ ನೀಡುತ್ತಿದ್ದಾರೆ, ಈ ಮೂಲಕ ತಮ್ಮದೇ ಆದ ಸ್ವಂತ ಉದ್ಯೋಗ ಸೃಷ್ಟಿಸಿಕೊಂಡ ಅಂಬಿಕಾ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ