Kusthi: ಗ್ರಾಮೀಣ ಜಾತ್ರೆಯಲ್ಲಿ ದಂಗಲ್ ದರ್ಬಾರ್! ಜಗಜಟ್ಟಿ ಕಾಳಗಕ್ಕೆ ಜನರ ಬಹುಪರಾಕ್

ಆಧುನಿಕ ಕ್ರೀಡೆಗಳ ಹೊಡೆತಕ್ಕೆ ಸಿಲುಕಿ ದೇಶಿ ಕ್ರೀಡೆಗಳು ಮಾಯವಾಗುತ್ತಿವೆ. ಆದ್ರೆ ಬೀದರ್ ಜಿಲ್ಲೆಯಲ್ಲಿ ಯುವ ಕುಸ್ತಿ ಪಟುಗಳ ಸಂಖ್ಯೆ ಹೆಚ್ಚಾಗಿದೆ. ವೀರಭದ್ರೇಶ್ವರ ಜಾತ್ರೆಯಲ್ಲಿ ದಂಗಲ್ ಹವಾ ಜೋರಾಗಿತ್ತು. ಕುಸ್ತಿಪಟುಗಳ ರೋಚಕ ಕಾಳಗ ನೆರೆದ ಜನ್ರ ಮೈಜುಮ್ಮೆನಿಸುವಂತೆ ಇತ್ತು.

ವೀರಭದ್ರೇಶ್ವರ ಜಾತ್ರೆಯಲ್ಲಿ ಕುಸ್ತಿ ಪಂದ್ಯ

ವೀರಭದ್ರೇಶ್ವರ ಜಾತ್ರೆಯಲ್ಲಿ ಕುಸ್ತಿ ಪಂದ್ಯ

 • Share this:
  ಬೀದರ್: ಗ್ರಾಮೀಣ (Rural) ಭಾಗದಲ್ಲಿ ಕ್ರೀಡೆ (Sports) ಅಂದರೆ ಕೇಳಬೇಕಾ? ಅಲ್ಲಿ ಶಿಳ್ಳೆ (Whistle), ಚಪ್ಪಾಳೆ (Claps) ಕೇಕೆ ಹೀಗೆ ಪ್ರೋತ್ಸಾಹ ಇರುತ್ತದೆ. ಇನ್ನು ಆ ಜಾತ್ರೆಯಲ್ಲಿ (Jathre) ಕುಸ್ತಿ (Kusthi) ಭರಾಟೆ ಜೋರಾಗಿರುತ್ತೆ. ಯುವ ಜಟ್ಟಿಗಳ ಕಾಳಗ ನೋಡುಗರ ಮೈ ನವಿರೇಳುವಂತಿತ್ತು. ವಿವಿಧ ರಾಜ್ಯದಿಂದ ಬಂದು ಕುಸ್ತಿಯಲ್ಲಿ ಭಾಗಿಯಾಗಿದ್ರು ಅಖಾಡದಲ್ಲಿನ ಎದುರಾಳಿಯನ್ನು ಗೆಲ್ಲಲೇಬೇಕು ಅನ್ನೋ ಛಲ ಯುವ ಪೈಲ್ವಾನರಲ್ಲಿತ್ತು. ಅಖಾಡದಲ್ಲಿ ಯುವ ಕುಸ್ತಿಪಟುಗಳ ಸೆಣಸಾಟಕ್ಕೆ ನೆರೆದ ಅಪಾರ ಜನ ಹುರಿದುಂಬಿಸಿದ್ರು. ಕಲರ್ ಫುಲ್ ದಂಗಲ್ ಜಾತ್ರೆ ನೋಡಿ ಜನ್ರು ಫುಲ್ ಎಂಜಾಯ್ ಮಾಡಿದ್ರು.

  ಜಾತ್ರೆ ಅಖಾಡದಲ್ಲಿ ಯುವ ಜಟ್ಟಿಗಳ  ಭರ್ಜರಿ ಕಾಳಗ

  ದೇಶಿ ಕ್ರೀಡೆ ಎಂದ್ರೆನೆ ಅದು ಕಲರ್ ಫುಲ್ ಆಗಿರುತ್ತದೆ. ಕಲ್ಯಾಣ ಕರ್ನಾಟಕ ಬಾಗದ ಜಾತ್ರೆಯಲ್ಲಿ ಕಂಡುಬಂದ  ಝಲಕ್.. ಬೀದರ್ ತಾಲೂಕಿನ ಅಲಿಯಂಬರ ಗ್ರಾಮದ ವೀರಭದ್ರೇಶ್ವರ ರವರ 75 ಜಯಂತೊತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಜಾತ್ರೆಯಲ್ಲಿ ಕಂಡು ಬಂದ ಭರ್ಜರಿ ಕುಸ್ತಿ. ಆಧುನಿಕ ಕ್ರೀಡೆಗಳ ಹೊಡೆತಕ್ಕೆ ಸಿಲುಕಿ ದೇಶಿ ಕ್ರೀಡೆಗಳು ಮಾಯವಾಗುತ್ತಿವೆ. ಆದ್ರೆ ಬೀದರ್ ಜಿಲ್ಲೆಯಲ್ಲಿ ಯುವ ಕುಸ್ತಿ ಪಟುಗಳ ಸಂಖ್ಯೆ ಹೆಚ್ಚಾಗಿದೆ.

  ವೀರಭದ್ರೇಶ್ವರ ಜಾತ್ರೆಯಲ್ಲಿ ಕುಸ್ತಿ ದಂಗಲ್

  ವೀರಭದ್ರೇಶ್ವರ ಜಾತ್ರೆಯಲ್ಲಿ ದಂಗಲ್ ಹವಾ ಜೋರಾಗಿತ್ತು. ಕುಸ್ತಿಪಟುಗಳ ರೋಚಕ ಕಾಳಗ ನೆರೆದ ಜನ್ರ ಮೈಜುಮ್ಮೆನಿಸುವಂತೆ ಇತ್ತು. ಚಿಟಗುಪ್ಪ ತಾಲೂಕಿನ ಮಿನಕೆರಾ ಗ್ರಾಮದ  ನಾಗೇಶ ಕುಸ್ತಿಪಟು, ಬೀದರ್ ನ ಶಿವಕುಮಾರ್ ಅಖಾಡಕ್ಕೆ ಇಳಿದಿದ್ರು. ನಾಗೇಶ್  ಹಾಗೂ ಶಿವಕುಮಾರ್ ನಡುವೆ ಹಣಾಹಣಿ ಜೋರಾಗಿತ್ತು. ನೋಡುವಷ್ಟರಲ್ಲೇ ನಾಗೇಶ್ ಎದುರಾಳಿ ಶಿವಕುಮಾರ್ ನನ್ನು ನೆಲಕ್ಕುರುಳಿಸಿ ಜಯದ ಕೆಕೆ ಹಾಕಿದ್ರು.

  ಇದನ್ನೂ ಓದಿ: Mud Pots: ಫ್ರಿಡ್ಜ್‌ಗೊಂದು ಕಾಲ, ಮಡಿಕೆಗೊಂದು ಕಾಲ! ಬೇಸಿಗೆಯಲ್ಲಿ ಬಡವರ ಫ್ರಿಡ್ಜ್‌ಗೆ ಭಾರೀ ಡಿಮ್ಯಾಂಡ್

   ರಣ ರೋಚಕ ಜಟ್ಟಿಗಳ ಕಾಳಗ

  ನಾ ಗೆಲ್ಲಲೇಬೇಕು ಅಂತ ಹಟತೊಟ್ಟ ಯುವ ಜಟ್ಟಿಗಳ ಕಾಳಗ ಅಬ್ಬಾ ಬಲು ರೋಚಕವಾಗಿತ್ತು. ರಾಜ್ಯ ಮಟ್ಟದಲ್ಲಿ ಆಟವಾಡಿ ಜಗದ ಜಟ್ಟಿಗಳು ಕಾಳಗ ಭರ್ಜರಿಯಾಗಿತ್ತು. ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಗೆ ಪ್ರತಿ ವರ್ಷ ಬರುತ್ತೆನೆ. ಆದ್ರೆ ಜಾತ್ರೆಗೆ ಬಂದಾಗ ಇಲ್ಲಿ ಕುಸ್ತಿ ಆಟವನ್ನು ನೋಡಿಕೊಂಡು ಹೋಗುತ್ತಿದ್ದೆ. ಆದ್ರೆ ಇವತ್ತು ಮಣ್ಣಿನ ಅಖಾಡದಲ್ಲಿ ಇಳಿದು ನಾಲ್ಕು ಸುತ್ತು ಕುಸ್ತಿಯನ್ನು ಆಡಿದ್ದೆನೆ ಇಲ್ಲಿ ಕುಸ್ತಿ ಭಾಗವಹಿಸಿದ್ದು ಮನಸ್ಸಿಗೆ ಬಹಳಷ್ಟು ಸಂತೋಷವಾಗುತ್ತದೆ. ಮತ್ತು ಜಾತ್ರೆಯ ಮಣ್ಣಿನಲ್ಲಿ ಸೆಣಸಾಟ ಬಲು ಖುಷಿ ನೀಡಿದೆ ಅನ್ನೋದು ಕುಸ್ತಿಪಟುಗಳದ್ದು.

  ಶಿಳ್ಳೆ, ಚಪ್ಪಾಳೆ ತಟ್ಟಿ, ಹುರಿದುಂಬಿಸಿದ ಜನ

  ಇನ್ನು ಕುಸ್ತಿ ಪಟುಗಳು  ಮಣ್ಣಿನಲ್ಲಿ ಸೆಣಸಾಟವಾಡುತ್ತಿದ್ರೆ ಯುವ ದಂಗಲ್ ಕಲಿಗಳ ಆಟಕ್ಕೆ ನೇರೆದಿರೋ  ಜನ್ರ ಶಿಳ್ಳೆ, ಚಪ್ಪಾಳೆ ಬಲು ಜೋರಾಗಿತ್ತು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಹಾಗೂ ಬೀದರ್ ಜಿಲ್ಲೆಗಳ ಕುಸ್ತಿ ಪಟುಗಳು ಅಖಾಡಕ್ಕೆ ಗೆಳೆಯರ ಬಳಗ ಹುಂ ಹೊಡಿ ಬಿಡಬ್ಯಾಡ ಅನ್ನೋ ಮೂಲಕ ಗೆಳೆಯನಿಗೆ ಪ್ರೋತ್ಸಾಹ ನೀಡುತ್ತಿದ್ರು. ಎದುರಾಳಿ ಕೂಡ ಅಷ್ಟೇ ಸ್ಟ್ರಾಂಗ್ ಇರೋದ್ರಿಂದ ಅಖಾಡದಲ್ಲಿ ಆಟ ಕಠಿಣವಾಗಿತ್ತು. ಆದ್ರೂ ದೇಶಿ ಕ್ರೀಡೆಯ ಆಟದ ಸವಿಯನ್ನು ಮಾತ್ರ ನೋಡುಗ ಪ್ರೇಕ್ಷಕ ಪ್ರಭು  ಮೈಜುಮ್ ಎನ್ನುವಂತಿತ್ತು

  ಕುಸ್ತಿ ಗೆದ್ದರೆ ಬೆಳ್ಳಿ ಕಡಗ ಉಡುಗೊರೆ

  ಕುಸ್ತಿ ಆಯೋಜಕರು ಮನೋಹರ ಮಾತನಾಡಿ ಗ್ರಾಮೀಣ ಕ್ರೀಡೆ ಅಂದ್ರೆ ಅದು ಕುಸ್ತಿ ಹೀಗಾಗಿ. ಈ ಕುಸ್ತಿ ಉಳಿಸಿಕೊಳ್ಳಲು ಗ್ರಾಮದ ಜಾತ್ರೆಯಲ್ಲಿ ಕುಸ್ತಿ ಆಯೋಜನೆ ಮಾಡಲಾಗಿದೆ ಕುಸ್ತಿ ಯಲ್ಲಿ ಬಾಗವಹಿಸಿದ ಕುಸ್ತಿ ಪಟುಗಳಿಗೆ 500 ರಿಂದ 1000 ರೂಪಾಯಿ ಕೊಡಲಾಗುತ್ತದೆ. ಮತ್ತು ಪ್ರಥಮ ಸ್ಥಾನದಲ್ಲಿ ಬಂದವರಿಗೆ ಬೆಳ್ಳಿ ಕಡಗ ನೀಡಲಾಗುತ್ತದೆಂದ್ರು.

  ಇದನ್ನೂ ಓದಿ: Corona 4th Wave: "ಕೊರೋನಾದಿಂದ ಕಾಪಾಡಮ್ಮ" ಅಂತ ಸೋಂಕಿನ ಮಾರಿಯಮ್ಮನಿಗೆ ಪ್ರಾಣಿ ಬಲಿ ಕೊಟ್ಟ ಜನರು!

  ಇಂದಿನ ಆಧುನಿಕ ಭರಾಟೆಯಲ್ಲಿ  ಗ್ರಾಮೀಣ ಭಾಗದಲ್ಲಿನ ಕ್ರಿಡೆಗಳು ನಶಿಸಿ ಹೋಗುತ್ತಿವೆ ಹೀಗಾಗಿ ದೇಶಿ ಕ್ರೀಡೆ ಉಳಿಬೇಕು. ಮತ್ತು ಯುವಕರು ಕುಸ್ತಿ ಆಟಕ್ಕೆ ಪ್ರೋತ್ಸಾಹಿಸಬೇಕು ಅನ್ನೋದು ಇಲ್ಲಿನ ಜನ್ರದ್ದು.

  (ವರದಿ: ಚಮನ್ ಹೊಸಮನಿ‌, ಬೀದರ್)
  Published by:Annappa Achari
  First published: