Petrol Golmaal: ಕರ್ನಾಟಕದ ಪೆಟ್ರೋಲ್-ಡೀಸೆಲ್ ತೆಲಂಗಾಣದಲ್ಲಿ ಮಾರಾಟ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬೀದರ್ ಜಿಲ್ಲಾ ಕೇಂದ್ರದಿಂದ ತೆಲಂಗಾಣ ರಾಜ್ಯದ ಗಡಿ 12 ಕಿಲೋಮೀಟರ್ ಮಾತ್ರವಿದೆ. ಇದೇ ಈಗ ಕಾನೂನು ಬಾಹಿರ ಚಟುವಟಿಕೆ ಹೆಚ್ಚಲು ಕಾರಣವಾಗಿದೆ.

 • Share this:

  ಬೀದರ್: ತೈಲ ಬೆಲೆಯಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ದರವಿದೆ. ಕರ್ನಾಟಕ (Karnataka Petrol Price) ಹಾಗೂ ತೆಲಂಗಾಣ ರಾಜ್ಯಕ್ಕೆ ಹೋಲಿಸಿದರೆ ತೈಲ ದರದಲ್ಲಿ (Oil Price) ಒಂಬತ್ತರಿಂದ ಹತ್ತು ರೂಪಾಯಿ ವ್ಯತ್ಯಾವಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಪೆಟ್ರೋಲ್- ಡೀಸೆಲ್ ಬಂಕ್ ಮಾಲೀಕರು ಅಕ್ರಮವಾಗಿ ಕರ್ನಾಟಕದ ತೈಲವನ್ನ ತೆಲಂಗಾಣಕ್ಕೆ (Telangana Petrol Price) ತೆಗೆದುಕೊಂಡು ಮಾರಾಟ ಮಾಡುತ್ತಿದ್ದಾರೆ.


  ಹೌದು, ಬೀದರ್ ಜಿಲ್ಲೆ ಎರಡು ರಾಜ್ಯದ ಗಡಿಯಲ್ಲಿರುವ ಜಿಲ್ಲೆ. ಬೀದರ್ ಜಿಲ್ಲಾ ಕೇಂದ್ರದಿಂದ ತೆಲಂಗಾಣ ರಾಜ್ಯದ ಗಡಿ 12 ಕಿಲೋಮೀಟರ್ ಮಾತ್ರವಿದೆ. ಇದೇ ಈಗ ಕಾನೂನು ಬಾಹಿರ ಚಟುವಟಿಕೆ ಹೆಚ್ಚಲು ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಕಾನೂನು ಬಾಹಿರ ಸಾಗಾಟ ಜೋರಾಗಿದೆ.


  ಪೆಟ್ರೋಲ್-ಡೀಸೆಲ್ ದರದಲ್ಲಿ ಇಷ್ಟೆಲ್ಲ ವ್ಯತ್ಯಾಸ!
  ಕರ್ನಾಟಕಕ್ಕೂ ತೆಲಂಗಾಣಕ್ಕೂ ಪೆಟ್ರೋಲ್ ಬೆಲೆಯಲ್ಲಿ ಸುಮಾರು 8 ರಿಂದ 9 ರೂಪಾಯಿವರೆಗೆ ವ್ಯತ್ಯಾಸವಿದೆ. ಇನ್ನೂ ಡೀಸೆಲ್ ಬೆಲೆ ನೋಡುವುದಾದರೆ ಕರ್ನಾಟಕ್ಕೂ ತೆಲಂಗಾಣಕ್ಕೂ ಡೀಸೆಲ್ ಬೆಲೆಯಲ್ಲಿ 10 ರೂಪಾಯಿ ವ್ಯತ್ಯಾಸವಿದೆ.  ಕರ್ನಾಟಕದಲ್ಲಿಯೇ ಪೆಟ್ರೋಲ್-ಡೀಸೆಲ್ ದರ ಕಡಿಮೆಯಿದೆ. ಹೀಗಾಗಿಯೇ ಕರ್ನಾಟಕಕ್ಕೆ ಪೂರೈಕೆಯಾಗಿದ್ದ ಪೆಟ್ರೋಲ್-ಡೀಸೆಲ್​ನ್ನ ತೆಲಂಗಾಣಕ್ಕೆ  ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಈ ಗೋಲ್​ಮಾಲ್​ಗೆ ಕಡಿವಾಣ ಹಾಕಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.


  ಟ್ಯಾಂಕರ್ ಮೇಲೆ ದಾಳಿ!
  ಇನ್ನು ಈ ವಿಚಾರವನ್ನ ಗಂಭಿರವಾಗಿ ಪರಿಣಿಸಿರುವ ನೂತನವಾಗಿ ಬೀದರ್ ಜಿಲ್ಲೆಗೆ ಎಸ್​ಪಿಯಾಗಿ ಬಂದಿರುವ ಚನ್ನಬಸವಣ್ಣ  ಅವರು ಒಂದೇ ವಾರದಲ್ಲಿ ಎರಡು ಪೆಟ್ರೋಲ್ ಬಂಕ್​ಗಳ ಮೇಲೆ ದಾಳಿ ಮಾಡಿದ್ದಾರೆ. ತೆಲಂಗಾಣ ರಾಜ್ಯಕ್ಕೆ ಹೋಗುತ್ತಿದ್ದ ಎರಡು ತೈಲ ತುಂಬಿದ ಟ್ಯಾಂಕರ್​ಗಳನ್ನ ಪೊಲೀಸರು ತಮ್ಮ ವಶಕ್ಕೆ ಪಡೆದು ಬಂಕ್ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.‘


  ಇದನ್ನೂ ಓದಿ: Bidar: ಸೇಬಿಗೆ ಸೆಡ್ಡು ಹೊಡೆಯುತ್ತಿದೆ ಬೀದರ್ ಬೋರೆ!
  ಅಕ್ಕಪಕ್ಕದ ರಾಜ್ಯದಲ್ಲಿಯೇ ಹತ್ತು ರೂಪಾಯಿವರೆಗೆ ತೈಲ ಬೆಲೆಯಲ್ಲಿ ಹೆಚ್ಚು ಕಡಿಮೆ ಇರೋದರಿಂದಾಗಿ ತೆಲಂಗಾಣದ ಗಡಿ ಗ್ರಾಮದವರು ಕರ್ನಾಟಕಕ್ಕೆ ಬಂದು ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಕರ್ನಾಟಕ ಗಡಿಯಲ್ಲಿರುವ ತೆಲಂಗಾಣದ ಪೆಟ್ರೋಲ್ ಬಂಕ್​ನಲ್ಲಿ ಯಾರೂ ಕೂಡಾ ಪೆಟ್ರೋಲ್ ಹಾಕಿಸುತ್ತಿಲ್ಲ.


  ಇದನ್ನೂ ಓದಿ: Wrestling Match: ಜಗಜಟ್ಟಿಗಳ ಕುಸ್ತಿ, ಬೀದರ್​ನಲ್ಲಿ ಮೈನವಿರೇಳಿಸಿದ ಕುಸ್ತಿಪಟುಗಳ ಕಸರತ್ತು!


  ಒಂದು ರಾಜ್ಯದಿಂದ ಮತ್ತೊಂದು ರಾಜ್ಯದಲ್ಲಿ ತೈಲ ಬೆಲೆಯಲ್ಲಿ ಏರಿಳಿತವಿರುವುದರಿಂದ ಅದನ್ನ ಪೆಟ್ರೋಲ್ ಬಂಕ್ ಮಾಲೀಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಕ್ರಮವಾಗಿ ಪ್ರತಿದಿನವೂ ನೂರಾರು ಲೀಟರ್ ತೈಲವನ್ನ ಪಕ್ಕದ ತೆಲಂಗಾಣ ರಾಜ್ಯಕ್ಕೆ ಸಾಗಿಸಿ ಸುಲಭವಾಗಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಇದಿರಿಂದಾಗಿ ತೆರಿಗೆ ವಂಚನೆಯಾಗುತ್ತಿದ್ದು ಪೊಲೀಸರು ಈ ದಂದೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಬೇಕಿದೆ.


  ವರದಿ: ಚಮನ್ ಹೊಸಮನಿ, ನ್ಯೂಸ್ 18 ಕನ್ನಡ ಬೀದರ್

  Published by:ಗುರುಗಣೇಶ ಡಬ್ಗುಳಿ
  First published: