ಬೀದರ್: ಬಿಸಿಲು ಏರುತ್ತಿದೆ ನೆತ್ತಿ ಸುಡುತ್ತಿದೆ. ಸೂರ್ಯನ (Sun) ತಾಪಮಾನಕ್ಕೆ ಗಡಿನಾಡಿನ ಬಾಗದ ಜನ್ರ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ (Summer Heat) ತಾಪದಿಂದ ತಪ್ಪಿಸಿಕೊಳ್ಳಲು ಮಣ್ಣಿನ ಮಡಿಕೆಗಳ (Mud Pots) ಮೊರೆ ಹೋಗುತ್ತಿದ್ದು ಈ ಬಾರಿ ಮಣ್ಣಿನ ಮಡಿಕೆಗಳಿಗೆ ಬಾರಿ ಬೇಡಿಕೆ (Demand) ಉಂಟಾಗಿದೆ. ಮಡಿಕೆಯಲ್ಲಿನ ನೀರು (Water) ಸೇವನೆ ಮಾಡಿದ್ರೆ ಆರೋಗ್ಯ (Health) ಚನ್ನಾಗಿರುತ್ತದೆಂದು ಮಡಿಕೆಗಳ ಖರೀದಿ ಬಲು ಜೋರಾಗಿ ನಡೆಯುತ್ತಿದೆ. ಬಿರು ಬಿಸಿಲು ಗಡಿನಾಡಿನಲ್ಲಿ ನೆತ್ತಿ ಸುಡುತ್ತಿದೆ ದೇಸಿ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ದೇಸಿ ವಸ್ತುಗಳ ಬಳಕೆ ಬೇಸಿಗೆಯ ಆರಂಭದಲ್ಲಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಏರುತ್ತಿದೆ ಕುಡಿಯುವ ನೀರಿಗಾಗಿ ಮಣ್ಣಿನ ಮಡಿಕೆಗೆ ಮೊರೆ ಹೋಗಿದ್ದಾರೆ.
ಫ್ರಿಡ್ಜ್ ಬದಲು ಮಣ್ಣಿನ ಮಡಿಕೆಗೆ ಡಿಮ್ಯಾಂಡ್
ಬಾಯಾರಿಕೆ ಹಾಗೂ ಆರೋಗ್ಯದ ದೃಷ್ಟಿಯಿಂದ ಜನ್ರು ಪ್ರಿಡ್ಜ್ ಗಿಂತ ಮಣ್ಣಿನ ಮಡಿಕೆಯ ನೀರೇ ತಂಪೆಂದು ತಿಳಿದು ಮಡಿಕೆ ಖರೀದಿ ಜೋರು ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಬಾಗದಲ್ಲಿ ಸೂರ್ಯನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಯಿ ಆರುತಿದೆ ಇದರಿಂದ ತಪ್ಪಿಸಿಕೊಳ್ಳಲು ಬಡವರ ಪ್ರೀಡ್ಜ್ ಅಂತಲೆ ಕರೆಸಿಕೊಳ್ಳುವ ಮಡಿಕೆಗಳಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದ್ದು ಜನ್ರು ಕೂಡಾ ಮಡಿಕೆ ಮೊರೆ ಹೋಗುತ್ತಿದ್ದು ಸಾಮಾನ್ಯವಾಗಿದೆ.
ಆರೋಗ್ಯದ ದೃಷ್ಟಿಯಿಂದ ಮಡಿಕೆ ಉತ್ತಮ
ಗಡಿನಾಡಿನಲ್ಲಿ ನೆತ್ತಿ ಸುಡುತ್ತಿದೆ ದೇಸಿ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ದೇಸಿ ವಸ್ತುಗಳ ಬಳಕೆ ಬೇಸಿಗೆಯ ಆರಂಭದಲ್ಲಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಏರುತ್ತಿದೆ ಕುಡಿಯುವ ನೀರಿಗಾಗಿ ಮಣ್ಣಿನ ಮಡಿಕೆಗೆ ಮೊರೆ ಹೋದ ಜನ್ರು. ಬಾಯಾರಿಕೆ ಹಾಗೂ ಆರೋಗ್ಯದ ದೃಷ್ಟಿಯಿಂದ ಜನ್ರು ಪ್ರಿಡ್ಜ್ಗಿಂತ ಮಣ್ಣಿನ ಮಡಿಕೆಯಲ್ಲಿನ ನೀರೇ ತಂಪೆಂದು ತಿಳಿದು ಮಡಿಕೆ ಖರೀದಿ ಕೂಡಾ ಜೋರಾಗುತ್ತಿದೆ. ಪ್ರತಿದಿನ ತಾಪಮಾನ ಏರುಗತಿಯಲ್ಲಿ ಸಾಗಿದ್ದು ಗಡಿನಾಡಿನ ಜನ್ರು ಮಣ್ಣಿನ ಮಡಿಕೆಗಳ ಕಡೆಗೆ ಜನ್ರು ಹೆಚ್ಚು ಗಮನ ಸೇಳೆಯುತ್ತಿದ್ದಾರೆ.
ಇದನ್ನೂ ಓದಿ: Summerನಲ್ಲಿ ವಿದ್ಯುತ್ ಅಭಾವ ಎದುರಿಸಲು ಹೇಗೆ ಸಿದ್ದವಾಗಿದೆ ರಾಜ್ಯ?
ಕುಂಬಾರರಿಗೆ ಕೈತುಂಬಾ ಕೆಲಸ
ಬೀದರ್ ಜಿಲ್ಲೆಯಲ್ಲಿ ಈ ಬಾರಿಯ ಬೆಸಿಗೆಯ ಬಿಸಿಲ ಆರಂಭದಲ್ಲೇ ಜನರ ನೆತ್ತಿ ಸುಡುತ್ತಿದೆ. ಹೀಗಾಗಿ ಇಲ್ಲಿನ ಕುಂಬಾರರ ತಯಾರಿಸಿದ ಮಣ್ಣಿನ ಮಡಕೆಗಳಿಗೆ ಹೆಚ್ಚಾಗಿದೆ ಬೇಡಿಕೆ. ಹಣವಂತರೂ ಆಧುನಿಕವಾಗಿ ರೆಪ್ರಿಜರೇಟರ್ಗಳ ಮೊರೆ ಹೋದರೆ ಮಧ್ಯಮ ಹಾಗೂ ಕೆಳವರ್ಗದ ಜನರಂತೂ ದೇಸಿ ಮಡಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ. 24 ಗಂಟೆಯು ತಣ್ಣನೆಯ ನೀರು ಸಿಗುವ ಈ ಮಣ್ಣಿನ ಮಡಿಕೆಯಲ್ಲಿ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ.
ಒಂದು ಕಾಲದಲ್ಲಿ ಅಪಾರವಾದ ಬೇಡಿಕೆಯನ್ನು ಹೊಂದಿದ ಮಣ್ಣಿನ ಮಡಿಕೆಯು ನಂತರ ದಿನಗಳಲ್ಲಿ ಬೇಡಿಕೆ ಕಡಿಮೆಯಾಗಿತ್ತು. ತನ್ನದೆ ವಿಶಿಷ್ಟತೆಯನ್ನು ಹೊಂದಿದ ಮಣ್ಣಿನ ಮಡಿಕೆ ಸಾವಿರಾರು ವರ್ಷಗಳಿಂದಲೂ ತನ್ನದೆ ಆದ ಆರೋಗ್ಯಕರ ಇತಿಹಾಸ ಹೊಂದಿದೆ. ಹೀಗಾಗಿ ಬೀದರ್ ನ ಗಡಿ ಜಿಲ್ಲೆಯಲ್ಲಿ ಮಣ್ಣಿನ ಮಡಿಕೆ ಗೆ ಈ ಬಾರಿ ಹೆಚ್ಚಾಗಿದೆ...
ವಿವಿಧ ಮಾದರಿಯ ಮಡಿಕೆ ಲಭ್ಯ
ಇನ್ನು ಮಣ್ಣಿನ ಮಡಿಕೆಯನ್ನು ಆರೋಗ್ಯದ ಕಾಳಜಿ ಯಿಂದ ಜನ್ರು ಬಡವರು ಶ್ರೀಮಂತರು ಎನ್ನುವ ಬೇಧವಿಲ್ಲದೆ ಮಡಿಕೆ ಖರೀಯಲ್ಲಿ ತೊಡಗಿದ್ದಾರೆ. ಸಾಮಾನ್ಯವಾಗಿ ಮಣ್ಣಿನ ಮಡಿಕೆಯನ್ನು ಹೆಚ್ಚಾಗಿ ಬಳಸುವುದು ಬಡ ಜನರು. ಕಾಲ ಬದಲಾದಂತೆ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಂಡಿದ್ದು, ಇತ್ತೀಚಿನ ದೇಸಿ ಟ್ರಂಡ್ಗೆ ತಕ್ಕಂತೆ ಮಣ್ಣಿನಿಂದ ಮಾಡಿದ ಜಾಮ್, ಸುರೈಯ, ರಂಜನ್, ಹಂಡಿ, ಅಡುಗೆ ಬೊಗನಿ, ನೀರಿನ ಬಾಟಲ್, ಜಗ್, ಗ್ಲಾಸ್ ತೆಗೆದುಕೊಂಡ ಹೋಗುತ್ತಿದ್ದ ಜನ್ರು ಹೀಗೆ ಹತ್ತು ಹಲವು ಮಣ್ಣಿನ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ.
ಈ ಹಿಂದೆ ಬಡವರು ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ಜನ್ರು ಮಣ್ಣಿನ ಮಡಕೆಯಲ್ಲೆ ಆಹಾರ ತಯಾರಿಸುತ್ತಿದ್ರು. ಹೀಗಾಗಿ ಮಣ್ಣಿನ ಮಡಿಕೆಗಳಿಂದ ಬಳಕೆ ಕೂಡ ಹೆಚ್ಚಾಗಿ ಇರುತ್ತಿತ್ತು. ಕಾಲ ಬದಲಾದಂತೆ ಅಲ್ಯೂಮಿನಿಯಂ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತುಗಳಿಗೆ ಮಾರು ಹೋಗಿದ್ದ ಜನ್ರು.ಹೀಗಾಗಿ ಮಣ್ಣಿನ ಮಡಿಕೆಗಳು ಅಂದ್ರೆ ಜನ್ರು ಇಷ್ಟ ಪಡುತ್ತಿರಲಿಲ್ಲಾ ಮಡಿಕೆಗಳ ಬಳಕೆಯಿಂದ ಜನ್ರು ಹಿಂದಕ್ಕೆ ಸರಿದಿದ್ರು.
ಹಳೆ ಮಡಿಕೆಗಳಿಗೂ ಈಗ ಬಲು ಬೇಡಿಕೆ
ಕೊರೊನಾ ಕಾಲದಲ್ಲಿ ಖರ್ಚಾಗದೆ ಉಳಿದಿದ್ದ ಮಣ್ಣಿನ ಮಡಿಕೆಗಳು. ಈಗ ಮತ್ತೆ ಮಣ್ಣಿನ ಮಡಿಕೆಯ ಬೇಡಿಕೆ ಹೆಚ್ಚಾಗಿದೆ ಮತ್ತು ಬೆಲೆಯೂ ಹೆಚ್ಚಾಗಿದೆ ಮಣ್ಣಿನ ಮಡಿಕೆಗಳು 200 ರಿಂದ 300 ರೂಪಾಯಿ ವರೆಗೆ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಮಡಿಕೆಗಳು. ವಿವಿಧ ಆಕಾರಗಳಲ್ಲಿ ಮಡಿಕೆಗಳು ಸಾರ್ವಜನಿಕರ ಬಳಕೆಗೆ ಸಿಗುತ್ತಿರುವುದು ವಿಶೇಷ...
ಇದನ್ನೂ ಓದಿ: April Crops: ರೈತರೇ, ಏಪ್ರಿಲ್ನಲ್ಲಿ ಈ ಬೆಳೆ ಬೆಳೆದರೆ ಲಾಭ ಗ್ಯಾರಂಟಿ!
ಆಧುನಿಕತೆಯ ಪ್ಲಾಸ್ಟಿಕ್ ಭರಾಟೆ ಯಲ್ಲಿ ಮಣ್ಣಿನ ಮಡಿಕೆಗಳ ಬಳಕೆ ಮಾಡುವುದನ್ನು ನಿಲ್ಲಿಸಿದ ಜನ್ರು ಈಗ ಆರೋಗ್ಯ ದೃಷ್ಟಿಯಿಂದ ಮಡಿಕೆಗಳನ್ನು ಕೊಳ್ಳುಲು ಮುಂದಾಗುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಮೂಲೆಗೆ ಸೇರಿದ್ದ ಮಡಿಕೆಗಳು ಈಗ ಬಾರಿ ಬೇಡಿಕೆ ಹೆಚ್ಚಾಗಿದೆ.
(ವರದಿ: ಚಮನ್ ಹೊಸಮನಿ, ಬೀದರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ