ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ (Bidar News) ಈಗ ಉತ್ಸವದ ಸುಗ್ಗಿ! ಬೀದರ್ ಉತ್ಸವದ (Bidar Utsav) ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ವಿವಿಧ ಅದ್ಭುತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಲಾತಂಡಗಳಿಂದ ಮೆರವಣಿಗೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ, ಬೀದರ್ ಉತ್ಸವದ ಇನ್ನೊಂದು ವಿಶೇಷ ಅಂದ್ರೆ ಶ್ವಾನ ಪ್ರದರ್ಶನ.
ಇದನ್ನೂ ಓದಿ: Wrestling Match: ಜಗಜಟ್ಟಿಗಳ ಕುಸ್ತಿ, ಬೀದರ್ನಲ್ಲಿ ಮೈನವಿರೇಳಿಸಿದ ಕುಸ್ತಿಪಟುಗಳ ಕಸರತ್ತು!
ಹೌದು, ಬೀದರ್ ಉತ್ಸವದಲ್ಲಿ ವಿವಿಧ ಜಾತಿಯ ದೇಶಿ, ವಿದೇಶಿ ತಳಿಯ ಶ್ವಾನಗಳನ್ನು ನೋಡೋದೇ ಕಣ್ಣಿಗೆ ಹಬ್ಬದಂತಿತ್ತು.
ಇದನ್ನೂ ಓದಿ: Bidar: ಸೇಬಿಗೆ ಸೆಡ್ಡು ಹೊಡೆಯುತ್ತಿದೆ ಬೀದರ್ ಬೋರೆ!
ಬಗೆಬಗೆಯ ನಾಯಿಗಳನ್ನ ನೋಡೋದೇ ಚಂದ!
ಸ್ವಿಡ್ಜ್, ಫಗ್, ಪಮೋರಿ, ರಾರಯಟ್ ವೀಲರ್, ಪಗ್, ಡ್ಯಾಷ್ ಹೌಂಡ್ ತಳಿಯ ಶ್ವಾನಗಳು ಬೀದರ್ ಉತ್ಸವದ ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಒಟ್ಟು 120ಕ್ಕೂ ಹೆಚ್ಚು ತಳಿಯ ನಾಯಿಗಳನ್ನು ಕಂಡು ಬೀದರ್ ಮಂದಿ ಪುಳಕಿತರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ