• Home
 • »
 • News
 • »
 • bidar
 • »
 • Bidar News: ತಿರುಪತಿ ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ, ಇನ್ನಷ್ಟು ಸಲೀಸು!

Bidar News: ತಿರುಪತಿ ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ, ಇನ್ನಷ್ಟು ಸಲೀಸು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bidar To Tirupati New Special Trains: ಎರಡು ರೈಲುಗಳ ಸಂಚಾರದ ನಡುವಿನ 30 ಗಂಟೆಗಳ ಕಾಲದಲ್ಲಿ ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ದರ್ಶನ ನಡೆಸಬಹುದಾಗಿದೆ. 

 • Share this:

  ಬೀದರ್: ಕಲ್ಯಾಣ ಕರ್ನಾಟಕದ (Kalyan Karnatak)ಜನರಿಗೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಬೀದರ್​ನಿಂದ ತಿರುಪತಿಗೆ ವಿಶೇಷ ರೈಲನ್ನು (Bidar To Tirupati Special Train) ಆರಂಭಿಸಲಾಗಿದೆ. ಬೀದರ್​ನಿಂದ ಹುಮನಾಬಾದ್ ಮಾರ್ಗವಾಗಿ ತಿರುಪತಿ ತಿಮ್ಮಪ್ಪನಲ್ಲಿಗೆ (Tirupati Darshan) ವಿಶೇಷ ರೈಲು ಆರಂಭಿಸುವ ಬಗ್ಗೆ ಕೇಂದ್ರ ಸಚಿವ, ಬೀದರ್ ಸಂಸದ ಭಗವಂತ್ ಖೂಬಾ ಮಾಹಿತಿ ನೀಡಿದ್ದಾರೆ.

  ಬೀದರ್-ತಿರುಪತಿ ನಡುವೆ ಭಾರತೀಯ ರೈಲ್ವೇಯು ಈಮುನ್ನ ಪ್ರಾಯೋಗಿಕವಾಗಿ ಅಕ್ಟೋಬರ್ 2ರಿಂದ ರೈಲು ಸಂಚಾರ ಸೇವೆಯನ್ನು ಆರಂಭ ಮಾಡಿತ್ತು. ಸದ್ಯ ಈ ಪ್ರಾಯೋಗಿಕ ಸೇವೆ ಯಶಸ್ವಿ ಆಗಿದೆ ಎಂಬ ಕಾರಣಕ್ಕೆ ಅಕ್ಟೋಬರ್ 30ರಿಂದ ಭಾರತೀಯ ರೈಲ್ವೇಯು ಬೀದರ್ ಮತ್ತು ತಿರುಪತಿಯ ನಡುವೆ ಹೊಸ ರೈಲನ್ನು ಆರಂಭಿಸಲು ನಿರ್ಧರಿಸಿದೆ.


  ಬೀದರ್ ಮತ್ತು ತಿರುಪತಿ ರೈಲುಗಳ ನಡುವಿನ ವೇಳಾಪಟ್ಟಿ ಇಲ್ಲಿದೆ
  6 ರವಿವಾರಗಳಂದು ಬೀದರ್ ಮತ್ತು ತಿರುಪತಿ ನಡುವೆ ಸಂಚಾರ ನಡೆಸಲಿರುವ ಈ ಹೊಸ ವಿಶೇಷ ರೈಲು ಸಂಚಾರ ನಡೆಸಲಿದೆ. ಅಕ್ಟೋಬರ್ 30, ನವೆಂಬರ್ 6, 13, 20, 27 ಮತ್ತು ಡಿಸೆಂಬರ್ 4 ರಂದು ಬೀದರ್ ತಿರುಪತಿ ರೈಲು ಸಂಚಾರ ನಡೆಸಲಿದೆ.


  ಇದನ್ನೂ ಓದಿ: Bengaluru To Mysuru: ಬೆಂಗಳೂರು-ಮೈಸೂರು ಜನರಿಗೆ ಸೂಪರ್ ಸುದ್ದಿ!


  ಈ ರೈಲು ತಾಜಸುಲ್ತಾನಪುರ, ಕಲಬುರಗಿ, ವಾಡಿ ಮೂಲಕ ಮರುದಿನ ಬೆಳಗ್ಗೆ 9 ಗಂಟೆಗೆ ತಿರುಪತಿಗ ತಿಮ್ಮಪ್ಪನ ಸನ್ನಿಧಾನವನ್ನು ತಲುಪಲಿದೆ. ಈ ರೈಲನ್ನು ಭಾರತೀಯ ರೈಲ್ವೇಯು ತಿರುಪತಿಯಿಂದ ಬೀದರ್​ಗೆ ನವೆಂಬರ್ 1, 8, 15, 22,29 ನೇ ತಾರೀಖುಗಳಂದು ಓಡಿಸಲಿದೆ.


  ಇದನ್ನೂ ಓದಿ: Bengaluru News: ಬೆಂಗಳೂರು ಪೊಲೀಸರ ವೆಬ್ ವಿಳಾಸ ಬದಲು


  ಬೀದರ್​ನಿಂದ ಇದೇ ರೈಲಿಗೆ ಹೊರಟ ತಿರುಪತಿ ತಿಮ್ಮಪ್ಪನ ಭಕ್ತಾದಿಗಳು ಅದೇ ರೈಲಿಗೆ ಬೀದರ್​ಗೆ ಮರಳಬಹುದಾಗಿದೆ. ಎರಡು ರೈಲುಗಳ ಸಂಚಾರದ ನಡುವಿನ 30 ಗಂಟೆಗಳ ಕಾಲದಲ್ಲಿ ಭಕ್ತಾದಿಗಳು ತಿರುಪತಿ ತಿಮ್ಮಪ್ಪನ ದರ್ಶನ ನಡೆಸಬಹುದಾಗಿದೆ.


  ಹುಬ್ಬಳ್ಳಿಯಿಂದಲೂ ವಿಶೇಷ ರೈಲು
  ಕೋವಿಡ್ 19ರಿಂದಾಗಿ ಕಳೆದ ಎರಡೂವರೆ ವರ್ಷಗಳ ಕಾಲ ರದ್ದಾಗಿದ್ದ ಹುಬ್ಬಳ್ಳಿ - ತಿರುಪತಿ - ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು (Hubballi Tirupati Special Passenger Trains) ಮತ್ತೆ ಪುನರಾರಂಭಗೊಳ್ಳಲಿದೆ. ಇದ್ರಿಂದಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೊಮ್ಮೆ ನೇರ ಪಯಣವನ್ನು ಬೆಳೆಸಬಹುದಾಗಿದೆ. ಅಕ್ಟೋಬರ್ 17 ರಂದು ವಿಶೇಷ ರೈಲು ಓಡಾಟ ಪುನರಾರಂಭವಾಗಲಿದೆ. ಹೀಗಾಗಿ ಸಾರ್ವಜನಿಕರ ಕಾಯುವಿಕೆ ಕೊನೆಗೊಂಡಂತಾಗಿದ್ದು, ನೇರವಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ (Tirupati Darshan) ತೆರಳುವ ಅವಕಾಶ ಒದಗಿ ಬಂದಿದೆ.


  ಯಾವ ಸಮಯಕ್ಕೆ ಹೊರಡಲಿದೆ?
  ಹುಬ್ಬಳ್ಳಿ-ತಿರುಪತಿ- ಹುಬ್ಬಳ್ಳಿ ವಿಶೇಷ ರೈಲು ಆರಂಭದಲ್ಲಿ ಅಕ್ಟೋಬರ್ 17 ರಂದು ತಿರುಪತಿಯಿಂದ ಹುಬ್ಬಳ್ಳಿಗೆ ಆಗಮಿಸಲಿದೆ. ಆ ದಿನ ತಿರುಪತಿಯಿಂದ ಬೆಳಿಗ್ಗೆ 6.10 ಕ್ಕೆ ಹೊರಡುವ ರೈಲು ಅದೇ ದಿನ ರಾತ್ರಿ 9.10 ಕ್ಕೆ ಹುಬ್ಬಳ್ಳಿ ತಲುಪಲಿದೆ.


  ಎಲ್ಲೆಲ್ಲ ನಿಲುಗಡೆ ಮತ್ತು ಸಮಯ?
  ತಿರುಪತಿಯಿಂದ ಹುಬ್ಬಳ್ಳಿಗೆ ಆಗಮಿಸುವ ವೇಳೆ ರೈಲು ರಾಜ್ಯದ ಹಲವೆಡೆ ನಿಲುಗಡೆ ಹೊಂದಿದ್ದು, ಆ ನಿಲ್ದಾಣ ಹಾಗೂ ಸಮಯವು ಹೀಗಿವೆ.


  ಮುನಿರಾಬಾದ್ ಸಾಯಂಕಾಲ 4.40, ಹಿಟ್ನಾಳ್ ಹಾಲ್ಡ್ ಸಾಯಂಕಾಲ 4.48, ಗಿಣಿಗೇರಾ - ಸಂಜೆ 5 ಕ್ಕೆ, ಕೊಪ್ಪಳ - ಸಂಜೆ 5.20, ಭಾನಾಪುರ ಸಂಜೆ 5.33 ಈ ಸಮಯಕ್ಕೆ ನಿಲುಗಡೆ ಹೊಂದಲಿದೆ.

  Published by:ಗುರುಗಣೇಶ ಡಬ್ಗುಳಿ
  First published: