Bidar​ನಲ್ಲಿ ನೀರಿಗೆ ಹಾಹಾಕಾರ; ನಮ್ಮ ಅಳಲು ಯಾರಿಗೂ ಬೇಡ ಎನ್ನುತ್ತಿದ್ದಾರೆ ಗ್ರಾಮಸ್ಥರು

ಕಳೆದ ಒಂದು ತಿಂಗಳು ಗಳಿಂದ ಕುಡಿಯುವ ನೀರಿಲ್ಲದೆ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಔರಾದ ತಾಲೂಕಿನ  ಪ್ರತಿಶತ 15 ರಿಂದ 20 ಗ್ರಾಮಗಳಲ್ಲಿ   ಕುಡಿಯುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಡಿಯುವ ನೀರಿನ ಸಮಸ್ಯೆ

ಕುಡಿಯುವ ನೀರಿನ ಸಮಸ್ಯೆ

 • Share this:
  ಬೀದರ್ (ಮೇ. 10) : ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಬಿಸಿಲು ಏರುತ್ತಿದೆ ಬಾಯಿ ಆರುತ್ತಿದೆ. ಹನಿ ನೀರಿಗಾಗಿ (Drinking Water) ಜೀವ ಒದ್ದಾಡುತ್ತಿದ್ದು ಬದುಕು ದುಸ್ತರವಾಗಿದೆ. ಬಿರು ಬೇಸಿಗೆಯಲ್ಲಿ  ಜಿಲ್ಲಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.‌ ಕುಡಿಯುವ ನೀರಿನ ಅಭಾವದಿಂದಾಗಿ ಜನರು ಕಂಗಾಲಾಗಿದ್ದು, ಕುಡಿಯುವ ನೀರು ಕೊಡಿ ಎಂದು ಅಧಿಕಾರಿಗಳ ಬಳಿ ಅಂಗಲಾಚುವಂತೆ ಆಗಿದೆ. 

  ತಿಂಗಳಿನಿಂದ ಸಮಸ್ಯೆ 

  ಜಿಲ್ಲೆಯ ಕೆಲಭಾಗಗಳಲ್ಲಿ  ಈಗಲೂ ಕೂಡ ನೀರಿನ ಅಭಾವ ಮಾತ್ರ ಕಡಿಮೆ ಆಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ತನವೋ  ಅಥವಾ ಜನಪ್ರತಿನಿಧಿಗಳ ನಿಷ್ಕ ಕಾಳಜಿಯೋ ಗೊತ್ತಿಲ್ಲ ಆದ್ರೆ ಬಡಪಾಯಿಗಳು ಗೋಳು ಕೇಳುತ್ತಿಲ್ಲ.ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಕಳೆದ ಒಂದು ತಿಂಗಳು ಗಳಿಂದ ಕುಡಿಯುವ ನೀರಿಲ್ಲದೆ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಔರಾದ ತಾಲೂಕಿನ  ಪ್ರತಿಶತ 15 ರಿಂದ 20 ಗ್ರಾಮಗಳಲ್ಲಿ   ಕುಡಿಯುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

  ನೀರಿಗಾಗಿ ಕಿ.ಮೀ ಪ್ರಯಾಣ

  ಪ್ರತಿನಿತ್ಯವೂ ಕಿಲೋಮೀಟರ್ ಗಟ್ಟಲೇ ಹುಡುಕಿಕೊಂಡು ನೀರು ತರುವ ಪರಿಸ್ಥಿತಿ ನಮ್ಮದು ನಮ್ಮ ಕೂಗಿಗೆ ಅಧಿಕಾರಿಗಳು ಯಾರು ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.
  ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ ನೀರು ಕೂಡಾ ಬತ್ತುತ್ತಿದೆ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿವೆ ಆದರೆ ನೀರು ಮಾತ್ರ ಸಿಗುತ್ತಿಲ್ಲ ಅಧಿಕಾರಿಗಳು ಹೇಳಿದ್ದರೂ ಪ್ರಯೋಜನ ವಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಔರದ್​ ಸೇರಿದಂತೆ ಅನೇಕ ಕಡೆ ಸಮಸ್ಯೆ

  ಸುಮಾರು 26 ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ಬಾದಲಗಾಂವ್‌, ಚಕ್ಲಿಯ ಕೆಲೆವುಅನೇಕ ಕಡೆಗ ಔರಾದ್‌ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿಯೂ ಕೂಡ ನೀರಿನ ಸಮಸ್ಯೆ ಎದುರಾಗಿದ್ದು ಹಲವು ಕಡೆಗಳಲ್ಲಿ ನೀರು ಬರುವುದೇ ನಿಂತು ಹೋಗಿದೆ.

  ಇದನ್ನು ಓದಿ: ಕೈಯಲ್ಲಿ ಹಣವಿಲ್ಲ, ಮಗನ ಹುಟ್ಟುಹಬ್ಬ ಆಚರಿಸಲು ಆಗ್ತಿಲ್ಲ ಎಂದು ಮಹಿಳೆ ಆತ್ಮಹತ್ಯೆ

  ನಮ್ಮ ಗೋಳು ಕೇಳುವವರಿಲ್ಲ

  ಗ್ರಾಮದಲ್ಲಿ ಸುಮಾರು 20-30 ವರ್ಷಗಳಿಂದ ಬದುಕು ನಡೆಸುತ್ತಿದ್ದೇವೆ.  ಪ್ರತಿ ವರ್ಷ ಇದೆ ಗೋಳು ಕೇಳುವವರು ಯಾರು?  ಗ್ರಾಮದಲ್ಲಿ ದೊಡ್ಡ ಮಟ್ಟದ ನೀರಿನ ಹಾಹಾಕಾರ ಇದ್ರು ಸಹ   ಸಮಸ್ಯೆಯನ್ನು ಬಗೆಹರಿಸುವ ಯೋಚನೆ  ಜಿಲ್ಲಾಡಳಿತ ಮಾಡುತ್ತಿಲ್ಲ. ದುಡಿಯುವ ಜನರಿಗೆ ದುಡಿಮೆ ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ನೀರಿಲ್ಲದೆ ಹಳ್ಳದ ಕಲುಷಿತ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಹಳ್ಳದ ನೀರು ಕುಡಿದು ಗ್ರಾಮದ ಜನರಲ್ಲಿ ಬೇಧಿ ಹಾಗೂ ಆರೋಗ್ಯದಲ್ಲಿ ಏರುಪೇರು ಆಗಿದೆ. ಪಂಚಾಯತ್ ಪಿಡಿಓ ಅವರಿಗೆ ಮಾಹಿತಿ ನೀಡಿದ್ರು ನಾಳೆ ನಾಡಿದ್ದು ಎಂದು ದಿನ ಸಾಗಿಹಾಕು ಉತ್ತರ ನೀಡುತ್ತಾರೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಗ್ರಾಮಸ್ಥರು.

  ಇದನ್ನು ಓದಿ: ಆಂಧ್ರ ಕರಾವಳಿಯಲ್ಲಿ ಪರಿಸ್ಥಿತಿ ನಿಭಾಯಿಸಲು NDRF​​​ ಸಜ್ಜು; ಬೆಂಗಳೂರಲ್ಲಿ ಶುರುವಾದ ಮಳೆ

  ನೀರು ಪೂರೈಕೆಗೆ ವ್ಯವಸ್ಥೆ

  ಇನ್ನು ಈ ಬಗ್ಗೆ ಮಾತನಾಡಿರುವ ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ,  ಜಿಲ್ಲೆಯ ಅಂದಾಜು 15 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಈಗಾಗಲೇ ಅಧಿಕಾರಿಗಳು ಜೊತೆ ಸಭೆಯನ್ನು ಮಾಡಲಾಗಿದೆ ಈಗಾಗಲೇ ಟ್ಯಾಂಕರ್ ಸರಬರಾಜು ಮಾಡಲಾಗಿದೆ ಖಾಸಗಿ ಬೋರ್​ವೆಲ್​ಗಳನ್ನು ಬಾಡಿಗೆ ತೆಗೆದುಕೊಂಡು ನೀರು ಪೂರೈಕೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎನ್ನುತ್ತಾರೆ.

  ಕುಡಿಯುವ ನೀರಿನ ವಿಷಯದಲ್ಲಿ ಆಡಳಿತ ವರ್ಗ ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದು, ಹಲವಾರು ಗ್ರಾಮಗಳು ನೀರಿಗಾಗಿ ಪರಿತಪಿಸುವಂತಾಗಿದೆ. ರಾಜ್ಯದಲ್ಲಿ ಬಹುದೊಡ್ಡ ನದಿಗಳಿದ್ದರೂ ಕೂಡಾ ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಅಲೆಯುವ ಪರಿಸ್ಥಿತಿ ಇನ್ನು ಹಾಗೇಯೇ ಇದೆ. ಕೂಡಲೇ ಜಿಲ್ಲಾಡಳಿತ ಬೇಸಿಗೆ ಒದ್ದಾಡುತ್ತಿರುವ ಜನ್ರಿಗೆ ನೀರಿನ ದಾಹಾ ನಿಗಿಸುವ ಕೆಲಸ ಮಾಡಲಿ ಎನ್ನುವುದು ಇಲ್ಲಿನ ಜನ್ರ ಒತ್ತಾಯ.

  (ವರದಿ: ಚಮನ್ ಹೊಸಮನಿ‌)
  Published by:Seema R
  First published: