• Home
  • »
  • News
  • »
  • bidar
  • »
  • Bidar: ಸೇಬಿಗೆ ಸೆಡ್ಡು ಹೊಡೆಯುತ್ತಿದೆ ಬೀದರ್ ಬೋರೆ!

Bidar: ಸೇಬಿಗೆ ಸೆಡ್ಡು ಹೊಡೆಯುತ್ತಿದೆ ಬೀದರ್ ಬೋರೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸೇಬಿನಂತೆ ಫಳಫಳನೆ ಹೊಳೆಯುವ ಬಾರೆ ಹಣ್ಣು ಗಡಿ ಜಿಲ್ಲೆ ಬೀದರ್​ನ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಮೂಡಿಸಿದೆ.

  • Share this:

    ಗಡಿನಾಡು ಬೀದರ್ (Bidar News) ಮಣ್ಣಲ್ಲಿ ಬೆಳೆದದ್ದೆಲ್ಲಾ ಬಂಗಾರವಾಗುತ್ತೆ ಅನ್ನೋ ಮಾತಿದೆ. ಆ ಮಾತನ್ನು ಅಕ್ಷರಶಃ ನಿಜ ಮಾಡ್ತಿದ್ದಾರೆ. ಬೀದರ್ ಜಿಲ್ಲೆಯ ಈ ರೈತರು. ಇಂದು ಕಾಶ್ಮೀರಿ ಸೇಬಿನ (Kashmiri Apple) ಬಣ್ಣದ ಬೋರೆ ಹಣ್ಣು ಅಥವಾ ಬಾರೆ ಹಣ್ಣನ್ನು ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಸೇಬಿನಂತೆ ಫಳಫಳನೆ ಹೊಳೆಯುವ ಬಾರೆ ಹಣ್ಣು (Jujube) ಗಡಿ ಜಿಲ್ಲೆ ಬೀದರ್​ನ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಮೂಡಿಸಿದೆ.


    ನಳನಳಿಸುತ್ತಿದೆ ಬೋರೆ ಹಣ್ಣು
    ಜನರಿಗೆ ಪ್ರಿಯವಾಗಿರುವ ಬಡವರ ಸೇಬು ಎಂದೆ ಖ್ಯಾತಿ ಹೊಂದಿರುವ ಬಾರೆ ಹಣ್ಣನ್ನ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ತಲವಾಡ ಗ್ರಾಮದ ಆರ್. ಎಸ್. ಬಿರಾದಾರ ಅವರು  ಸಖತ್ ಆಗಿ ಬೆಳೆಸಿದಿದ್ದಾರೆ.


    ಇದನ್ನೂ ಓದಿ: Positive Story: 1,500 ರೂಪಾಯಿಯಲ್ಲಿ ಕಮಾಲ್ ಮಾಡಿದ ಉತ್ತರ ಕನ್ನಡದ ಯುವಕ


    800 ಬಾರೆ ಗಿಡ ನೆಟ್ಟ ಕೃಷಿಕರು
    ಎರಡು ಎಕರೆ ಜಮೀನಿನಲ್ಲಿ 800 ಬಾರೆ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ರೈತ ಬಿರಾದರ ಅವರು. ಕಲ್ಕತ್ತಾದಿಂದ 40 ರೂಪಾಯಿಗೊಂದರಂತೆ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ.


    ಇದನ್ನೂ ಓದಿ: Jaggery Success Story: ಬೀದರ್ ಬೆಲ್ಲದ ಸಿಹಿ ಇನ್ನಷ್ಟು ಹೆಚ್ಚಾಯ್ತು! ರೈತರ ನೆಮ್ಮದಿಯೂ ದುಪ್ಪಟ್ಟಾಯ್ತು


    ಎರಡು ಎಕರೆ ಪ್ರದೇಶದಲ್ಲಿ 14x8 ರಂತೆ ಬಾರೆ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಒಂದು ಗಿಡದಲ್ಲಿ 8 ರಿಂದ 10 ಕೆಜಿಯಷ್ಟು ಬಾರೆ ಕಾಯಿಗಳನ್ನು ಕೊಯ್ಲು ಮಾಡಿದ್ದಾರೆ. ಎಂಟು ತಿಂಗಳಿಗೆ ಪಲ ನೀಡಲು ಪ್ರಾರಂಭಿಸಿದ ಈ ಬಾರೆ ಹಣ್ಣಿನಿಂದ ಈಗ ಒಳ್ಳೆ ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: