ನನಬೀದರ್: ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ರೈತರು (Farmers) ಅತಿ ವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿ ಹೋಗಿದ್ದು ಇಲ್ಲಿನ ರೈತರು ಕೃಷಿ (Agriculture) ಮಾಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ರೈತರಿಗೆ ಮುಂದೇನೆಂಬ ಚಿಂತೆ ಕಾಡುತ್ತಿತ್ತು. ಆಗ ರೈತರ ನೆರವಿಗೆ ನಿಂತಿದ್ದು ಉದ್ಯೋಗ ಖಾತ್ರಿ (Udyoga Khatri) ಯೋಜನೆ ನರೇಗಾ (Narega). ಇದರ ಅಡಿಯಲ್ಲಿ ರೈತನೊಬ್ಬ ವಿವಿಧ ಹೂ (Flowers) ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಗುಲಾಬಿ (Rose) ಬೆಳೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈಗ ಹೂಗಳಿಂದ ಆದಾಯದ (Income) ಮೂಲ ಕಂಡುಕೊಂಡು ಜಿಲ್ಲೆಗೆ ಮಾದರಿ ರೈತನಾಗಿದ್ದಾರೆ. ಈ ಮಾದರಿ ರೈತನ ಯಶಸ್ಸಿನ ಕಥೆ ಇಲ್ಲಿದೆ ಓದಿ…
ಸಾಂಪ್ರದಾಯಿಕ ಬೆಳೆಗಳಿಗೆ ತಿಲಾಂಜಲಿ
ಕಲ್ಯಾಣ ಕರ್ನಾಟಕ ಬಾಗದ ರೈತರು ಮೊದಲು ಸೋಯಾಬಿನ್, ಹೆಸರು, ತೊಗರಿ, ಉದ್ದು ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಮಳೆಯಾದಾಗ ಮಾತ್ರ ಫಸಲನ್ನು ತೆಗೆಯುತ್ತಿದ್ದರು. ಆದರೆ ಎರಡ್ಮೂರು ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿದರು. ಸಾವಿರಾರು ರೂ. ಬಂಡವಾಳ ಹಾಕಿ ಪದೇಪದೇ ಕೈ ಸುಟ್ಟುಕೊಳ್ಳುತ್ತಿದ್ದ ರೈತ, ಪರ್ಯಾಯವಾಗಿ ಏನನ್ನಾದರೂ ಬೆಳೆ ಬೆಳೆಯಬೇಕೆಂಬ ಆಲೋಚನೆ ನಡೆಸಿದ ಸಂದರ್ಭದಲ್ಲಿ ಗುಲಾಬಿ ಹೂವಿನ ನಾಟಿಯತ್ತ ಮನಸು ಮಾಡಿದ.
ನರೇಗಾ ಯೋಜನೆಯಿಂದ ಸಹಾಯ
ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಮೊರಂಬಿ ಗ್ರಾಮದ ಬಂಡೆಪ್ಪ ಮೇತ್ರೆ ಎಂಬ ರೈತರೇ ನರೇಗಾ ಯೋಜನೆಯಡಿ ಗುಲಾಬಿ ಹೂವು ಬೆಳೆದು ಲಾಭ ಪಡೆಯುತ್ತಿರುವ ಕೃಷಿಕ.
ಸಾಂಪ್ರದಾಯಿಕ ಬೆಳೆಗಳಿಗೆ ತಿಲಾಂಜಲಿ ಹೇಳಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ ರೈತ, ಹೀಗೆ ಗುಲಾಬಿ ಹೂಗಳನ್ನು ತನ್ನ ಜಮೀನಿನಲ್ಲಿ ಅರಳಿಸಿದ್ದಾನೆ.
ಇದನ್ನೂ ಓದಿ: Explained: ಪಪ್ಪಾಯಿ ಬೆಳೆಗೆ ಯಾವ ಗೊಬ್ಬರ ಹಾಕಿದ್ರೆ ಇಳುವರಿ ಉತ್ತಮವಾಗಿರುತ್ತದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ರೈತರ ಮುಖದಲ್ಲಿ ಖುಷಿ ಮೂಡಿಸಿದ ಗುಲಾಬಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೂ ಬೆಳೆಯಲು ಬೆಂಬಲ ಸಿಕ್ಕಿದ್ದು, ನರೇಗಾ ಸಹಯೋಗದಲ್ಲಿ ಮಾಡಿದ ಬುಲೆಟ್, ಮಾರ್ಬಲ್, ಪನ್ನಿರ್ ಗುಲಾಬಿ ಕೃಷಿ ಈಗ ರೈತರ ಮುಖದಲ್ಲಿ ಖುಷಿ ತಂದಿದೆ.
ಒಂದು ಎಕರೆಯಲ್ಲಿ ಗುಲಾಬಿ ಕೃಷಿ
ರೈತ ಬಂಡೆಪ್ಪ ಮತ್ರೆ ಅವರು ಗುಲಾಬಿ ಕೃಷಿಯಲ್ಲಿ ಉತ್ತಮ ಆದಾಯ ಕಂಡುಕೊಳ್ಳುತ್ತಿದ್ದಾರೆ. ನರೇಗಾ ಮೂಲಕ ತಮ್ಮ ಒಂದು ಎಕರೆ ಭೂಮಿಯಲ್ಲಿ 4,400 ಗುಲಾಬಿ ಸಸಿಗಳನ್ನು ಹೆಚ್ಚದ್ದು ಕಳೆದ ಎರಡು ವರ್ಷದ ಬೆಳೆಯಾಗಿದೆ. ಈಗಾಗಲೇ ಅರ್ದ ಲಾಭವನ್ನು ತೆಗೆದುಕೊಂಡು ರೈತ ಮೆತ್ರೆ. ಪ್ರತಿನಿತ್ಯವೂ ಹೂ ಬಿಡುತ್ತಿದ್ದು ಸುಮಾರು 25 ಕೆಜಿ ಗುಲಾಬಿ ಇಳುವರಿ ಬರುತ್ತಿದೆ ಕೆಜಿಗೆ 100 ರುಪಾಯಿ ಯಂತೆ ಫಿಕ್ಸ್ ದರದಂತೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಈಗಾಗಲೇ ಅರ್ಧದಷ್ಟು ಬಂಡವಾಳ ವಾಪಸ್
ಇನ್ನು ಗುಲಾಬಿ ಸಸಿ ನಾಟಿ ಮಾಡಲು ಹಾಕಿದ ಬಂಡವಾಳ ಈಗಾಗಲೇ ಅರ್ಧದಷ್ಟು ವಾಪಸ್ ಬಂದಿದ್ದು ಇದರ ಜೊತೆಗೆ ನರೇಗಾ ಮೂಲಕವೂ ರೈತನಿಗೆ ಸಹಾಯ ಧನ ದೊರಕಿದೆ ಗ್ರಾಮದ ರೈತ ಬಂಡೆಪ್ಪ ಮೇತ್ರೆಯವರಿಗೆ ಗುಲಾಬಿ ಕೃಷಿಯು ತುಂಬ ವರದಾನವಾಗಿದೆ.
ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ
ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗುಲಾಬಿ ಕೃಷಿ ನಿರ್ವಹಣೆ ಮಾಡಲಾಗುತ್ತಿದೆ. ಗುಲಾಬಿ ಹೂ ಬೆಳೆಗಳಿಗೆ ರೋಗಬಾಧೆಗಳ ನಿಯಂತ್ರಣ ಮಾಡುತ್ತಿದ್ದು. ಗುಲಾಬಿ ಕೃಷಿಯಿಂದ ಉತ್ತಮ ಆದಾಯ ಬರುತ್ತಿದೆ.
ಇದನ್ನೂ ಓದಿ: Apple Growing: ಬೆಂಗಳೂರಿನ ಸುತ್ತಮುತ್ತ ಬೆಳೆಯೋ ಸೇಬು ತಿಂದಿದ್ದೀರಾ? ರಾಜ್ಯದಲ್ಲಿ ಮತ್ತೆ ಆ್ಯಪಲ್ ಕ್ರಾಂತಿ!
ನರೇಗಾದಿಂದ ರೈತರಿಗೆ ಅನುಕೂಲ
ನರೇಗಾ ಯೋಜನೆಯಲ್ಲಿ ಸಣ್ಣ, ಅತಿ ಸಣ್ಣ ರೈತರು ಸಹಾಯ ಮಾಡಲಾಗುತ್ತಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ ಇನ್ನುಳಿದ ಜಮೀನುಗಳಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ ಗುಲಾಬಿ ಹೂವು ನಿಂದ ರೈತನಿಗೆ ನಿತ್ಯ ಆದಾಯ ನೀಡುವ ಬೆಳೆಯಾಗಿದೆ ಒಮ್ಮೆ ನಾಟಿ ಮಾಡಿದ ನಂತರ 45 ದಿನಗಳಿಂದ 5 ವರ್ಷದವರೆಗೂ ಹೂವು ನೀಡುತ್ತದೆ ಈ ಬೆಳಗಳು...
(ವರದಿ: ಚಮನ್ ಹೊಸಮನಿ, ಬೀದರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ