ಬೀದರ್: ಸಡಗರವೋ ಸಡಗರ, ಸಂಭ್ರಮವೋ ಸಂಭ್ರಮ! ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧು ವರರಲ್ಲಿ ಖುಷಿಯೋ ಖುಷಿ! ದುಬಾರಿ ದುನಿಯಾದಲ್ಲಿ ಸಾಮೂಹಿಕ ವಿವಾಹದಲ್ಲಿ (Mass Marriage Ceremony) ಸಪ್ತಪದಿ ತುಳಿದ 21 ನವ ಜೋಡಿಗಳ ಜೀವನದ (Bidar News) ಅದ್ಭುತ ಕ್ಷಣವಿದು!
ಒಂದೆಡೆ ಮದುವೆಯಾಗಿ ಕುಳಿತಿರುವ ಹೊಸ ಜೋಡಿಗಳು, ಇನ್ನೊಂದೆಡೆ ಮದುವೆಗೆ ಆಗಮಿಸಿರುವ ಸಹಸ್ರಾರು ಜನ. ನವಜೋಡಿಗಳಿಗೆ ತಾಳಿ, ಕಾಲುಂಗುರ, ಬಟ್ಟೆ, ಉಡುಗೊರೆ ಇದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹೊರವಲಯದಲ್ಲಿ ನಡೆದ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ದೃಶ್ಯಗಳು.
21 ಜೋಡಿಗಳಿಗೆ ಹೊಸ ಜೀವನ
ಈ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಂದೆ ಅಥವಾ ತಾಯಿ ಇಲ್ಲದ ಅನಾಥ ಹಾಗೂ ಕಡು ಬಡತನದಲ್ಲಿದ್ದ 21 ಜೋಡಿಗಳು ವೈವಾಹಿಕ ಬದುಕಿಗೆ ಕಾಲಿಟ್ಟರು.
ಇದನ್ನೂ ಓದಿ: Petrol Golmaal: ಕರ್ನಾಟಕದ ಪೆಟ್ರೋಲ್-ಡೀಸೆಲ್ ತೆಲಂಗಾಣದಲ್ಲಿ ಮಾರಾಟ!
ಚಿನ್ನದ ತಾಳಿ, ಕಾಲುಂಗುರ, ಬಟ್ಟೆ ಉಡುಗೊರೆ
21 ನವ ಜೋಡಿಗಳಿಗೆ ಮದುವೆ ಆಯೋಜಿಸಿದ್ದ ಪ್ರದೀಪ್ ವಾತಡೆ ಅವರು ಚಿನ್ನದ ತಾಳಿ, ಕಾಲುಂಗುರ, ಬಟ್ಟೆ ಸೇರಿದಂತೆ ವಸ್ತುಗಳನ್ನ ಉಡುಗೊರೆಯಾಗಿ ನೀಡಿದರು. ಮಕ್ಕಳ ಮದುವೆ ಮಾಡಲು ಆಗದ ಬಡ ಪೋಷಕರಿಗೆ ಈ ಸಾಮೂಹಿಕ ಮದುವೆ ಕಾರ್ಯಕ್ರಮ ಆಸರೆಯಾಗಿದ್ದು, ಮಧು ಮಕ್ಕಳು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: Bidar Utsav: ಬೀದರ್ ಉತ್ಸವದಲ್ಲಿ ಮುದ್ದು ನಾಯಿಗಳ ಚೇಷ್ಟೆ! ಶ್ವಾನ ಪ್ರದರ್ಶನದ ಝಲಕ್ ನೋಡಿ
ಸಾಮೂಹಿಕ ಮದುವೆ ಸಮಾರಂಭದಲ್ಲಿ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಅಣ್ಣ ಬಸವಣ್ಣನ ನಾಡಿನಲ್ಲಿ ನಡೆದಿರುವ ಸಾಮೂಹಿಕ ವಿವಾಹ ಕಡು ಬಡತನದ ಎಷ್ಟೋ ಯುವಕ ಯುವತಿಯರಿಗೆ ನೆರವಾಯಿತು.
ವರದಿ: ಚಮನ್ ಹೊಸಮನಿ, ನ್ಯೂಸ್18 ಕನ್ನಡ ಬೀದರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ