ಹಾರ ಹಾಕಿ ಶೃಂಗಾರ ಮಾಡಿರೋ ಆಕಳು, ಮುಂದೆ ಚಕ್ಕುಲಿ, ಕೋಡುಬಳೆ, ಸ್ವೀಟು, ಹಣ್ಣು ಹಂಪಲು ಬಗೆಬಗೆಯ ತಿಂಡಿ ತಿನಿಸು. ಬಾಗಿನ ಹಿಡಿದು ನಿಂತಿರುವ ಮಹಿಳೆಯರು, ಮನೆಯ ಮಗಳ ಸೀಮಂತ ಹೇಗಿರುತ್ತೋ ಥೇಟ್ ಅಂದ್ರೆ ಥೇಟ್ ಅದೇ ಸಂಭ್ರಮ, ಇದು ಪಾರ್ವತಿ ಎಂಬ ಆಕಳಿನ ಸೀಮಂತ!
ಇವ್ರ ಗೋ ಪ್ರೀತಿಗೆ ಏನಂದ್ರೂ ಕಡಿಮೆ, ಏನ್ ಕೊಟ್ರು ಕಡಿಮೆ! ಇತ್ತೀಚಿಗಷ್ಟೇ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಗಿರ್ ಆಕಳ ಜೊತೆ ಪಾದಯಾತ್ರೆ ಮಾಡಿದ್ದ ಚಿಕ್ಕಮಗಳೂರಿನ ಯುವಕನ ಇನ್ನೊಂದು ಮಜಬೂತಾದ ಕಥೆಯಿದು. ಶ್ರೀಯಂಸ್ ಜೈನ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿ.
360 ಕಿಲೋಮೀಟರ್ ದೂರ ಪಾದಯಾತ್ರೆ ಮಾಡಿ ಧರ್ಮಸ್ಥಳ ಗೋಶಾಲೆಗೆ ಭೀಷ್ಮ ಎಂಬ 2ರ ಹರೆಯದ ಆಕಳನ್ನ ದಾನ ಮಾಡಿ ಹರಕೆ ತೀರಿಸಿದ್ದರು. ಇದೀಗ ಭೀಷ್ಮ ಕರುವಿನ ಅಮ್ಮ ಪಾರ್ವತಿ ಇನ್ನೊಮ್ಮೆ ಅಮ್ಮನಾಗ್ತಿದ್ದಾಳೆ. ಪಾರ್ವತಿಗೆ ಸೀಮಂತ ಮಾಡಿ ಶ್ರೀಯಂಸ್ ಹೃದಯ ತುಂಬಿಸಿಕೊಂಡಿದ್ದಾರೆ.
ಇದನ್ನೂ ಓದಿ: Emotional Story: 360 ಕಿಮೀ, 36 ದಿನ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರನಾಡು ಯುವಕನ 'ಭೀಷ್ಮ'ಪಯಣ
ಸೇಮ್ ಟೂ ಸೇಮ್ ಮನೆ ಮಗಳಿಗೋ, ತಂಗಿಗೋ ಸೀಮಂತ ಮಾಡಿದ್ರೆ ಹೇಗಿರುತ್ತೋ ಅದೇ ಥರ ಚಿಕ್ಕಮಗಳೂರಿನ ಹೊರನಾಡಿನ ಈ ಯುವಕ ಗಿರ್ ಆಕಳಿಗೆ ಸೀಮಂತ ಮಾಡಿದ್ದಾರೆ. ಗೆಳೆಯರು, ನೆಂಟರು ಎಲ್ರನ್ನೂ ಕರೆದು ಒಂದೊಳ್ಳೆ ಭೋಜನ ಉಣಬಡಿಸಿದ್ದಾರೆ.
ಇದನ್ನೂ ಓದಿ: Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ
ಮನೆ ಮಗಳು ಪಾರ್ವತಿಗೆ ಹೊಸ ಬಟ್ಟೆ ತೊಡಿಸಿದ್ದಾರೆ. ಆರತಿ ಬೆಳಗಿದ್ದಾರೆ. ರುಚಿರುಚಿ ಖಾದ್ಯ ತಿನಿಸಿ ಆಕಳ ಜೊತೆ ಸೆಲ್ಫಿ ತಕೊಂಡು ಸಂಭ್ರಮಿಸಿದ್ದಾರೆ. ಆಕಳು ಅಂದ್ರೆ ಸಾಕುಪ್ರಾಣಿಯಷ್ಟೇ ಅಲ್ಲ, ಮನೆ ಮಂದಿಯೇ ಎನ್ನುವ ಶ್ರೀಯಂಸ್ ಈಬಾರಿ ಕಣ್ಣಂಚಲ್ಲಿ ಖುಷಿಯ ಹನಿ ಜಿನುಗಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ