Power Cut: ಆಗಸ್ಟ್ 10 ರಿಂದ 13ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

ಆಗಸ್ಟ್ 10 ರಿಂದ ಆಗಸ್ಟ್ 11 12 13 ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇದು ಮಳೆಗಾಲ ಹೀಗಾಗಿ ಆಗಾಗ್ಗೆ ವಿದ್ಯುತ್ ವ್ಯತ್ಯಯ (Power Cut)  ಸಮಸ್ಯೆ ಕಾಮನ್. ಹಳ್ಳಿಗಳಲ್ಲಿ ಕರೆಂಟ್ ಸಾಕಷ್ಟು ಬಾರಿ ಇರುವುದಿಲ್ಲ. ಆದರೆ ನಗರದಲ್ಲೂ ಮಳೆಗಾಲದಲ್ಲಿ ಕರೆಂಟ್ ಸಮಸ್ಯೆ ಹೆಚ್ಚು. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಜೊತೆಗೆ ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ-ಗಿಡಗಳು ಧರಾಶಾಹಿಯಾಗುತ್ತವೆ. ಹೀಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

  ಇಂದು ಮತ್ತು ನಾಳೆ ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

  ಆಗಸ್ಟ್ 10 ರಿಂದ ಆಗಸ್ಟ್ 11, 12, 13 ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇದನ್ನೂ ಓದಿ: ಉತ್ತರ ಕನ್ನಡದ ಈ ಪ್ರದೇಶದಲ್ಲಿ ಹಗಲಿಡೀ ಪವರ್ ಕಟ್! ಹೆಚ್ಚಿನ ವಿವರ ಇಲ್ಲಿದೆ  

  ಇಂದು (ಆಗಸ್ಟ್ 10) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

  ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಜಕ್ಕಸಂದ್ರ, ಎಚ್‌ಎಸ್‌ಆರ್ 5 ನೇ ಸೆಕ್ಟರ್, ಟೀಚರ್ಸ್ ಕಾಲೋನಿ, ವೆಂಕಟಾಪುರದ ಕೆಲವು ಭಾಗಗಳು, ಸಾಲರ್‌ಪುರಿಯಾ ಗ್ರೀನೇಜ್ ಅಪಾರ್ಟ್‌ಮೆಂಟ್‌ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗುವುದು.

  ನಾಳೆಯಿಂದ ಅಂದರೆ ಆಗಸ್ಟ್ 11 ರಿಂದ 13 ದಿನಗಳವರೆಗೆ ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ?

  ಇನ್ನು ಆಗಸ್ಟ್ 11 ರಿಂದ ಸತತ ಮೂರು ದಿನಗಳವರೆಗೆ ಅಂದರೆ ಆಗಸ್ಟ್ 11, ಆಗಸ್ಟ್ 12, ಆಗಸ್ಟ್ 13 ನೇ ದಿನಾಂಕದವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆಗಸ್ಟ್ 11 ಮತ್ತು ಆಗಸ್ಟ್ 13 ರ ತಾರೀಖಿನ ನಡುವೆ ಎಲೆಕ್ಟ್ರಾನಿಕ್ಸ್ ಸಿಟಿ ಹಂತ 2, ವೀರಸಂದ್ರ, ಅನಂತ ನಗರ, ದೊಡ್ಡ ನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇಂದು (ಜುಲೈ 31) ರಂದು ವಿದ್ಯುತ್ ವ್ಯತ್ಯಯ ಉಂಟಾದ ಪ್ರದೇಶಗಳು:

  ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನ ಲೇಔಟ್, ನಾಗರಹಳ್ಳಿ ಸರ್ಕಲ್, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ. ಡಿ ಗ್ರೂಪ್ L/O, 1ನೇ ಬ್ಲಾಕ್ ಪಾರ್ಕ್ ಬಳಿ, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ವಿಘ್ನೇಶ್ವರ ನಗರ, ನೀಲಗಿರಿ ಥಾಪ್ ರಸ್ತೆ, ಓಂಕಾರ ಆಶ್ರಮ, ಆಂಜನ್ಯಾ ದೇವಸ್ಥಾನ

  ಟಿ.ಜಿ.ಪಾಳ್ಯ ಮುಖ್ಯರಸ್ತೆ, ಪೆನ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೆರಾ ನಂದಗೋಕುಲ L/O, SLV ಇಂಡಸ್ಟ್ರಿಯಲ್ ರಸ್ತೆ, SLV ಇಂಡಸ್ಟ್ರಿ, TG ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ L/O ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1ರಿಂದ 4ನೇ ಬ್ಲಾಕ್, ಚಿಕ್ಕದೇವಸಂದ್ರ ದೇವಸಂದ್ರ ಮುಖ್ಯರಸ್ತೆ

  ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ

  ಮೇಡಿಹಳ್ಳಿ, ಕುರದೂರು, ಸೊನ್ನನೇಹಳ್ಳಿ ರಸ್ತೆ, ಉಜ್ವಲ್ ಲೇಔಟ್, ಅಜಿತ್ ಲೇಔಟ್ ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿಬಾಬಾ ಲೇಔಟ್
  Published by:renukadariyannavar
  First published: