• Home
  • »
  • News
  • »
  • bengaluru-urban
  • »
  • ಸಿಎಂ ಉತ್ತರ ಪ್ರದೇಶ ಪ್ರವಾಸ ಕೈಗೊಳ್ತಿರೋದು ಯಾಕೆ? ಕಾಶಿ ವಿಶ್ವನಾಥನ ಮೊರೆ ಹೋಗಿದ್ಯಾಕೆ?

ಸಿಎಂ ಉತ್ತರ ಪ್ರದೇಶ ಪ್ರವಾಸ ಕೈಗೊಳ್ತಿರೋದು ಯಾಕೆ? ಕಾಶಿ ವಿಶ್ವನಾಥನ ಮೊರೆ ಹೋಗಿದ್ಯಾಕೆ?

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ರಾಜಕೀಯ ಸಂಕಟಗಳಿಂದ ಪಾರಾಗಲು ಕಾಶಿ ವಿಶ್ವನಾಥನ (Kashi Vishwanatha) ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲು ಸಿಎಂ ಮೆಗಾ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಮುಖ್ಯಮಂತ್ರಿಗಳ ಸಮ್ಮೇಳನ ನೆಪದಲ್ಲಿ ಕಾಶಿ, ಆಯೋಧ್ಯೆ (Ayodha) ಪ್ರವಾಸಕ್ಕೆ ಸಿಎಂ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದೆ ಓದಿ ...
  • Share this:

ಅಧಿವೇಶನದ (Assembly Session) ಸಂದರ್ಭದಲ್ಲಿಯೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪ್ರವಾಸ ಕೈಗೊಳ್ಳುತ್ತಿರುವ ಬಗ್ಗೆ ಹಲವು ಚರ್ಚೆಗಳು ಆರಂಭಗೊಂಡಿವೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾಗವಹಿಸುವ ದಿನದಂದೇ ಬಸವರಾಜ ಬೊಮ್ಮಾಯಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೇ ವೇಳೆ ರಾಜಕೀಯ ಸಂಕಟಗಳಿಂದ ಪಾರಾಗಲು ಕಾಶಿ ವಿಶ್ವನಾಥನ (Kashi Vishwanatha) ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲು ಸಿಎಂ ಮೆಗಾ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಮುಖ್ಯಮಂತ್ರಿಗಳ ಸಮ್ಮೇಳನ ನೆಪದಲ್ಲಿ ಕಾಶಿ, ಆಯೋಧ್ಯೆ (Ayodhya) ಪ್ರವಾಸಕ್ಕೆ ಸಿಎಂ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜನವರಿಯಲ್ಲಿ ಬರುವ ರಾಜಕೀಯ ಬದಲಾವಣೆ ಸುಳಿಯಿಂದ ಪಾರಾಗಲು ಸಿಎಂ ದೇವರ ಮೊರೆ ಹೋದ್ರಾ  ಅನ್ನೋ ಪ್ರಶ್ನೆ ಮೂಡಿದೆ.


ಅಧಿವೇಶನದ ಸಂದರ್ಭದಲ್ಲಿ  ಮೂರು ದಿನಗಳ‌ ಬೇರೆ ರಾಜ್ಯಕ್ಕೆ ತೆರಳುತ್ತಿರುದಕ್ಕೆ ಟೀಕೆ ವ್ಯಕ್ತವಾದ ಕೂಡಲೇ ಎಚ್ಚೆತ್ತ ಸಿಎಂ ಒಂದು ದಿನಕ್ಕೆ ತಮ್ಮ ಪ್ರವಾಸವನ್ನ ಕಡಿತಗೊಳಿಸಿದ್ದಾರೆ. ಉತ್ತರ ಪ್ರದೇಶದ ಪ್ರವಾಸವನ್ನು ವಿರೋಧ ಪಕ್ಷಗಳು ಲಾಭವಾಗಿ ತೆಗೆದುಕೊಳ್ಳಬಹುದು ಜೊತೆಗೆ ಉತ್ತರ ಕರ್ನಾಟಕ ಭಾಗದ ಜನರಲ್ಲೂ‌ ವಿರೋಧದ ಆತಂಕದಿಂದ ಸಿಎಂ ತಮ್ಮ ಪ್ಲಾನ್ ಚೇಂಜ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


ಉತ್ತರ ಕರ್ನಾಟಕ ಭಾಗದಲ್ಲಿ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿ ಯಾಗಿ ಸದನಕ್ಕೆ 3 ದಿನಗಳು ಬಂದಿಲ್ಲ ಅಂದರೆ, ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಸಿಎಂ ಗೆ ಅಧಿವೇಶನದ ಮೇಲೆ ಆಸಕ್ತಿ ಇಲ್ಲ. ಜನರ ಸಮಸ್ಯೆ ಗಳ ಬಗ್ಗೆ ಸ್ಪಂದಿಸಲು ಮನಸ್ಸಿಲ್ಲ ಎಂಬ ಭಾವನೆ . ಉತ್ತರ ಕರ್ನಾಟಕ ಭಾಗದ ಜನರಲ್ಲಿ ಭಾವನೆ ಮಾಡಬಹುದು ‌, ಹೀಗಾಗಿ ಮೂರು ದಿನ ಬೇಡ ಎಂದು, ಇದೀಗ ‌ಒಂದೇ ದಿನ ಪ್ರವಾಸಕ್ಕೆ ಸಿಎಂ ಮುಂದಾಗಿದ್ದಾರೆ.


ಇದನ್ನೂ ಓದಿ:  ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ: HDK ವಾಗ್ದಾಳಿ


ಡಿಸೆಂಬರ್ 13 ರಿಂದ ಕಲಾಪ


ಡಿಸೆಂಬರ್ ೧೩ ರಂದು ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು.  ಅಂದು ಶ್ರದ್ಧಾಂಜಲಿ ಬಿಟ್ರೆ ಬೇರೆ ಪ್ರಮುಖವಾಗಿ ಕಾರ್ಯ ಕಲಾಪ ಗಳು ಏನು ಇರಲ್ಲ. ಮಂಗಳವಾರದಿಂದ ಕಾರ್ಯಕಲಾಪಗಳು ನಡೆಯಲಿವೆ. ಹೀಗಾಗಿ ಅಂದಿನಿಂದ ಕಲಾಪದಲ್ಲಿ ಹಾಜರಾಗಲು ಸಿಎಂ ನಿರ್ಧರಿಸಿದ್ದಾರೆ.


ಉತ್ತರ ಪ್ರದೇಶದ ಪ್ರವಾಸಕ್ಕೆ ಸಿಎಂ ಸ್ಪಷ್ಟನೆ


ಯುಪಿಗೆ  ಮೂರು ದಿನ ಹೋಗ್ತಿಲ್ಲ. ಒಂದೇ ದಿನ ಹೋಗ್ತಿರೋದು. ಅಲ್ಲಿ ಬಿಜೆಪಿ ಯ ಮುಖ್ಯಮಂತ್ರಿ ಗಳ ಕಾನ್ಪೆರೆನ್ಸ್ ಇದೆ. ಅದರಲ್ಲಿ ನಾನು ಭಾಗವಹಿಸ್ರಿದ್ದೇನೆ ಡಿಸೆಂಬರ್ 13 ರಿಂದ ಚಳಿಗಾಲದ ಅಧಿವೇಶನ ಹಿನ್ನೆಲೆ ಅಧಿವೇಶನಕ್ಕೆ ಸರ್ಕಾರ ಎಲ್ಲ ರೀತಿಯಲ್ಲಿ ಸಜ್ಜಾಗಿದೆ.


ಇಂದು ಬೆಳಗ್ಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದರು.  ಪರಿಷತ್ ಚುನಾವಣೆ ಮುಗಿದ ನಂತರ ಇಬ್ಬರು ನಾಯಕರು ಭೇಟಿಯಾಗಿದ್ದು, ಚುನಾವಣೆ, ಅಧಿವೇಶನ, ಸರ್ಕಾರದ ಆಡಳಿತ, ಪಕ್ಷದ ವಿಷಯ ಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  ಮೊಟ್ಟೆ ಬಗೆದೀತು ಸರ್ಕಾರದ ಹೊಟ್ಟೆ: ಮಠಾಧೀಶರಿಂದ ಸರ್ಕಾರ ಪತನದ ಎಚ್ಚರಿಕೆ


ಎಷ್ಟು ಸ್ಥಾನದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ? ಜೊತೆಗೆ ಸದನದಲ್ಲಿ ಚರ್ಚಾ ವಿಷಯಗಳ ಬಗ್ಗೆ ಮಾತುಕತೆ. ಸದನದಲ್ಲಿ ಮಂಡಿಸುವ ಕಾಯಿದೆಗಳ ಬಗ್ಗೆ ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.


ಅಧಿವೇಶನ ಮುಗಿದ ನಂತರ ಮಾಜಿ ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ


ಅಧಿವೇಶನ ಮುಗಿದ ನಂತರ ಬಿ.ಎಸ್.ಯಡಿಯುರಪ್ಪ ಅವರು ದುಬೈ ಪ್ರವಾಸ ಕೈಗೊಳ್ಳಲಿದ್ದಾರೆ. ಪರಿಷತ್ ಚುನಾವಣೆಯ ನಿರಂತರ ಪ್ರಚಾರದ ಪ್ರವಾಸದಿಂದ ಸ್ವಲ್ಪ ದಣಿದಿರುವ ಯಡಿಯೂರಪ್ಪನವರು ದುಬೈನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಅಲ್ಲಿಂದ ಬಂದ ನಂತರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

Published by:Mahmadrafik K
First published: