• Home
 • »
 • News
 • »
 • bengaluru-urban
 • »
 • Bengaluru: ಬೇಗೂರು ಕೋಟೆಯಲ್ಲಿದೆ ಬೆಂಗಳೂರಿನ ಇತಿಹಾಸ, ಮುಂದಿನ ವೀಕೆಂಡ್​​​​ಗೆ ಭೇಟಿ ನೀಡಿ!

Bengaluru: ಬೇಗೂರು ಕೋಟೆಯಲ್ಲಿದೆ ಬೆಂಗಳೂರಿನ ಇತಿಹಾಸ, ಮುಂದಿನ ವೀಕೆಂಡ್​​​​ಗೆ ಭೇಟಿ ನೀಡಿ!

ಬೇಗೂರು ಕೋಟೆ

ಬೇಗೂರು ಕೋಟೆ

ಹೊಸೂರು ರಸ್ತೆಯ ಬಳಿಯ ಅಕ್ಷಯ ನಗರದಲ್ಲಿರುವ ಬೇಗೂರು ಕೋಟೆಯು ಬೆಂಗಳೂರಿನ ಅತ್ಯಂತ ಹಳೆಯ ಕೋಟೆಯಾಗಿದ್ದು, 8 ಅಥವಾ 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

 • Trending Desk
 • Last Updated :
 • Bangalore [Bangalore], India
 • Share this:

  ತುಂಬಾ ಸಲ ಅನೇಕ ಜನರು ಈ ಬೆಂಗಳೂರು(Bengaluru) ನಗರಕ್ಕೆ ಇರುವ ಹೆಸರು ಹೇಗೆ ಬಂತು ಅಂತ ತಲೆ ಕೆಡೆಸಿಕೊಂಡಿರುತ್ತಾರೆ. ಆದರೆ ಇದಕ್ಕೆ ಉತ್ತರ ನಿಮಗೆ ಸಿಕ್ಕರೂ ಅಷ್ಟಾಗಿ ಸಮಾಧಾನವಾಗಿರುವುದಿಲ್ಲ ಅಂತ ಹೇಳಬಹುದು. ಇದಕ್ಕೆ ಉತ್ತರ ಈ ಬೇಗೂರು(Begur) ಕೋಟೆಯ ಶಾಸನದಲ್ಲಿ ಕಾಣಬಹುದು ನೋಡಿ. ಬೆಂಗಳೂರು ನಗರದಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿರುವ ಬೇಗೂರು ಕೋಟೆಯು ನಿಮಗೆ ನಿಮ್ಮ ಬೈಕಿನಲ್ಲಿ ಹೋಗಿ ಬರಬಹುದಾದ ಒಂದು ಚಿಕ್ಕದಾದ ಡ್ರೈವ್(Drive) ಅಂತ ಹೇಳಬಹುದು. ಆದರೆ ಈ ಸ್ಥಳವು ಪ್ರತಿಯೊಬ್ಬ ಬೆಂಗಳೂರಿಗನು ತಿಳಿದಿರಬೇಕಾದ ಇತಿಹಾಸದ(History) ತುಣುಕನ್ನು ಸಹ ವಿವರಿಸುತ್ತದೆ.


  ಬೇಗೂರು ಕೋಟೆ ಬೆಂಗಳೂರಿನ ಅತ್ಯಂತ ಹಳೆಯ ಕೋಟೆಯಾಗಿದೆ..


  ಹೊಸೂರು ರಸ್ತೆಯ ಬಳಿಯ ಅಕ್ಷಯ ನಗರದಲ್ಲಿರುವ ಬೇಗೂರು ಕೋಟೆಯು ಬೆಂಗಳೂರಿನ ಅತ್ಯಂತ ಹಳೆಯ ಕೋಟೆಯಾಗಿದ್ದು, 8 ಅಥವಾ 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. 21ನೇ ಶತಮಾನದಲ್ಲಿ ಎತ್ತರದ ಅಪಾರ್ಟ್ಮೆಂಟ್ ಗಳು ಮತ್ತು ಕಟ್ಟಡಗಳಿಂದ ಸುತ್ತುವರೆದಿದ್ದು, ಇತಿಹಾಸಕಾರರು ಬೇಗೂರಿನ ಸುತ್ತಲಿನ ಆರಂಭಿಕ ವಸಾಹತುಗಳು ಗಂಗ ರಾಜವಂಶದ ಆಳ್ವಿಕೆಯ ಸಮಯದಲ್ಲಿ ಎಂದರೆ 6 ಮತ್ತು 9ನೇ ಶತಮಾನದ ನಡುವಿನದ್ದು ಎಂದು ಹೇಳುತ್ತಾರೆ.


  ಕರ್ನಾಟಕದಲ್ಲಿ ಜೈನಧರ್ಮವು ಪ್ರವರ್ಧಮಾನಕ್ಕೆ ಬಂದ ಕಾಲವೂ ಇದೇ ಆಗಿತ್ತು. ಈ ಪ್ರದೇಶದ ಗಂಗರ ಮುಖ್ಯಸ್ಥನಾದ ನಾಗತ್ತರನು ಒಬ್ಬ ಜೈನನಾಗಿದ್ದನು. ತಲೆ ಭಾಗ ಇಲ್ಲದ ಜೈನ ತೀರ್ಥಂಕರನ ಪ್ರತಿಮೆಯನ್ನು ಈ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ, ಇದು ಒಂದು ಕಾಲದಲ್ಲಿ ಇಲ್ಲಿ ಜೈನ ಬಸದಿ ಅಸ್ತಿತ್ವದಲ್ಲಿದ್ದುದನ್ನು ಸೂಚಿಸುತ್ತದೆ.


  ‘ಬೆಂಗಳೂರು ಕದನ’ ದ ಬಗ್ಗೆ ಹೇಳುತ್ತೇ ಇಲ್ಲಿ ಸಿಕ್ಕ ಶಾಸನ


  ಎಲ್ಲಕ್ಕಿಂತ ಮುಖ್ಯವಾಗಿ, ಕ್ರಿ.ಶ 890 ಕ್ಕೆ ಸೇರಿದ ಒಂದು ಶಾಸನವು ಈ ಸ್ಥಳದಲ್ಲಿ ಕಂಡು ಹಿಡಿಯಲ್ಪಟ್ಟಿತು. ಪ್ರಾಚೀನ ಕನ್ನಡದಲ್ಲಿ ಬರೆಯಲಾದ ಇದು 'ಬೆಂಗಳೂರು ಕದನ' ಅಥವಾ ಜೈನ ಗಂಗರು ಮತ್ತು ಶೈವ ನೊಳಂಬರ ನಡುವಿನ ಬೆಂಗಳೂರಿನ ಯುದ್ಧದ ಬಗ್ಗೆ ಹೇಳುತ್ತದೆ.


  ಈ ಶಾಸನದಲ್ಲಿ, ನಾಗತ್ತಾರನ ಮಗ ಬುಟ್ಟನಶೆಟ್ಟಿಯನ್ನು ಯುದ್ಧದಲ್ಲಿ ಕೊಲ್ಲಲಾಯಿತು ಎಂದು ಹೇಳಲಾಗಿದೆ. ಇದು ಬೆಂಗಳೂರಿನ ಬಗ್ಗೆ ತಿಳಿಸಿರುವ ಮೊದಲ ಉಲ್ಲೇಖವಾಗಿದ್ದು, ನಗರವು 1,100 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದೆ ಎಂದು ಇದು ಸೂಚಿಸುತ್ತದೆ.


  ಇದನ್ನೂ ಓದಿ: Coffee: ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆದ ರೈತ- ಕ್ವಾಲಿಟಿ ಓಕೆ ಆದ್ರೆ ಬದಲಾವಣೆಯ ಪರ್ವ ಶುರು


  ಚೋಳರು ನಿರ್ಮಿಸಿದ ಪಂಚಲಿಂಗೇಶ್ವರ ದೇವಾಲಯಕ್ಕೆ ಬೇಗೂರು ಪ್ರಸಿದ್ಧವಾಗಿದ್ದರೂ, ಬೇಗೂರು ಕೋಟೆಯು ಅಷ್ಟೊಂದು ಗಮನ ಸೆಳೆಯುವುದಿಲ್ಲ. ಈ ಕೋಟೆಯು ವೃತ್ತಾಕಾರದಲ್ಲಿದ್ದು, ಸುಮಾರು 1.4 ಚದರ ಕಿಲೋ ಮೀಟರ್ ವಿಸ್ತೀರ್ಣವನ್ನು ಮಾತ್ರವೇ ಹೊಂದಿದೆ.


  ಬೇಗೂರು ಕೋಟೆ ಹೇಗಿದೆ ಗೊತ್ತೇ?


  ಕೋಟೆಯ ತಗ್ಗು ಗೋಡೆಗಳು ಮಣ್ಣಿನಿಂದ ಮಾಡಲ್ಪಟ್ಟಿವೆ ಮತ್ತು ಈಗ ಅದರ ಸುತ್ತಲೂ ಸಂಪೂರ್ಣವಾಗಿ ಗಿಡಗಳು ಬೆಳೆದುಕೊಂಡಿವೆ. ಪ್ರವೇಶದ್ವಾರವು ಈಶಾನ್ಯಕ್ಕೆ ಕಲ್ಲಿನ ಹಾದಿಯ ಮೂಲಕ ಹಾದು ಹೋಗುತ್ತದೆ ಮತ್ತು ಒಳಗೆ ಕಾಶಿ ವಿಶ್ವನಾಥ ಮತ್ತು ಕೃಷ್ಣನಿಗೆ ಸಮರ್ಪಿತವಾದ ಎರಡು ದೇವಾಲಯಗಳಿವೆ. ಸಮೀಪದಲ್ಲಿ ಪತ್ತೆಯಾದ ಶಾಸನಗಳು ನಾಗತ್ತಾರನ ಮಗಳು ತೊಂಡಬ್ಬೆ ಕೋಟೆಯಲ್ಲಿ ಆಮರಣಾಂತ ಉಪವಾಸ ಮಾಡುವುದರ ಮೂಲಕ ತನ್ನ ಜೀವವನ್ನು ಬಿಟ್ಟಳು ಎಂದು ಉಲ್ಲೇಖಿಸುತ್ತವೆ.


  ಹತ್ತಿರದ ಪಂಚಲಿಂಗೇಶ್ವರ ದೇವಾಲಯವು ನಾಗನಾಥೇಶ್ವರ ದೇವಾಲಯ ಎಂದೂ ಕರೆಯಲ್ಪಡುತ್ತದೆ, ಇದು ಐದು ಲಿಂಗಗಳಿಗೆ ಹೆಸರುವಾಸಿಯಾಗಿದೆ. ನಾಗೇಶ್ವರ, ಚೋಳೇಶ್ವರ, ಕಾಳಿ ಕಮತೇಶ್ವರ, ನಗರೇಶ್ವರ ಮತ್ತು ಕರಣೇಶ್ವರ ಲಿಂಗಗಳನ್ನು ಒಳಗೊಂಡಿದೆ. ಪ್ರತಿಯೊಂದು ಲಿಂಗವು ಜೀವನ ಮತ್ತು ಯೋಗಕ್ಷೇಮದ ವಿಭಿನ್ನ ಅಂಶದೊಂದಿಗೆ ಸಂಬಂಧ ಹೊಂದಿದೆ. ನಾಗೇಶ್ವರ ಮತ್ತು ನಗರೇಶ್ವರರ ಮೊದಲ ಎರಡು ದೇವಾಲಯಗಳನ್ನು ಗಂಗ ವಂಶದ ಅರಸರು 9 ಮತ್ತು 10ನೇ ಶತಮಾನದಲ್ಲಿ ನಿರ್ಮಿಸಿದರು ಎಂದು ನಂಬಲಾಗಿದೆ.


  ಉಳಿದ ಮೂರು ದೇವಾಲಯಗಳನ್ನು 11ನೇ ಶತಮಾನದಲ್ಲಿ ಚೋಳರು ನಿರ್ಮಿಸಿದರು. ಒಂದು ಸ್ತಂಭದ ಮೇಲಿನ ಆಕೃತಿಯು ಒಂದನೆಯ ಕುಲೋತುಂಗ ಚೋಳನದು ಎಂದು ನಂಬಲಾಗಿದೆ ಮತ್ತು ಚೋಳರು ನಿರ್ಮಿಸಿದ ದೇವಾಲಯಗಳ ಒಳಗೋಡೆಗಳಲ್ಲಿ ಕನ್ನಡ ಮತ್ತು ತಮಿಳಿನ ಹಳೆಯ ಲಿಪಿಗಳಲ್ಲಿ ಶಾಸನಗಳಿವೆ. ವಾಸ್ತವವಾಗಿ, ಕೋಟೆಗೆ ಹತ್ತಿರವಿರುವ ಬೇಗೂರು ಸರೋವರವು ಅಷ್ಟೇ ಮುಖ್ಯವಾಗಿದೆ.


  ಇತಿಹಾಸಕರರು ಈ ಕೋಟೆಯ ಬಗ್ಗೆ ಏನ್ ಹೇಳ್ತಾರೆ?


  ಇತಿಹಾಸಕಾರರಾದ ಯಶಸ್ವಿನಿ ಶರ್ಮಾ "ಆಗ ರಾಷ್ಟ್ರಕೂಟರು ಗಂಗೆಯ ನೆಲದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದರು ಮತ್ತು ಅವರ ನಡುವೆ ನಿರಂತರ ಯುದ್ಧಗಳು ನಡೆಯುತ್ತಿದ್ದವು. ಈ ಕೋಟೆಯನ್ನು ರಕ್ಷಣಾ ದೃಷ್ಟಿಕೋನದಿಂದ ನಿರ್ಮಿಸಿದ್ದಿರಬಹುದು. ಕೋಟೆಯ ಸುತ್ತಲೂ ಗಿಡಗಳು ಬೆಳೆದಿರುವುದರಿಂದ ಕೋಟೆಯ ಗಾತ್ರವು ಕುಗ್ಗಿದೆಯೇ ಎಂದು ನಮಗೆ ತಿಳಿದಿಲ್ಲ.


  ಇದನ್ನೂ ಓದಿ: Kalaburagi: ರಾಷ್ಟ್ರಕೂಟ ರಾಜ ಸ್ನಾನಕ್ಕೆ ನಿರ್ಮಿಸಿದ ಕೊಳದಲ್ಲಿ ಈಜುವ ಖುಷಿಯೇ ಬೇರೆ!


  ಕೋಟೆ ಮತ್ತು ದೇವಾಲಯವನ್ನು ಪುನಃಸ್ಥಾಪಿಸುವ ಯೋಜನೆಗಳಿವೆ, ಆದರೆ ಅದನ್ನು ಸಾಕಷ್ಟು ಜಾಗರೂಕತೆಯಿಂದ ಮಾಡಬೇಕಾಗಿದೆ. ದೇವಾಲಯದ ಮೇಲೆ ನಿರ್ಮಿಸಲಾದ ರಾಜಗೋಪುರದಿಂದಾಗಿ, ಕೆಲವು ಪ್ರಾಚೀನ ರಚನಾತ್ಮಕ ಅವಶೇಷಗಳು ಕಳೆದು ಹೋಗಿರಬಹುದು. ಇದಲ್ಲದೆ, ದೇವಾಲಯವನ್ನು ವಾಸ್ತವವಾಗಿ ಸರೋವರದ ಬದುವಿನ ಮೇಲೆ ನಿರ್ಮಿಸಲಾಗಿದ್ದು, ಈಗ ಆ ಬದುವನ್ನು ರಸ್ತೆಯಾಗಿ ಪರಿವರ್ತಿಸಲಾಗಿದೆ" ಎಂದು ಹೇಳಿದರು.

  Published by:Latha CG
  First published: