Varamahalakshmi Vratha Bengaluru: ಧಾಂ ಧೂಂ ಎಂದು ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಬೆಂಗಳೂರು ರೆಡಿ!

Varalakshmi Vratham 2022 | ವರಮಹಾಲಕ್ಷ್ಮೀ ಪೂಜೆಗೆ ಕರುನಾಡು ಸಿದ್ಧವಾಗಿ ನಿಂತಿದೆ. ವರವನ್ನು ನೀಡೋ ದೇವಿಯನ್ನು ಒಲಿಸಿಕೊಳ್ಳಲು ಭಕ್ತರು ಮುಂದಾಗಿದ್ದಾರೆ. ಹಬ್ಬದ ತಯಾರಿ ಹೇಗಿದೆ ನೀವೇ ವಿಡಿಯೋ ನೋಡಿ

ವರವ

ವರವ ಕೊಡೇ ತಾಯೇ

 • Share this:
  ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬ ಅಂದ್ರೆ ಹೆಣ್ಮಕ್ಕಳಿಗೆ ಮೆಚ್ಚಿನ ಹಬ್ಬ. ಶ್ರಾವಣ ಮಾಸದಲ್ಲಿ (Shravan Masa) ಬರೋ ಮಹತ್ವದ ಹಬ್ಬವೇ ವರಮಹಾಲಕ್ಷ್ಮೀ ಹಬ್ಬ. ಚೆಂದದಲ್ಲಿ ರೆಡಿಯಾಗಿ, ವಿಶೇಷವಾಗಿ ಆಲಂಕರಿಕೊಂಡು ಹಬ್ಬ ಆಚರಿಸುತ್ತಾ ಓಡಾಡುತ್ತಿರೋದನ್ನು (Varamahalakshmi Festival Bengaluru) ನೋಡೋದೇ ಚಂದ. ಇದಕ್ಕಾಗಿ ವಾರಕ್ಕೂ ಮೊದಲೇ ಎಲ್ಲಾ ಮನೆ-ಮನಗಳಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಅದರಲ್ಲೂ ಈ ಬಾರಿ ಕೊರೋನಾ ನಮ್ಮಿಂದ ಬಹುತೇಕ ದೂರ ಹೋದ ಹಿನ್ನೆಲೆ ಇನ್ನಷ್ಟು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ಮಹಿಳೆಯರು ಪ್ಲ್ಯಾನ್ ಮಾಡಿಕೊಂಡಿದ್ರು. ಆದರೆ ಈ ಬಾರಿಯೂ ಹೆಂಗಳೆಯರಿಗೆ ವರಮಹಾಲಕ್ಷ್ಮೀ ಹಬ್ಬ (Varmahalakshmi Vratam 2022)ಕೈಸುಡೋ ತರಾ ಆಗೋಗಿದೆ. ದೇವಿಯ ಮೂರ್ತಿಯೇ ದುಬಾರಿಯಾಗಿದೆ.

  ವರಮಹಾಲಕ್ಷ್ಮೀ ಹಬ್ಬದಂದು ದೇವಿಯ ಅಲಂಕಾರಕ್ಕೆ ಹೆಚ್ಚಿನ ಮಹತ್ವ. ಅದಕ್ಕಾಗಿ ಹೆಂಗಳೆಯರು ಮುಂಜಾನೆಯೇ ಎದ್ದು ದೇವಿಯ ಅಲಂಕಾರದಲ್ಲಿ ತೊಡಗುತ್ತಾರೆ. ಆದರೆ ಈ ಬಾರಿ ದೇವಿಯ ಮೂರ್ತಿಯೇ ಮುಟ್ಟಂಗಿಲ್ಲ ಸ್ವಾಮಿ ಅನ್ನೋ ತರಾ ಆಗೋಗಿದೆ.

  ಬೆಲೆ ಏರಿಕೆ ಬಿಸಿ
  ವರಮಹಾಲಕ್ಷ್ಮೀ ಹಬ್ಬಕ್ಕೆ ಎಲ್ಲಾ ದುಬಾರಿಶ್ರಾವಣ ಮಾಸದ ಎರಡನೇ ಶುಕ್ರವಾರವೇ ವರಮಹಾಲಕ್ಷ್ಮೀ ಹಬ್ಬ. ಈ ಹಬ್ಬದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಖರೀದಿ ಭರಾಟೆ ಜೋರಾಗಿದೆ. ಆದರೆ ಹಬ್ಬದ ಎಲ್ಲಾ ವಸ್ತುಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಅದಕ್ಕಿಂತಲೂ ಮುಖ್ಯವಾಗಿ ಮೂರ್ತಿಯ ಬೆಲೆಯೇ ಹೆಚ್ಚಾಗಿದೆ.

  ವರವ ಕೊಡೋ ವರಮಹಾಲಕ್ಷ್ಮೀ
  ವರವ ಕೊಡೋ ವರಮಹಾಲಕ್ಷ್ಮೀ ಹಬ್ಬಕ್ಕೆ ಕಳೆ ಕೊಡೋದೇ ವಿಶೇಷವಾಗಿ ಅಲಂಕರಿಸಿರುವ ಮೂರ್ತಿ. ಜನ ಅವರವರ ಅನುಕೂಲಕ್ಕೆ ತಕ್ಕಂತೆ ದೇವಿಯನ್ನು ಶೃಂಗರಿಸ್ತಾರೆ. ಆದರೆ ಈ ಬಾರಿ ವರಮಹಾಲಕ್ಷ್ಮೀ ಮೂರ್ತಿಯ ಬೆಲೆಯೇ ಕೈಗೆಟುಕದ ರೀತಿ ಆಗೋಗಿದೆ.

  ಮೂರ್ತಿ ಚಿಕ್ಕದಾದರೂ ಬೆಲೆ ಏನಂತೀರ?
  ಚಿಕ್ಕ ಮೂರ್ತಿಯ ಬೆಲೆಯೇ 1000 ರೂಪಾಯಿಯ ಸಮೀಪದಲ್ಲಿದೆ. ವರಮಹಾಲಕ್ಷ್ಮೀ ಮೂರ್ತಿಯ ಬೆಲೆ ಎಷ್ಟೆಷ್ಟಿದೆ..?

  ಚಿಕ್ಕ ಮೂರ್ತಿ ಬೆಲೆ : ₹850-1250

  ಸಾಧಾರಣ ಗಾತ್ರದ ಮೂರ್ತಿಯ ಬೆಲೆ: ₹1200-1500

  ಕೊಂಚ ದೊಡ್ಡ ಮೂರ್ತಿ: ₹2500- 3700

  ಇನ್ನು ದೇವಿಯ ಫುಲ್ ಸೆಟ್ ಗೆ ₹8 ಸಾವಿರದಿಂದ ಆರಂಭವಾಗುತ್ತೆ. ವಿವಿಧ ಅಲಂಕಾರದಲ್ಲಿ ₹10 ಸಾವಿರದವರೆಗೂ ಮೂರ್ತಿಗಳು ದೊರೆಯುತ್ತದೆ. ಕಳೆದ ಬಾರಿ ₹5 ಸಾವಿರ ಆಸುಪಾಸಲ್ಲಿದ್ದ ಈ ಬೆಲೆ ಈಗ ದಿಢೀರ್ ಅಂತಾ 10 ಸಾವಿರದವರೆಗೆ ತಲುಪಿದೆ.

  ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

  ಹೂವು-ಹಣ್ಣು ಮುಟ್ಟಂಗಿಲ್ಲ..
  ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಬೆಂಗಳೂರಿಗೆ ವಿಶೇಷ ಕಳೆ ಬಂದಿರುತ್ತೆ. ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರೋರು ಸಂಭ್ರಮ ಸಡಗರದಿಂದ ಹಬ್ಬ ಆಚರಿಸ್ತಾರೆ. ಈಗಾಗಲೇ ಹಬ್ಬದ ನಿಮಿತ್ತ ಶಾಪಿಂಗ್ ಕೂಡ ಮುಗಿಸಿರ್ತಾರೆ. ಆದರೆ ಹೂವು, ಹಣ್ಣು ಎಲ್ಲವೂ ದುಬಾರಿಯಾಗಿದೆ.

  ಇದನ್ನೂ ಓದಿ: Uttara Kannada: ಜೀವಂತ ಹಾವಿಗೆ ಪೂಜೆ! ಇವರ ಹೆಂಡತಿ, ಮಕ್ಕಳಿಗೂ ಹಾವಂದ್ರೆ ಭಯವಿಲ್ಲ!

  ಯಾವುದನ್ನು ಕೊಳ್ಳೋದು-ಬಿಡೋದು ಅಂತಾ ಜಂಜಾಟದಲ್ಲಿದ್ದಾರೆ. ಅದರಲ್ಲೂ ದೇವಿ ಮೂರ್ತಿಯ ಬೆಲೆಯೂ ಹೆಚ್ಚಾಗಿದ್ದು ಹಬ್ಬ ಆಚರಿಸಲು ನೂರು ಬಾರಿ ಯೋಚಿಸುವಂತಾಗಿದೆ. ಆದರೂ ವರವ ಕೊಡೋ ಮಹಾಲಕ್ಷ್ಮೀಯನ್ನು ಭಕ್ತಿ ಭಾವದಿಂದ ನೆನೆದು ಸಂತೃಪ್ತರಾಗಲು ಸಿದ್ಧರಾಗಿದ್ದಾರೆ ಭಕ್ತರು.
  Published by:guruganesh bhat
  First published: