Bengaluru News: ಮುಂದಿನ ವರ್ಷ ಇನ್ನೂ ಗ್ರಾಂಡ್ ಆಗಿ ಹಬ್ಬ ಮಾಡ್ತೀವಿ! ಬೆಂಗಳೂರಲ್ಲಿ ಹೀಗಿತ್ತು ವರಮಹಾಲಕ್ಷ್ಮಿ ಸಡಗರ
ಒಟ್ನಲ್ಲಿ ಮಾರ್ಕೆಟಲ್ಲಿ ಅಗತ್ಯ ವಸ್ತುಗಳ ಬೆಲೆ ಸ್ವಲ್ಪ ತುಟ್ಟಿನೇ ಆದ್ರೂ ಹಬ್ಬದ ಭರಾಟೆಗೇನೂ ಕಡ್ಮೆಇರ್ಲಿಲ್ಲ. ವರಮಹಾಲಕ್ಷ್ಮಿ ಹಬ್ಬ ಮುಗ್ಸಿ ಶ್ರಾವಣ ಮಾಸದ ಮುಂದಿನ ವೆಲ್ಕಮ್ ಮಾಡೋಕೆ ಬೆಂಗಳೂರ ಜನ ರೆಡಿಯಾದ್ರು.
ಎಲ್ಲೆಲ್ಲೂ ಅಲಂಕಾರ..ನೋಡುತ್ತಿದ್ದರೆ ನೋಡುತ್ತಲೇ ಇರಬೇಕು..ಕೈಮುಗಿದು ಆ ತಾಯಿಯ ಪಾದಕ್ಕೆ ಶರಣಾಗಬೇಕು ಅನಿಸೋ ವಾತಾವರಣ..ಉಸಿರು ಉಸಿರಲ್ಲಿ ಭಕ್ತಿ ಭಾವ! ತಾಯೇ ಕಷ್ಟ ನೀಗಿಸಿ ಎಲ್ರಿಗೂ ಒಳ್ಳೇದು ಮಾಡು ಅನ್ನೋ ಬೇಡಿಕೆ ಆ ವರಮಹಾಲಕ್ಷ್ಮಿಗೆ ತಲುಪಿರಬೇಕು..ಹಾಗಿತ್ತು ಬೆಂಗಳೂರಿನಲ್ಲಿನ (Varamahalakshmi Vratha In Bengaluru) ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಸಡಗರ! ಹಿಂದಿನ ದಿನದಿಂದ್ಲೇ ಹಬ್ಬದ ತಯಾರಿ ಶುರುವಾಗಿತ್ತು, ಮನೆಮಂದಿಯೆಲ್ಲ ಬೆಳ್ಳಂ ಬೆಳಗ್ಗೆ ಬೇಗ ಎದ್ದು ಹೊಸ ಬಟ್ಟೆ ಉಟ್ಟು ರೆಡಿಯಾಗಿದ್ರು. ಹೂವು ಹಣ್ಣು ಇಟ್ಟು ಶ್ರದ್ಧಾಭಕ್ತಿಯಿಂದ ಪೂಜಿಸಿದ್ರು. ಹೇಗಿತ್ತು ಸಂಭ್ರಮ ಸಡಗರ? ನೀವೇ ವಿಡಿಯೋ ನೋಡಿಬಿಡಿ. ಆ ದೇವಿಯ ದರ್ಶನ ಪಡೆದು ಕೈಮುಗಿದುಬಿಡಿ.
ಒಟ್ನಲ್ಲಿ ಮಾರ್ಕೆಟಲ್ಲಿ ಅಗತ್ಯ ವಸ್ತುಗಳ ಬೆಲೆ ಸ್ವಲ್ಪ ತುಟ್ಟಿನೇ ಆದ್ರೂ ಹಬ್ಬದ ಭರಾಟೆಗೇನೂ ಕಡ್ಮೆಇರ್ಲಿಲ್ಲ. ವರಮಹಾಲಕ್ಷ್ಮಿ ಹಬ್ಬ ಮುಗ್ಸಿ ಶ್ರಾವಣ ಮಾಸದ ಮುಂದಿನ ವೆಲ್ಕಮ್ ಮಾಡೋಕೆ ಬೆಂಗ್ಳೂರ್ ಜನ ರೆಡಿಯಾದ್ರು