• Home
  • »
  • News
  • »
  • bengaluru-urban
  • »
  • Vande Bharat vs Shatabdi: ಮೈಸೂರು-ಬೆಂಗಳೂರು-ಚೆನ್ನೈ ಓಡಾಟಕ್ಕೆ ಈ 2 ರೈಲುಗಳೇ ಬೆಸ್ಟ್!

Vande Bharat vs Shatabdi: ಮೈಸೂರು-ಬೆಂಗಳೂರು-ಚೆನ್ನೈ ಓಡಾಟಕ್ಕೆ ಈ 2 ರೈಲುಗಳೇ ಬೆಸ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈಸೂರು-ಬೆಂಗಳೂರು-ಚೆನ್ನೈ ನಗರಗಳ ನಡುವಿನ ಸಂಚಾರಕ್ಕೆ ಹೊಸ ವಂದೇ ಭಾರತ್ ಎಕ್ಸ್​ಪ್ರೆಸ್ ಮತ್ತು ಶತಾಬ್ದಿ ಎಕ್ಸ್​ಪ್ರೆಸ್​ ರೈಲುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ನೋಡಿ ಎರಡೂ ರೈಲುಗಳ ವೇಳಾಪಟ್ಟಿ ವಿವರ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಅತ್ಯಂತ ನಿರೀಕ್ಷೆ ಹುಟ್ಟಿಸಿರುವ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ನವೆಂಬರ್ 11 ರಿಂದ ಪ್ರಾರಂಭವಾಗಲಿದೆ. ಗಂಟೆಗೆ ಗರಿಷ್ಠ 160-180 ಕಿಮೀ ವೇಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ 75-77 ಕಿಮೀ ವೇಗದಲ್ಲಿ ಚಲಿಸುತ್ತದೆ. ಅಂದರೆ ಸದ್ಯ ಸೇವೆ ನೀಡುತ್ತಿರುವ ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ (Vande Bharat vs Shatabdi) ಸ್ವಲ್ಪ ಹೆಚ್ಚೇ ವೇಗದಲ್ಲಿ ಮೈಸೂರು-ಬೆಂಗಳೂರು-ಚೆನ್ನೈ (Mysuru-Bengaluru-Chennai) ವಂದೇ ಭಾರತ್ ರೈಲು ಸಂಚರಿಸಲಿದೆ. ಹಾಗಾದರೆ ಮೈಸೂರು-ಬೆಂಗಳೂರು-ಚೆನ್ನೈ ನಗರಗಳ ನಡುವಿನ ಸಂಚಾರಕ್ಕೆ ಹೊಸ ವಂದೇ ಭಾರತ್ ಎಕ್ಸ್​ಪ್ರೆಸ್ ಮತ್ತು ಶತಾಬ್ದಿ ಎಕ್ಸ್​ಪ್ರೆಸ್​ ರೈಲುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ನೋಡಿ ಎರಡೂ ರೈಲುಗಳ ವೇಳಾಪಟ್ಟಿ ವಿವರ.


    ಆದರೆ ದೇಶದಲ್ಲಿ ಈಗಾಗಲೇ ಆರಂಭಗೊಂಡಿರುವ ಕೆಲವೇ ಕೆಲವು ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗಿಂತ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್​ಪ್ರೆಸ್ ವೇಗ ಸ್ವಲ್ಪ ನಿಧಾನವಾಗಿದೆ. ಸದ್ಯ ದೇಶದಲ್ಲಿನ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳಲ್ಲಿ ಅತಿ ನಿಧಾನವಾಗಿ ಸಂಚರಿಸುವ ರೈಲು ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ್ದಾಗಿರಲಿದೆ.


    ವಂದೇ ಭಾರತ್ ಎಕ್ಸ್​ಪ್ರೆಸ್ ಸಂಚಾರ ವಿವರ ಹೀಗಿದೆ
    ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ. ವಾರದಲ್ಲಿ ವಾರದಲ್ಲಿ ಒಟ್ಟು 6 ದಿನ ಈ ರೈಲು ಸೇವೆ ಒದಗಿಸಲಿದೆ. ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ- ಈ 6 ದಿನಗಳಂದು ಮಾತ್ರ ವಂದೇ ಭಾರತ್ ಸಂಚರಿಸಲಿದೆ.


    497 ಕಿಮೀ ಇಷ್ಟು ಕಡಿಮೆ ಸಮಯದ ಪ್ರಯಾಣ!
    ಈ ರೈಲು ಚೆನ್ನೈ ಮತ್ತು ಮೈಸೂರು ನಡುವೆ ಒಟ್ಟು 497 ಕಿಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ತಲುಪುತ್ತದೆ. ಗಂಟೆಗೆ ಸರಾಸರಿ 74 ಕಿಮೀ ವೇಗವಾಗಿ ಸಂಚರಿಸುವ ವಂದೇ ಭಾರತ್ ರೈಲು ಬೆಂಗಳೂರು ಸಿಟಿ ಜಂಕ್ಷನ್​ನಲ್ಲಿ ಮಾತ್ರ ನಿಲ್ಲುತ್ತದೆ.


    ಬೆಳಗ್ಗೆ 5:50ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್​ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ಎಕ್ಸ್​ಪ್ರೆಸ್ 10:25ಕ್ಕೆಲ್ಲ ಮೆಜೆಸ್ಟಿಕ್ ತಲುಪುತ್ತದೆ. ಅಲ್ಲಿಂದ 10:30ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆಲ್ಲ ಮೈಸೂರು ರೈಲು ನಿಲ್ದಾಣವನ್ನು ತಲುಪಲಿದೆ. ಈ ರೈಲು ಸುಮಾರು 497 ಕಿ.ಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.


    ವಂದೇ ಭಾರತ್ ಎಕ್ಸ್‌ಪ್ರೆಸ್ (ಮಂಗಳವಾರ ಹೊರತುಪಡಿಸಿ) ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ (ತಾತ್ಕಾಲಿಕ ವೇಳಾಪಟ್ಟಿ)


    ಚೆನ್ನೈನಿಂದ ಹೊರಡುವ ಸಮಯ: 5.50am


    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಬೆಳಗ್ಗೆ 8.30


    KSR ರೈಲು ನಿಲ್ದಾಣಕ್ಕೆ ಆಗಮನ: 10.25 am/10.30am


    ಮೈಸೂರು ಜಂಕ್ಷನ್‌ಗೆ ಆಗಮನ: ಮಧ್ಯಾಹ್ನ 12.30


    ಒಟ್ಟು ದೂರ: 6.40 ಗಂಟೆಗಳು


    ಒಟ್ಟಾರೆ ವೇಗ: 75.60km/hr


    ಇದನ್ನೂ ಓದಿ: Bengaluru Namma Metro: ರಾಜ್ಯೋತ್ಸವಕ್ಕೆ ನಮ್ಮ ಮೆಟ್ರೋ ಭರ್ಜರಿ ಕೊಡುಗೆ; ಹೊಸ ಸೌಲಭ್ಯ ಆರಂಭ


    ವಂದೇ ಭಾರತ್ ಎಕ್ಸ್‌ಪ್ರೆಸ್ -ಮಂಗಳವಾರ ಹೊರತುಪಡಿಸಿ ಮೈಸೂರಿನಿಂದ ಬೆಂಗಳೂರಿನ ಮೂಲಕ ಚೆನ್ನೈಗೆ (ತಾತ್ಕಾಲಿಕ ವೇಳಾಪಟ್ಟಿ)


    ಮೈಸೂರಿನಿಂದ ನಿರ್ಗಮನ : ಮಧ್ಯಾಹ್ನ 1.05
    ಕೆಎಸ್ಆರ್ ಬೆಂಗಳೂರಿಗೆ ಆಗಮನ: ಮಧ್ಯಾಹ್ನ 2.55/3 ಗಂಟೆಗೆ
    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಸಂಜೆ 4.55
    ಚೆನ್ನೈ ಆಗಮನ: ರಾತ್ರಿ 7.45
    ವೇಗ: 75.60km/hr


    ಇನ್ನು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮಾಹಿತಿ ಹೀಗಿದೆ. 
    ಚೆನ್ನೈನಿಂದ ನಿರ್ಗಮನ: 6am
    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಬೆಳಗ್ಗೆ 8.50
    KSR ಬೆಂಗಳೂರಿಗೆ ಆಗಮನ: 10.45am/10.50am
    ಮೈಸೂರು ಜಂಕ್ಷನ್‌ಗೆ ಆಗಮನ: ಮಧ್ಯಾಹ್ನ 1 ಗಂಟೆಗೆ
    ಒಟ್ಟು ದೂರ: 7 ಗಂಟೆಗಳು
    ಒಟ್ಟಾರೆ ವೇಗ: 72.04 km/hr


    ಇದನ್ನೂ ಓದಿ: Masjid Tour: ಮಸೀದಿ ಒಳಗೆ ಏನೆಲ್ಲಾ ಇರುತ್ತೆ? ಇಲ್ಲಿ ಸಿಗುತ್ತೆ ಉತ್ತರ


    ಶತಾಬ್ದಿ ಎಕ್ಸ್‌ಪ್ರೆಸ್  ಮೈಸೂರಿನಿಂದ ಬೆಂಗಳೂರಿನ ಮೂಲಕ ಚೆನ್ನೈಗೆ
    ನಿರ್ಗಮನ (ಮೈಸೂರಿನಿಂದ): ಮಧ್ಯಾಹ್ನ 2.15
    KSR ಬೆಂಗಳೂರಿಗೆ ಆಗಮನ: 4.10pm/4.15pm
    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಸಂಜೆ 6.25
    ಚೆನ್ನೈ ಆಗಮನ: ರಾತ್ರಿ 9.30
    ಒಟ್ಟಾರೆ ವೇಗ: 69.56 km/hr
    ಒಟ್ಟು ಸಮಯ: 7.15 ಗಂಟೆಗಳು

    Published by:ಗುರುಗಣೇಶ ಡಬ್ಗುಳಿ
    First published: