• Home
  • »
  • News
  • »
  • bengaluru-urban
  • »
  • Vande Bharat Express: ವಂದೇ ಭಾರತ್ ಎಫೆಕ್ಟ್; ಬೆಂಗಳೂರು-ಚೆನ್ನೈ ನಡುವಿನ 2 ರೈಲುಗಳ ವೇಗ ಕಡಿಮೆ ಸಾಧ್ಯತೆ

Vande Bharat Express: ವಂದೇ ಭಾರತ್ ಎಫೆಕ್ಟ್; ಬೆಂಗಳೂರು-ಚೆನ್ನೈ ನಡುವಿನ 2 ರೈಲುಗಳ ವೇಗ ಕಡಿಮೆ ಸಾಧ್ಯತೆ

ವಂದೇ ಭಾರತ್ ಎಕ್ಸ್‌ಪ್ರೆಸ್

ವಂದೇ ಭಾರತ್ ಎಕ್ಸ್‌ಪ್ರೆಸ್

Bengaluru News: ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸ್​ಪ್ರೆಸ್​ಗೆ ಅವಕಾಶ ಕಲ್ಪಿಸಲು ಈ ರೈಲುಗಳನ್ನು ನಿಧಾನಗೊಳಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ನವೆಂಬರ್ 11 ರಂದು ದಕ್ಷಿಣ ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್‌ ಎಕ್ಸ್​ಪ್ರೆಸ್ ಕಾರ್ಯಾಚರಣೆ ಶುರುಮಾಡಲಿದೆ. ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat Express) ಸಂಚಾರ ಸೇವೆ ಒದಗಿಸಲಿದೆ. ವಂದೇ ಭಾರತ್ ಸಲುವಾಗಿ ಎರಡು ಬೆಂಗಳೂರು-ಚೆನ್ನೈ ರೈಲುಗಳ (Bengaluru To Chennai Trains) ವೇಗ ಸ್ವಲ್ಪ ನಿಧಾನವಾಗುವ ಸಾಧ್ಯತೆಯಿದೆ ಎಂದು ಭಾರತೀಯ ರೈಲ್ವೇ ಮಾಹಿತಿ ನೀಡಿದೆ.  KSR ಬೆಂಗಳೂರು ನಗರ ಮತ್ತು MGR ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಗಳ ನಡುವೆ ಸಂಚರಿಸುವ 12640 ಬೃಂದಾವನ ಎಕ್ಸ್‌ಪ್ರೆಸ್ ರೈಲಿನ ವೇಗ ಕಡಿಮೆಯಾಗುವ ಸಾಧ್ಯತೆಯಿದೆ.


    ರೈಲು ಸಂಖ್ಯೆ 22626 KSR ಬೆಂಗಳೂರು ನಗರ- MGR ಚೆನ್ನೈ ಸೆಂಟ್ರಲ್ ಎಸಿ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಸಮಯದಲ್ಲೂ ಬದಲಾವಣೆ ಆಗಲಿದೆ.


    ಬೃಂದಾವನ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಸಾಧ್ಯತೆ
    ಕೆಎಸ್‌ಆರ್ ಬೆಂಗಳೂರು ಸಿಟಿ ನಿಲ್ದಾಣದಿಂದ ಬೃಂದಾವನ ಎಕ್ಸ್‌ಪ್ರೆಸ್‌ ಈಗಿನಂತೆಯೇ ಮಧ್ಯಾಹ್ನ 2.50 ಕ್ಕೆ ಹೊರಡಲಿದೆ. ಆದರೆ ಚೆನ್ನೈ ತಲುಪುವ ಸಮಯವು ಈಗಿರುವ ರಾತ್ರಿ 8.50ರ ಬದಲು ರಾತ್ರಿ 9 ಗಂಟೆಗೆ ತಲುಪಬಹುದು. ಅದೇ ರೀತಿ, ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಪ್ರಸ್ತುತ ಬೆಂಗಳೂರಿನಿಂದ ಮಧ್ಯಾಹ್ನ 2.30 ಕ್ಕೆ ಹೊರಡುವ ಸಾಧ್ಯತೆಯಿದೆ. ಆದರೆ ಪ್ರಸ್ತುತ ರಾತ್ರಿ 8.25 ಕ್ಕೆ ಬದಲಾಗಿ ರಾತ್ರಿ 8.35 ಕ್ಕೆ ಚೆನ್ನೈ ತಲುಪುತ್ತದೆ.


    ಬುಧವಾರ ಬಿಟ್ಟು ಮಿಕ್ಕೆಲ್ಲ ದಿನಗಳಲ್ಲಿ ವಂದೇ ಭಾರತ್ ಸಂಚಾರ
    ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸ್​ಪ್ರೆಸ್​ಗೆ ಅವಕಾಶ ಕಲ್ಪಿಸಲು ಈ ರೈಲುಗಳನ್ನು ನಿಧಾನಗೊಳಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮತ್ತು ಚೆನ್ನೈ ನಡುವೆ ವಂದೇ ಭಾರತ್ ರೈಲು ವಾರದಲ್ಲಿ ಬುಧವಾರ ಹೊರತುಪಡಿಸಿ 6 ದಿನಗಳಂದು  ಚಲಿಸುತ್ತದೆ.


    ಇದನ್ನೂ ಓದಿ: Rajyotsava Award: ಸಾಲುಮರದ ನಿಂಗಣ್ಣ, ಭೂಮಾಲಿಕ ಮೋಸ ಮಾಡಿದರೂ ಕೈ ಬಿಡಲಿಲ್ಲ ಪ್ರಕೃತಿ ಮಾತೆ!


    ವೇಳಾಪಟ್ಟಿ ಹೀಗಿದೆ ನೋಡಿ
    ರೈಲು ನಂ. 20607 ವಿಬಿ ಎಕ್ಸ್‌ಪ್ರೆಸ್ ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ನಗರ-ಮೈಸೂರು ಬೆಳಗ್ಗೆ 5.50ಕ್ಕೆ ಚೆನ್ನೈನಿಂದ ಹೊರಡಲಿದ್ದು, ಬೆಳಗ್ಗೆ 10.25ಕ್ಕೆ ಬೆಂಗಳೂರು ಮತ್ತು ಮೈಸೂರಿಗೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ ರೈಲು ನಂ. 20608 ವಿಬಿ ಎಕ್ಸ್‌ಪ್ರೆಸ್ ಮೈಸೂರಿನಿಂದ ಮಧ್ಯಾಹ್ನ 1:05ಕ್ಕೆ ಹೊರಡಲಿದ್ದು, ಕೆಎಸ್‌ಆರ್ ಬೆಂಗಳೂರು ನಗರಕ್ಕೆ ಮಧ್ಯಾಹ್ನ 2.55ಕ್ಕೆ ಮತ್ತು ಚೆನ್ನೈಗೆ ರಾತ್ರಿ 7.35ಕ್ಕೆ ತಲುಪಲಿದೆ.


    ಇದನ್ನೂ ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


    ನಮ್ಮ ವಂದೇ ಭಾರತ್ ಸ್ವಲ್ಪ ಸ್ಲೋ..
    160-180kmph ವೇಗದಲ್ಲಿ ಕಾರ್ಯನಿರ್ವಹಿಸಬಹುದಾದ ಸೆಮಿ-ಹೈ-ಸ್ಪೀಡ್ ರೈಲು, ವೇಗದ ನಿರ್ಬಂಧಗಳು ಮತ್ತು ಇತರ ಮಿತಿಗಳಿಂದ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಗಂಟೆಗೆ ಸರಾಸರಿ 75-77 ಕಿಲೋ ಮೀಟರ್ ವೇಗದಲ್ಲ್ಇ ಮಾತ್ರ ಚಲಿಸುವ ಸಾಧ್ಯತೆಯಿದೆ. ಇದರರ್ಥ ವಂದೇ ಭಾರತ್ ರೈಲು ಪ್ರಯಾಣಿಕರು ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ 20-35 ನಿಮಿಷ ಮೊದಲು ಪ್ರಯಾಣ ಮಾಡಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: