• Home
  • »
  • News
  • »
  • bengaluru-urban
  • »
  • Vande Bharat Express: ಕರ್ನಾಟಕದಲ್ಲೂ ಶುರುವಾಯ್ತು ವಂದೇ ಭಾರತ್ ಪ್ರಾಯೋಗಿಕ ಸಂಚಾರ!

Vande Bharat Express: ಕರ್ನಾಟಕದಲ್ಲೂ ಶುರುವಾಯ್ತು ವಂದೇ ಭಾರತ್ ಪ್ರಾಯೋಗಿಕ ಸಂಚಾರ!

ಇದೇ ನೋಡಿ ಹೊಸ ರೈಲು

ಇದೇ ನೋಡಿ ಹೊಸ ರೈಲು

Bengaluru News: ನವೆಂಬರ್ 11 ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಬಹು ನಿರೀಕ್ಷೆ ಹುಟ್ಟಿಸಿರುವ ಚೆನ್ನೈ-ಬೆಂಗಳೂರು-ಮೈಸೂರು ನಡುವಿನ (Chennai-Bengaluru-Mysuru) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೋಮವಾರ ಬೆಳಿಗ್ಗೆ ಚೆನ್ನೈ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆ ಸುಮಾರಿಗೆ ತನ್ನ ಪ್ರಾಯೋಗಿಕ ಓಡಾಟವನ್ನು ಪ್ರಾರಂಭಿಸಿದೆ. ಈ ರೈಲು (Vande Bharat Express) ಸುಮಾರು ಆರೂವರೆ ಗಂಟೆಗಳಲ್ಲಿ ಚೆನ್ನೈ-ಮೈಸೂರು ನಗರಗಳ ನಡುವಿನ 504 ಕಿಲೋಮೀಟರ್ ದೂರವನ್ನು ಕ್ರಮಿಸುವ ಮೂಲಕ ಮಧ್ಯಾಹ್ನ 12:30 ಕ್ಕೆ ಮೈಸೂರನ್ನು ತಲುಪುವ ನಿರೀಕ್ಷೆಯಿದೆ.


    ನವೆಂಬರ್ 11 ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಹೈಸ್ಪೀಡ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್‌ಎಸ್) ನಿಲ್ದಾಣದಲ್ಲಿ ಒಂದೇ ನಿಲುಗಡೆಯನ್ನು ಹೊಂದಿರುತ್ತದೆ.


    ವಂದೇ ಭಾರತ್ ಎಕ್ಸ್​ಪ್ರೆಸ್ ಸಂಚಾರ ವಿವರ ಹೀಗಿದೆ
    ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ. ವಾರದಲ್ಲಿ ವಾರದಲ್ಲಿ ಒಟ್ಟು 6 ದಿನ ಈ ರೈಲು ಸೇವೆ ಒದಗಿಸಲಿದೆ. ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ- ಈ 6 ದಿನಗಳಂದು ಮಾತ್ರ ವಂದೇ ಭಾರತ್ ಸಂಚರಿಸಲಿದೆ.


    497 ಕಿಮೀ ಇಷ್ಟು ಕಡಿಮೆ ಸಮಯದ ಪ್ರಯಾಣ!
    ಈ ರೈಲು ಚೆನ್ನೈ ಮತ್ತು ಮೈಸೂರು ನಡುವೆ ಒಟ್ಟು 497 ಕಿಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ತಲುಪುತ್ತದೆ. ಗಂಟೆಗೆ ಸರಾಸರಿ 74 ಕಿಮೀ ವೇಗವಾಗಿ ಸಂಚರಿಸುವ ವಂದೇ ಭಾರತ್ ರೈಲು ಬೆಂಗಳೂರು ಸಿಟಿ ಜಂಕ್ಷನ್​ನಲ್ಲಿ ಮಾತ್ರ ನಿಲ್ಲುತ್ತದೆ.


    ಇದನ್ನು ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


    ಬೆಳಗ್ಗೆ 5:50ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್​ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ಎಕ್ಸ್​ಪ್ರೆಸ್ 10:25ಕ್ಕೆಲ್ಲ ಮೆಜೆಸ್ಟಿಕ್ ತಲುಪುತ್ತದೆ. ಅಲ್ಲಿಂದ 10:30ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆಲ್ಲ ಮೈಸೂರು ರೈಲು ನಿಲ್ದಾಣವನ್ನು ತಲುಪಲಿದೆ. ಈ ರೈಲು ಸುಮಾರು 497 ಕಿ.ಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.


    ವಂದೇ ಭಾರತ್ ಎಕ್ಸ್‌ಪ್ರೆಸ್ (ಮಂಗಳವಾರ ಹೊರತುಪಡಿಸಿ) ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ (ತಾತ್ಕಾಲಿಕ ವೇಳಾಪಟ್ಟಿ)


    ಚೆನ್ನೈನಿಂದ ಹೊರಡುವ ಸಮಯ: 5.50am
    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಬೆಳಗ್ಗೆ 8.30
    KSR ರೈಲು ನಿಲ್ದಾಣಕ್ಕೆ ಆಗಮನ: 10.25 am/10.30am
    ಮೈಸೂರು ಜಂಕ್ಷನ್‌ಗೆ ಆಗಮನ: ಮಧ್ಯಾಹ್ನ 12.30
    ಒಟ್ಟು ದೂರ: 6.40 ಗಂಟೆಗಳು
    ಒಟ್ಟಾರೆ ವೇಗ: 75.60km/hr


    ವಂದೇ ಭಾರತ್ ಎಕ್ಸ್‌ಪ್ರೆಸ್ -ಮಂಗಳವಾರ ಹೊರತುಪಡಿಸಿ ಮೈಸೂರಿನಿಂದ ಬೆಂಗಳೂರಿನ ಮೂಲಕ ಚೆನ್ನೈಗೆ (ತಾತ್ಕಾಲಿಕ ವೇಳಾಪಟ್ಟಿ)


    ಮೈಸೂರಿನಿಂದ ನಿರ್ಗಮನ : ಮಧ್ಯಾಹ್ನ 1.05
    ಕೆಎಸ್ಆರ್ ಬೆಂಗಳೂರಿಗೆ ಆಗಮನ: ಮಧ್ಯಾಹ್ನ 2.55/3 ಗಂಟೆಗೆ
    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಸಂಜೆ 4.55
    ಚೆನ್ನೈ ಆಗಮನ: ರಾತ್ರಿ 7.45
    ವೇಗ: 75.60km/hr


    ಇನ್ನು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮಾಹಿತಿ ಹೀಗಿದೆ.
    ಚೆನ್ನೈನಿಂದ ನಿರ್ಗಮನ: 6am
    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಬೆಳಗ್ಗೆ 8.50
    KSR ಬೆಂಗಳೂರಿಗೆ ಆಗಮನ: 10.45am/10.50am
    ಮೈಸೂರು ಜಂಕ್ಷನ್‌ಗೆ ಆಗಮನ: ಮಧ್ಯಾಹ್ನ 1 ಗಂಟೆಗೆ
    ಒಟ್ಟು ದೂರ: 7 ಗಂಟೆಗಳು
    ಒಟ್ಟಾರೆ ವೇಗ: 72.04 km/hr


    ಇದನ್ನೂ ಓದಿ: Vande Bharat vs Shatabdi: ಮೈಸೂರು-ಬೆಂಗಳೂರು-ಚೆನ್ನೈ ಓಡಾಟಕ್ಕೆ ಈ 2 ರೈಲುಗಳೇ ಬೆಸ್ಟ್!


    ಶತಾಬ್ದಿ ಎಕ್ಸ್‌ಪ್ರೆಸ್ ಮೈಸೂರಿನಿಂದ ಬೆಂಗಳೂರಿನ ಮೂಲಕ ಚೆನ್ನೈಗೆ
    ನಿರ್ಗಮನ (ಮೈಸೂರಿನಿಂದ): ಮಧ್ಯಾಹ್ನ 2.15
    KSR ಬೆಂಗಳೂರಿಗೆ ಆಗಮನ: 4.10pm/4.15pm
    ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಆಗಮನ: ಸಂಜೆ 6.25
    ಚೆನ್ನೈ ಆಗಮನ: ರಾತ್ರಿ 9.30
    ಒಟ್ಟಾರೆ ವೇಗ: 69.56 km/hr
    ಒಟ್ಟು ಸಮಯ: 7.15 ಗಂಟೆಗಳು

    Published by:ಗುರುಗಣೇಶ ಡಬ್ಗುಳಿ
    First published: