ಬೆಂಗಳೂರು: ಹದವಾಗಿ ನಾದಿದ ಬಿಳಿಯ ಹಿಟ್ಟು, ಅದರೊಳಗೆ ಅವಿತು ಕುಳಿತ ಹಬ್ಬದ ಸವಿಯ ಹಳದಿ ಹೂರಣ. ತಿಂದವರಿಗೇ ಗೊತ್ತು ಇದರ ಗಮ್ಮತ್ತು! ಯುಗಾದಿ ಹಬ್ಬದ (Ugadi 2023) ಊಟದಲ್ಲಿ ಈ ಹೋಳಿಗೆಯೇ (Holige) ಪ್ರಮುಖ ಆಕರ್ಷಣೆ.
ಬಾದಾಮಿ, ಕ್ಯಾರೆಟ್, ಖರ್ಜೂರ, ಕಾಯಿ, ಬೇಳೆ, ಪೈನಾಪಲ್ ಹೀಗೆ ಒಂದಕ್ಕಿಂತ ಒಂದು ರುಚಿ. ಬಿಸಿಬಿಸಿ ಕಾವಲಿಯ ಮೇಲೆ ಹದವಾಗಿ ಬೆಂದು ಗ್ರಾಹಕರ ಮನೆ ಸೇರೋ ಈ ಹೋಳಿಗೆ ತಯಾರಿಸೋದ್ರಲ್ಲಿ ಬ್ಯುಸಿಯಾಗಿರೋ ಯುವಕರು. ಇದೆಲ್ಲಾ ಯುಗಾದಿ ಹಬ್ಬದ ತಯಾರಿ.
ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!
ಹಬ್ಬದೂಟದ ರುಚಿ ಹೆಚ್ಚಿಸುವ ತಿನಿಸು
ಹಬ್ಬ ಅಂದ್ರೆ ಸ್ವೀಟ್ ಇಲ್ದೇ ಇದ್ರಾಗುತ್ತಾ? ಅದ್ರಲ್ಲೂ ಯುಗಾದಿ ಅಂದ್ರೆ ಹೋಳಿಗೆ ಇಲ್ದಿದ್ರೆ ಆಗೋದೇ ಇಲ್ಲ. ಸುಮಾರು 16 ರೂಪಾಯಿಗೆ ಒಂದ್ರಂತೆ ಮಾರಾಟವಾಗೋ ಈ ಹೋಳಿಗೆಗಳು ಹಬ್ಬದೂಟಕ್ಕೆ ಕಳೆ-ರುಚಿ ಹೆಚ್ಚಿಸುತ್ತವೆ.
ಇದನ್ನೂ ಓದಿ: Bengaluru News: 100 ಅಡಿಗಿಂತ ಎತ್ತರದ ತೇರು ನೋಡಲು ಈ ಜಾತ್ರೆಗೆ ಬನ್ನಿ!
ರುಚಿಯಾದ ಹೋಳಿಗೆಗೆ ಇದೆ ಭಾರೀ ಡಿಮ್ಯಾಂಡ್
ಬೆಂಗಳೂರಲ್ಲಿರೋ ಹೋಳಿಗೆ ಮನೆಗಳಲ್ಲಂತೂ ಸೆಕೆಂಡೂ ಬಿಡುವಿಲ್ಲದೇ ಈ ತಿಂಡಿಗಳದ್ದೇ ಬ್ಯುಸಿನೆಸ್. ಬೆಳಗ್ಗೆಯಿಂದ ರಾತ್ರಿವರೆಗೂ ಹಿಟ್ಟು ನಾದುತ್ತಾ, ತೀಡುತ್ತಾ, ಗೋಲದ ರೂಪು ಕೊಡುತ್ತಾ ಈ ಯುವಕರು ತಯಾರಿಸೋ ಹೋಳಿಗೆ ರುಚಿಗೆ ಸಾಟಿಯೇ ಇಲ್ಲ. ನೀವೂ ಹಬ್ಬಕ್ಕೆ ಹೊಟ್ಟೆತುಂಬಾ ಹೋಳಿಗೆ ತುಪ್ಪ ತಿನ್ನಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ