ಬೆಂಗಳೂರು ಜನರಿಗೆ ಸಮಾಧಾನಕರ ಸುದ್ದಿಯೊಂದು (Bengaluru News) ಹೊರಬಿದ್ದಿದೆ. ಉಬರ್ ಕಂಪನಿಯ ಆಟೋ ಪ್ರಯಾಣದ (Uber Auto Fair) ದರದಲ್ಲಿ ಇಳಿಕೆ ಮಾಡಲಾಗಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ಮತ್ತು ಸರ್ಕಾರದಿಂದ ಬಿಸಿ ತಟ್ಟಿದ ಬೆನ್ನಲ್ಲೇ ಉಬರ್ ಆಟೋ ಸೇವೆಯ ದರದಲ್ಲಿ ಇಳಿಕೆ ಮಾಡಿದೆ.
ಈ ಹಿಂದೆ ಆಗಿದ್ದಿಷ್ಟು
ಜನರಿಂದ ಹಣ ಸುಲಿಗೆ ಮಾಡುತ್ತಿರುವ ಆರೋಪದಡಿ ಆಟೋ ಸೇವೆ ಬ್ಯಾನ್ ವಿರುದ್ಧ ಓಲಾ, ಉಬರ್ (Ola Uber Ban In Bengaluru) ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಮಧ್ಯಂತರ ತಡೆ ನೀಡಿದೆ. ಓಲಾ ಉಬರ್ ಆಟೋ ಸೇವೆ ಒದಗಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಯ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ. ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತೆ ಇಲ್ಲ. ಓಲಾ, ಉಬರ್ ಕಂಪನಿ (Ola Uber Service in Bengaluru) ಅನುಕೂಲಕರ ದರವನ್ನು ವಿಧಿಸಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಆದೇಶ ನೀಡಿದೆ.
ಇದನ್ನೂ ಓದಿ: Uttara Kannada: ಗಣಪಮ್ಮ, ದುಗ್ಗಮ್ಮ, ಭಾಗೀರಥಮ್ಮ..ಗರ್ಭಿಣಿ-ಬಾಣಂತಿಯರೂ ಜೈಲು ಸೇರಿದರು!
2021ರ ಸಾರಿಗೆ ಇಲಾಖೆ ನಿಗದಿ ಪಡಿಸಿದ ದರವನ್ನು ಪಾಲಿಸಬೇಕು. 06-07-2021 ರಲ್ಲಿ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಪಾಲನೆ ಮಾಡಬೇಕು. ಹೆಚ್ಚುವರಿ ಸರ್ವಿಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದಿರುವ ಕರ್ನಾಟಕ ಹೈಕೋರ್ಟ್ 10 ರಿಂದ 15 ದಿನದ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿಕೆ ಮಾಡಿದೆ.
ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!
ಓಲಾ, ಉಬರ್ ಸಂಸ್ಥೆಗಳಿಗೆ ಸರ್ಕಾರವೇ ದರ ಫಿಕ್ಸ್ ಮಾಡಿದೆ. ಇಂದು ರಾಜ್ಯ ಸರ್ಕಾರ ಹಾಗೂ ಓಲಾ, ಉಬರ್ ಪ್ರತಿನಿಧಿಗಳ ಮಹತ್ವದ ಸಭೆ ನಡೆಯಿತು. ಸರ್ಕಾರದ ಪರವಾಗಿ ಸಾರಿಗೆ ಇಲಾಖೆ ಆಯುಕ್ತರು ಭಾಗಿಯಾಗಿದ್ದು, ಈ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಟೋಗಳಿಗೆ ಸರ್ಕಾರವೇ ಜಿಎಸ್ಟಿ (GST) ಜೊತೆಗೆ ದರ ನಿಗದಿ ಮಾಡಿದೆ.
ಈ ಮುನ್ನ ಏನೆಲ್ಲ ಆಗಿತ್ತು?
ಜನರಿಂದ ಸುಲಿಗೆ ಮಾಡುತ್ತಿರುವ ಆರೋಪದ ಮೇಲೆ ಆಟೋ ಸೇವೆ ಬ್ಯಾನ್ ಮಾಡಿದ್ದ RTO ನಿರ್ಧಾರಕ್ಕೆ ಓಲಾ, ಉಬರ್ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಓಲಾ- ಊಬರ್ ಸಂಸ್ಥೆ ಜೊತೆ ಸಾರಿಗೆ ಇಲಾಖೆ ಆಯುಕ್ತ ಟಿ.ಹೆಚ್.ಎಂ ಕುಮಾರ್ ಸಭೆ ನಡೆಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ