ಬೆಂಗಳೂರು: ಹೆಜ್ಜೆಹೆಜ್ಜೆಗೂ ಬಗೆಬಗೆಯ ಮೀನುಗಳು! ಸುರಂಗ ಮಾರ್ಗ ಹೊಕ್ಕಂತೆ ಅಬ್ಬಾ! ಇಷ್ಟೊಂದು ವಿಧಧ ಮೀನುಗಳೂ ಇವೆಯಾ ಅನ್ನೋ ಫೀಲ್! ನಮ್ ಬೆಂಗಳೂರಿನಲ್ಲೇ (Bengaluru News) ವಿದೇಶಿ ಮೀನುಗಳ ಮತ್ಸ್ಯಲೋಕವೇ (Matsya Loka) ಸೃಷ್ಟಿಯಾಗಿದೆ. ಈ ಸಮುದ್ರ ಸುರಂಗದ (Tunnel Aquarium In Bengaluru) ಒಳಹೊಕ್ಕರೆ ಅದ್ಭುತ ಅನಿಸೋ 500 ಮೀನುಗಳನ್ನು ನೀವು ನೋಡಬಹುದು.
ಸಮುದ್ರ ಕುದುರೆ, ಮೊಸಳೆ ಮೀನು, ಈಲ್, ಏಂಜೆಲ್ ಫಿಶ್ ಇನ್ನೂ ನೂರಾರು ಮೀನುಗಳನ್ನು 20 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನೋಡಬಹುದು. ರಾಷ್ಟ್ರೀಯ ಗ್ರಾಹಕರ ಮೇಳದ ಸಹಕಾರದಲ್ಲಿ ಸೃಷ್ಟಿಯಾಗಿದೆ ಈ ಮತ್ಸ್ಯಲೋಕ.
ವಿದೇಶಕ್ಕೆ ಹೋಗ್ಬೇಕಂತ್ಲೇ ಇಲ್ಲ!
ಸಿಂಗಾಪುರ, ಜಪಾನ್, ದುಬೈ ಎಲ್ಲೂ ಹೋಗದೇ ನಮ್ಮ ಬೆಂಗಳೂರಲ್ಲೇ ಹೊಸ ಲೋಕಕ್ಕೆ ಹೋಗ್ಬರಬಹುದು ನೋಡಿ. ಬರೇ ನೋಡೋದಷ್ಟೇ ಅಲ್ಲ, ಮೀನುಗಳ ಬಗ್ಗೆ ಹೊಸ ಹೊಸ ಮಾಹಿತಿಗಳನ್ನೂ ತಿಳ್ಕೋಬಹುದು.
ಇದನ್ನೂ ಓದಿ: Wrestling Village: ಕುಸ್ತಿಪಟುಗಳ ಕಣಜ ಹಳಿಯಾಳ! ರೋಚಕ ಪಂದ್ಯವನ್ನು ಇಲ್ಲೇ ನೋಡಿ
ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಈ ಮತ್ಸ್ಯಲೋಕ ಇರೋದಾದ್ರೂ ಎಲ್ಲಿ?
ಇಷ್ಟೆಲ್ಲಾ ಆಯ್ತು, ಹಾಗಾದ್ರೆ ಈ ಮತ್ಸ್ಯಲೋಕ ಇರೋದಾದ್ರೂ ಎಲ್ಲಿ ಅಂತೀರಾ? ಬೆಂಗಳೂರಿನ ಕೆಂಗೇರಿ ಬಸ್ ಟರ್ಮಿನಲ್ ಮೆಟ್ರೊದಿಂದ ಸುಮಾರು 100 ಮೀಟರ್ ಬಂದ್ರೆ ಸಾಕು, ನೀವು ಈ ಮತ್ಸ್ಯಲೋಕದಲ್ಲಿ ಮೀನುಗಳ ಜೊತೆ ವಿಹರಿಸಬಹುದು.
ಇದನ್ನೂ ಓದಿ: Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ
ಇಲ್ಲೂ ಇದೆ ಇನ್ನೊಂದು ಮತ್ಸ್ಯಲೋಕ!
ಜೊತೆಗೆ ಜೆ.ಪಿ ನಗರದ 8ನೇ ಹಂತದಲ್ಲಿರೋ ಜಂಬೂಸವಾರಿ ದಿನ್ನೆ ಬಳಿಯೂ ಇಂಥದ್ದೇ ಮತ್ಸ್ಯಲೋಕವಿದೆ. ಹಾ! ಫೆಬ್ರವರಿ 2ನೇ ತಾರೀಕಿನವರೆಗೆ ಮಾತ್ರ ಈ ಎರಡೂ ಮತ್ಸ್ಯಲೋಕಗಳು ಇರುತ್ತೆ ನೆನಪಿಟ್ಕೊಳ್ಳಿ.
ವಿಡಿಯೋ, ವರದಿ: ಗುರುಗಣೇಶ ಭಟ್, ಡಬ್ಗುಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ