Bengaluru: ಮಲ್ಲಿಗೆ ಹೂವಿನ ಕರಗ ಹೊತ್ತ ಮಂಗಳಮುಖಿಯರು!

ಜಾತ್ರಾ ವೈಭವ

ಜಾತ್ರಾ ವೈಭವ

ಪ್ಲೇಗ್ ಮಾರಮ್ಮ ಮೈಮೇಲೆ ದೇವರು ಬಂದಂತೆ ವಿಜೃಂಭಿಸುವ ಮಂಗಳಮುಖಿಯರು ಬಂದಂತಹ ಭಕ್ತರಿಗೆ ಆಶಿರ್ವದಿಸುತ್ತಾರೆ. ಇಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಸಿದ್ದಿಸುತ್ತದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

    ಆನೇಕಲ್: ಒಂದು ಕಡೆ ಹಳದಿ ಸೀರೆಯುಟ್ಟು, ಜಡೆ ತುಂಬ ಮಲ್ಲಿಗೆ ತೊಟ್ಟು ತಮಟೆ ವಾದ್ಯಗಳ ನಡುವೆ ಕುಣಿದು ಕುಪ್ಪಳಿಸುತ್ತಿರುವ ಮಂಗಳಮುಖಿಯರು (Transgenders) . ಮತ್ತೊಂದು ಕಡೆ ಭಕ್ತಿ ಭಾವದಿಂದ ತೇರಿಗೆ ಹೂ, ಅಪ್ಪು ಪೋಟೋ ಹಿಡಿದು, ಬಾಳೆ ಹಣ್ಣಿನ ಮೇಲೆ ಅಪ್ಪು ಅಮರ ಮತ್ತೆ ಹುಟ್ಟಿ ಬನ್ನಿ ಎಸೆದು ಭಗವಂತನಿಗೆ ಬೇಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದದ್ದು ಬೆಂಗಳೂರು ಹೊರವಲಯ ಬನ್ನೇರುಘಟ್ಟ (Bannerghatta) ಚಂಪಕಧಾಮಸ್ವಾಮಿ  (Champakadhama Temple) ರಥೋತ್ಸವದಲ್ಲಿ.


    ಸುಮಾರು 40 ಅಡಿ ಎತ್ತರದ ತೇರಿನಲ್ಲಿ ಚಂಪಕಧಾಮಸ್ವಾಮಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ರಾಜ ಬೀದಿಯಲ್ಲಿ ಭಕ್ತರು ತೇರನ್ನು ಎಳೆದ ಸಾವಿರಾರು ಭಕ್ತರು ಗರುಡಗಂಬದ ಬಳಿ ನಿಲ್ಲಿಸುವ ಮೂಲಕ ಹರಕೆ ತೀರಿಸಿ ಪುನೀತರಾಗಿದ್ದಾರೆ.


    ಮಲ್ಲಿಗೆ ಹೂವಿನ ಕರಗ ಹೊತ್ತರು!
    ಅಂದಹಾಗೆ ಬೆಗಳಮ್ಮ ಜಾತ್ರೆಗೆ ಆಗಮಿಸುವ ಮಂಗಳಮುಖಿಯರು ಮಲ್ಲಿಗೆ ಹೂವಿನ ಕರಗ ಹೊತ್ತು ಬನ್ನೇರುಘಟ್ಟದಿಂದ ಬೇಗಿಹಳ್ಳಿ ಬೇಗಳಮ್ಮ ದೇವಾಲಯದವರೆಗೆ ವಾದ್ಯಗಳ ಜೊತೆಗೆ ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗುತ್ತಾರೆ.


    ಮಂಗಳಮುಖಿಯರಿಂದಲೇ ಆಶೀರ್ವಾದ!
    ಪ್ಲೇಗ್ ಮಾರಮ್ಮ ಮೈಮೇಲೆ ದೇವರು ಬಂದಂತೆ ವಿಜೃಂಭಿಸುವ ಮಂಗಳಮುಖಿಯರು ಭಕ್ತರಿಗೆ ಆಶೀರ್ವದಿಸುತ್ತಾರೆ. ಇಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಸಿದ್ದಿಸುತ್ತದೆ. ಹಾಗಾಗಿ ಹೊರರಾಜ್ಯಗಳು ಸೇರಿದಂತೆ ಬೆಂಗಳೂರಿನಿಂದ ಮಂಗಳಮುಖಿಯರು ಇಲ್ಲಿಗೆ ಆಗಮಿಸುತ್ತಾರೆ.




    ಇನ್ನು ಚಂಪಕಧಾಮಸ್ವಾಮಿ ಜಾತ್ರೆಯಂದು ಬೆಂಗಳೂರು ಸೇರಿದಂತೆ ತಮಿಳುನಾಡಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅದ್ರಲ್ಲೂ ಮಂಗಳಮುಖಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಬ್ಬದ ರೀತಿಯಲ್ಲಿ ಜಾತ್ರೆಯನ್ನು ಆಚರಿಸುತ್ತಾರೆ. ಕೋಳಿ, ಕುರಿಯನ್ನು ಬೇಗಳನಮ್ಮನಿಗೆ ಬಲಿಕೊಟ್ಟು ಅಡಿಗೆ ಮಾಡಿ ಬಡಿಸಿ ತಾವು ತಿಂದು ಸಂಭ್ರಮಿಸುತ್ತಾರೆ. ಜೊತೆಗೆ ಅನಾದಿ ಕಾಲದಿಂದಲು ಅರವಂಟಿಗೆ ಸಹ ಮಾಡಿ ದಣಿದು ಬಂದ ಭಕ್ತರಿಗೆ ಪಾನಕ ಮಜ್ಜಿಗೆ, ಕೊಸಂಬರಿ ನೀಡಲಾಗುತ್ತದೆ.  ಅನ್ನದಾಸೋಹ ಸಹ ನಡೆಸಲಾಗುತ್ತದೆ.


    ಇದನ್ನೂ ಓದಿ: Chinese Food In Bengaluru: ಗಾರ್ಡನ್ ಸಿಟಿಯಲ್ಲಿ ಕಲರ್​ಫುಲ್ ಚೈನೀಸ್ ಫುಡ್ ಧಮಾಕಾ! ಆಹಾ, ಬಾಯಲ್ಲಿ ನೀರೂರುತ್ತೆ


    ಈ ಜಾತ್ರೆಯಲ್ಲಿ ಬಂದು ದೇವಿಯಲ್ಲಿ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ಪ್ರತೀತಿ ಇದ್ದು, ಇಂದಿಗೂ ಭಕ್ತರು ಹರಕೆ ತೀರಿಸಿ ಹೋಗುತ್ತಾರೆ ಎನ್ನುತ್ತಾರೆ ಭಕ್ತರು.


    ಇದನ್ನೂ ಓದಿ: Bengaluru Mysuru Expressway: ದಶಪಥ ಹೆದ್ದಾರಿಯಲ್ಲಿ ವನ್ಯಜೀವಿಗಳಿಗೆ ವಿಶೇಷ ಸೌಲಭ್ಯ


    ಒಟ್ಟಿನಲ್ಲಿ ಜಾತಿ ಭೇದ ಮರೆತು ಲಕ್ಷಾಂತರ ಮಂದಿ ಭಕ್ತರು ಚಂಪಕಧಾಮಸ್ವಾಮಿ ಮತ್ತು ಬೇಗಳಮ್ಮ ಜಾತ್ರೆಯಲ್ಲಿ ಭಾಗವಹಿಸಿದರು. ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬನ್ನೇರುಘಟ್ಟ ಪೊಲೀಸರು ಬಿಗಿ ಪೊಲೀಸ್ ಭದ್ರತೆ ಒದಗಿಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಂಗವಾಗಿ ನೆರವೇರಿತು.


    ವರದಿ: ಆದೂರು ಚಂದ್ರು, ನ್ಯೂಸ್ 18 ಆನೇಕಲ್

    Published by:ಗುರುಗಣೇಶ ಡಬ್ಗುಳಿ
    First published: