• Home
  • »
  • News
  • »
  • bengaluru-urban
  • »
  • Crime News: ಅಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ; ಇಲ್ಲಿ ಬಿದ್ದಿತ್ತು ಅಪರಿಚಿತನ ಡೆಡ್ ಬಾಡಿ!

Crime News: ಅಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ; ಇಲ್ಲಿ ಬಿದ್ದಿತ್ತು ಅಪರಿಚಿತನ ಡೆಡ್ ಬಾಡಿ!

ಮೃತ ವನಜಾಕ್ಷಿ

ಮೃತ ವನಜಾಕ್ಷಿ

ವನಜಾಕ್ಷಿ ಮೂರು ದಿನಗಳ ಹಿಂದೆಯೆ ಕೊಲೆಯಾಗಿರ ಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಮೂರು ದಿನಗಳ ಬಳಿಕ ಈಕೆ ಮನೆಯಿಂದ ಕೆಟ್ಟ ವಾಸನೆ ಬರತೊಡಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • Share this:

ಬೆಂಗಳೂರು: ರಾಜ್ಯ ರಾಜಧಾನಿ (State Capital) ಬೆಂಗಳೂರಲ್ಲಿ (Bengaluru) ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ (Women Dead Body) ಪತ್ತೆಯಾಗಿದೆ. ಕಾಮಾಕ್ಷಿಪಾಳ್ಯ (Kamakshipalya) ಪೊಲೀಸ್ ಠಾಣಾ ವ್ಯಾಪ್ತಿಯ (Police Station Limit) ಕಾವೇರಿಪುರದಲ್ಲಿ (Kaveripura) ವಾಸವಿದ್ದ 34 ವರ್ಷ ವಯಸ್ಸಿನ ಮಹಿಳೆ ವನಜಾಕ್ಷಿ ಎಂಬುವರು ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ.  ಮತ್ತೊಂದೆಡೆ ತಡರಾತ್ರಿ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಂದು (Murder) ಹಾಕಿದ್ದಾರೆ. ಇದೀಗ ಈ ಎರಡೂ ಘಟನೆಗಳಿಂದ ರಾಜಧಾನಿ ಬೆಚ್ಚಿ ಬಿದ್ದಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು (Police), ಈ ಎರಡೂ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.  


ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ


ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದಲ್ಲಿ ವಾಸವಿದ್ದ 34 ವರ್ಷ ವಯಸ್ಸಿನ ಮಹಿಳೆ ವನಜಾಕ್ಷಿ ಎಂಬುವರು ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವನಜಾಕ್ಷಿ ಖಾಸಗಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಯ ಪತಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ.


ಕಳೆದ 3 ದಿನಗಳ ಹಿಂದೆ ಕೊಲೆಯಾಗಿರುವ ಶಂಕೆ


ವನಜಾಕ್ಷಿ ಮೂರು ದಿನಗಳ ಹಿಂದೆಯೆ ಕೊಲೆಯಾಗಿರ ಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಮೂರು ದಿನಗಳ ಬಳಿಕ ಈಕೆ ಮನೆಯಿಂದ ಕೆಟ್ಟ ವಾಸನೆ ಬರತೊಡಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು, ಪರಿಶೀಲನೆ ಮಾಡಿದಾಗ ವನಜಾಕ್ಷಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಇದನ್ನೂ ಓದಿ: Mangaluru: ಹಿಜಾಬ್ ಗಲಾಟೆ ವೇಳೆ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದವ ಅರೆಸ್ಟ್! ಫೇಕ್‌ ಅಕೌಂಟ್ ಹಿಂದಿರೋದು ಇದೇ ಆರೋಪಿ


ಹೆಂಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆದನಾ ಪತಿ?


ಇನ್ನು ಮೂರು ದಿನದಿಂದ ಆಕೆಯ ಪತಿಯೂ ಕಾಣಿಸುತ್ತಿಲ್ಲ ಎನ್ನಲಾಗಿದೆ. ಆತನೆ ಕೊಲೆ ಮಾಡಿ, ಸದ್ಯ ಮನೆ ಬಿಟ್ಟು ಎಸ್ಕೇಪ್‌ ಆಗಿದ್ದಾನೆ ಎನ್ನಲಾಗುತ್ತಿದೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ತನಿಖೆ ಶುರು ಮಾಡಿದ್ದಾರೆ.


ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿ ಕೊಲೆ


ಬೆಂಗಳೂರಿನಲ್ಲಿ ಮತ್ತೊಂದೆಡೆ ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದಾರೆ. ಅಪರಿಚಿತ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ, ಆತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ದಾಸರಹಳ್ಳಿ ಮುಖ್ಯ ರಸ್ತೆಯ ವೀರೇಶ್ ಥಿಯೇಟರ್ ಬಳಿ ತಡರಾತ್ರಿ ಕೊಲೆ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿದ ಗೋವಿಂದರಾಜನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೀಗ ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Kidnap: ಅಪ್ರಾಪ್ತೆಯನ್ನು ಅಪಹರಿಸಿ ಮದುವೆ, ಬೆಂಗಳೂರಿನ ಮನೆಯಲ್ಲಿಟ್ಟುಕೊಂಡು ದೈಹಿಕ ಸಂಪರ್ಕ ಬೆಳೆಸಿದವ ಅರೆಸ್ಟ್


ಹಿಜಾಬ್ ಗಲಾಟೆ ವೇಳೆ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದವ ಅರೆಸ್ಟ್


ಹಿಜಾಬ್ ವಿವಾದದ ಗಲಾಟೆಯಲ್ಲಿ ಮುಸ್ಲಿಂ ಘಟನೆಗಳ ಕೆಂಗಣ್ಣಿಗೆ ಗುರಿಯಾದ ಮಂಗಳೂರಿನ ಕಾಲೇಜಿನ ಎಬಿವಿಪಿ ವಿದ್ಯಾರ್ಥಿನಿಯನ್ನು ಶಿವಮೊಗ್ಗದ ಹರ್ಷ ಮಾದರಿಯಲ್ಲೇ ಹತ್ಯೆ  ಮಾಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಯುವಕನನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಹೊಕ್ಕಿಲ ಮನೆ ನಿವಾಸಿ 20ರ ಹರೆಯದ ಮಹಮ್ಮದ್ ಅಝ್ಮಲ್ ಬಂಧಿತ ಆರೋಪಿಯಾಗಿದ್ದಾನೆ. ಈತ ಗಲ್ಫ್ (Gulf) ರಾಷ್ಟ್ರದಿಂದ ಬಂದ ತನ್ನ  ಸಂಬಂಧಿಕನ ಮೊಬೈಲ್ ಸಿಮ್ (Mobile Sim) ಬಳಸಿ ಕೊಲೆ ಬೆದರಿಕೆ ಹಾಕಿರೋದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು