• Home
 • »
 • News
 • »
 • bengaluru-urban
 • »
 • Wodeyar Express Timings: ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾಯ್ತು; ಟೈಮಿಂಗೂ ಚೇಂಜ್ ಆಯ್ತಾ?

Wodeyar Express Timings: ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾಯ್ತು; ಟೈಮಿಂಗೂ ಚೇಂಜ್ ಆಯ್ತಾ?

ಒಡೆಯರ್ ಎಕ್ಸ್​ಪ್ರೆಸ್ (ಸಾಂದರ್ಭಿಕ ಚಿತ್ರ)

ಒಡೆಯರ್ ಎಕ್ಸ್​ಪ್ರೆಸ್ (ಸಾಂದರ್ಭಿಕ ಚಿತ್ರ)

Wodeyar Express Timings: ಬೆಂಗಳೂರಿನಿಂದ ಎಷ್ಟು ಗಂಟೆಗೆ ಒಡೆಯರ್ ಎಕ್ಸ್​ಪ್ರೆಸ್ ರೈಲು ಹೊರಡಲಿದೆ? ಎಷ್ಟು ಗಂಟೆಗೆ ಮೈಸೂರನ್ನು ತಲುಪಲಿದೆ? ಯಾವೆಲ್ಲ ಊರುಗಳಲ್ಲಿ ಈ ರೈಲು ನಿಲ್ಲುತ್ತೆ ಎಂಬ ಎಲ್ಲ ವಿವರ ಇಲ್ಲಿದೆ.

 • Share this:

  ಮೈಸೂರು-ಬೆಂಗಳೂರು ನಡುವಿನ ಟಿಪ್ಪು ಎಕ್ಸ್​ಪ್ರೆಸ್​ (Tipu Express Railway) ರೈಲಿನ ಹೆಸರನ್ನು ಬದಲಾವಣೆ ಮಾಡಲಾಗಿದೆ. ಒಡೆಯರ್​ ಎಕ್ಸ್​ಪ್ರೆಸ್​ (Wodeyar Express) ಎಂದು ಮರುನಾಮಕರಣ ಮಾಡಲಾಗಿದೆ. ಹಾಗಾದರೆ ಹಳೆಯ ಟಿಪ್ಪು ಎಕ್ಸ್​ಪ್ರೆಸ್ ಅಥವಾ ಈಗಿನ ಒಡೆಯರ್ ಎಕ್ಸ್​ಪ್ರೆಸ್ ರೈಲಿನ ಪ್ರಯಾಣದ ಸಮಯವೇನು? ಬೆಂಗಳೂರಿನಿಂದ ಎಷ್ಟು ಗಂಟೆಗೆ ಒಡೆಯರ್ ಎಕ್ಸ್​ಪ್ರೆಸ್ ರೈಲು (Wodeyar Express Timings) ಹೊರಡಲಿದೆ? ಎಷ್ಟು ಗಂಟೆಗೆ ಮೈಸೂರನ್ನು (Bengaluru To Mysuru) ತಲುಪಲಿದೆ? ಯಾವೆಲ್ಲ ಊರುಗಳಲ್ಲಿ ಈ ರೈಲು ನಿಲ್ಲುತ್ತೆ ಎಂಬ ಎಲ್ಲ ವಿವರ ಇಲ್ಲಿದೆ.


  ಬೆಂಗಳೂರು ಮತ್ತು ಮೈಸೂರು ನಡುವೆ ಚಲಿಸುವ ಸಂಖ್ಯೆ 12614 ರೈಲ್ವೇಯೇ ಸದ್ಯದ ಒಡೆಯರ್ ಎಕ್ಸ್​ಪ್ರೆಸ್. ಬೆಂಗಳೂರು ಮತ್ತು ಮೈಸೂರು ನಗರಗಳ ನಡುವಿನ ಅಂತರವಾದ 139 ಕಿಮೀಯನ್ನು ಕ್ರಮಿಸುವ ಈ ರೈಲು ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುತ್ತದೆ.


  ಮೈಸೂರಿಂದ ಎಷ್ಟೊತ್ತಿಗೆ ಹೊರಡುತ್ತೆ?
  ಮೈಸೂರು ರೈಲು ನಿಲ್ದಾಣದಲ್ಲಿ 11:15 ಕ್ಕೆ ಹೊರಡುವ ಒಡೆಯರ್ ಎಕ್ಸ್​ಪ್ರೆಸ್  ಮಧ್ಯಾಹ್ನ 1:45 ಕ್ಕೆ ಬೆಂಗಳೂರು ರೈಲು ನಿಲ್ದಾಣವನ್ನು ತಲುಪುತ್ತದೆ.


  ಬೆಂಗಳೂರಿನಿಂದ ಹೊರಡೋದು ಎಷ್ಟು ಗಂಟೆಗೆ?
  ಒಡೆಯರ್ ಎಕ್ಸ್​ಪ್ರೆಸ್ ರೈಲು ಬೆಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಡುತ್ತದೆ. ಬೆಂಗಳೂರು ಸಿಟಿ ಜಂಕ್ಷನ್​ನಿಂದ ಹೊರಟು ಕೆಂಗೇರಿಗೆ 3:34ಕ್ಕೆ ತಲುಪುತ್ತದೆ. ನಂತರ ಒಡೆಯರ್ ಎಕ್ಸ್​ಪ್ರೆಸ್ ರೈಲು 4:24ಕ್ಕೆ ಮಂಡ್ಯ ರೈಲು ನಿಲ್ದಾಣವನ್ನು ತಲುಪುತ್ತದೆ. ಅದೇ ದಿನ ಸಂಜೆ 5:30 ಕ್ಕೆ ಮೈಸೂರು ತಲುಪುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ಒಡೆಯರ್ ಎಕ್ಸ್​ಪ್ರೆಸ್ ಅಥವಾ ಹಳೆಯ ಟಿಪ್ಪು ಎಕ್ಸ್​ಪ್ರೆಸ್ 2 ಗಂಟೆ 30 ನಿಮಿಷಗಳಲ್ಲಿ ತಲುಪುತ್ತದೆ.


  ಯಾವ ದಿನಗಳಂದು ಸಂಚಾರ?
  ಒಂದು ವಾರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ, ಭಾನುವಾರದಂದು ಕಾರ್ಯನಿರ್ವಹಿಸುತ್ತದೆ.


  ಇದನ್ನೂ ಓದಿ: Tippu Express: ಅವರೆಲ್ಲ ಮೌನವಾಗಿರೋದು ಯಾಕೆ? ರೈಲಿನ ಹೆಸರು ಮರುನಾಮಕರಣಕ್ಕೆ ಟಿಪ್ಪು ವಂಶಸ್ಥರ ಪ್ರತಿಕ್ರಿಯೆ


  120 ದಿನಗಳ ಮೊದಲೇ ಬುಕಿಂಗ್ ಮಾಡಬಹುದು!
  ನೀವು ಈ ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಭಾರತೀಯ ರೈಲ್ವೇ ವೆಬ್‌ಸೈಟ್ ಮೂಲಕ ಆರಾಮವಾಗಿ ಬುಕ್ ಮಾಡಬಹುದು. ಟಿಕೆಟ್ ಬುಕಿಂಗ್ 120 ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ, ಆದ್ದರಿಂದ ಆ ಸಮಯದಲ್ಲಿ ಬುಕ್ ಮಾಡುವುದು ಉತ್ತಮ.


  ಇದನ್ನೂ ಓದಿ: Tippu Express: ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣ; ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ


  ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ
  ಸದ್ಯ ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರಲ್ಲಿ  ಒಡೆಯರ್ ಎಕ್ಸ್​ಪ್ರೆಸ್ ಎಂದು ಬದಲಾವಣೆ ಮಾಡಲಾಗಿದೆ. ಆದರೆ ಈ ರೈಲಿನ ಪ್ರಯಾಣದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

  Published by:ಗುರುಗಣೇಶ ಡಬ್ಗುಳಿ
  First published: