• Home
  • »
  • News
  • »
  • bengaluru-urban
  • »
  • Bannerghatta Tiger Video: ಬನ್ನೇರುಘಟ್ಟದಲ್ಲಿ ಈ ಹುಲಿಮರಿ ಬದುಕಿದ್ದೇ ಪವಾಡ!

Bannerghatta Tiger Video: ಬನ್ನೇರುಘಟ್ಟದಲ್ಲಿ ಈ ಹುಲಿಮರಿ ಬದುಕಿದ್ದೇ ಪವಾಡ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

Bengaluru News: ಕೋಮಾ ಸ್ಥಿತಿಯಲ್ಲಿದ್ದ ಆ ಹುಲಿಮರಿಯನ್ನು ತಾಯಿಹುಲಿ ತ್ಯಜಿಸಿತ್ತು. ಇದನ್ನ ಗಮನಿಸಿದ ಉದ್ಯಾನವನದ ವೈದ್ಯ ಉಮಾಶಂಕರ್ ಚಿಕಿತ್ಸೆ ನೀಡಲು ಮುಂದಾದ್ರು.

  • Share this:

    ಬೆಂಗಳೂರು: ಮುದ್ದಾದ ಹುಲಿ-ಚಿರತೆ ಮರಿಗಳು! ಪುಟ್ಟ ಬಾಲ ಅತ್ತಿತ್ತ ಅಲ್ಲಾಡಿಸ್ತಾ ಅತ್ತಿತ್ತ ಓಡಾಡ್ತಿದ್ರೆ ಮನಸಲ್ಲಿ ಆಹ್ಲಾದ ಚಿಮ್ಮುತ್ತೆ. ಇಷ್ಟು ಚಂದದ ಮರಿಗಳು ಸಾವಿನ ದವಡೆಯತ್ತ ಮುಖ ಮಾಡ್ತಿದ್ದವು ಅಂತಂದ್ರೆ ಎಂಥವ್ರರಿಗೂ ಬೇಸರವಾಗುತ್ತೆ, ಆದ್ರೆ ಅದೃಷ್ಟವಷಾತ್ ವೈದ್ಯರ ಸತತ ಪ್ರಯತ್ನದಿಂದ ಬೇಸರ ಪಡುವ ಪರಿಸ್ಥಿತಿ ಬಂದಿಲ್ಲ! ಈ ಹುಲಿ-ಚಿರತೆ ಮರಿಗಳು ತಮ್ಮೆಲ್ಲ ಆರೋಗ್ಯ ಸಮಸ್ಯೆಯಿಂದ ದೂರವಾಗಿ ಬೆಂಗಳೂರಿನ (Bengaluru News) ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bengaluru Bannerghatta Biological Park)  ಪೊಗದಸ್ತಾಗಿ ಬೆಳೆಯೋಕೆ ಸಜ್ಜಾಗಿವೆ. ಖುಷಿಖುಷಿಯಿಂದ ಅತ್ತಿತ್ತ ಹೆಜ್ಜೆಹಾಕ್ತಿವೆ.


    ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದ ವರ್ಷ ಅನುಷ್ಕಾ ಮತ್ತು ಮಿಥುನ್ ಎಂಬ ಹುಲಿ ದಂಪತಿಗೆ ಹೆಣ್ಣುಮರಿಯೊಂದು ಜನಿಸಿತ್ತು. ಕೋಮಾ ಸ್ಥಿತಿಯಲ್ಲಿದ್ದ ಆ ಹುಲಿಮರಿಯನ್ನು ತಾಯಿಹುಲಿ ತ್ಯಜಿಸಿತ್ತು. ಇದನ್ನ ಗಮನಿಸಿದ ಉದ್ಯಾನವನದ ವೈದ್ಯ ಉಮಾಶಂಕರ್ ಚಿಕಿತ್ಸೆ ನೀಡಲು ಮುಂದಾದ್ರು.


    ಹುಲಿಮರಿಗೆ ವಿವಿಧ ಆರೋಗ್ಯ ಸಮಸ್ಯೆ
    ತಪಾಸಣೆ ವೇಳೆ ಹುಲಿಮರಿಯ ಹೊಟ್ಟೆ ಕೆಳಭಾಗದಲ್ಲಿ ನೀರು ತುಂಬಿದ್ದು ತಿಳೀತು. ಸ್ಕ್ಯಾನ್ ವೇಳೆ ಹುಲಿ ಮರಿ ಅಪರೂಪದ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ ಇರುವುದು ಕಂಡುಬಂತು. ಕಣ್ಣಿಗೆ ಪೊರೆ ಕಟ್ಟಿ ದೃಷ್ಟಿದೋಷವೂ ಉಂಟಾಗಿತ್ತು. ಆದ್ರೂ ಈ ಹುಲಿಮರಿಯನ್ನ ಬದುಕಿಸಲೇಬೇಕೆಂಬ ಛಲ ತೊಟ್ಟ ವೈದ್ಯರು ಪಣತೊಟ್ಟು ಚಿಕಿತ್ಸೆ ನೀಡಿ ಹುಲಿಮರಿಯನ್ನ ಬದುಕಿಸೇಬಿಟ್ಟಿದ್ದಾರೆ.


    ಇದನ್ನೂ ಓದಿ: Bengaluru Deepavali: ಝಗಮಗಿಸುತ್ತಿದೆ ಬೆಂಗಳೂರು! ಇದು ದೀಪಾವಳಿ ಹಬ್ಬದ ಸಂಭ್ರಮ!


    ಇನ್ನೊಂದು ಚಿರತೆ ಮರಿ ಕಥೆ ಕೇಳಿ!
    ಇನ್ನು ಚಿರತೆ ಮರಿ ಕಥೆನ ಕೇಳೋಕೆ ಹೊರಟರೆ ಕಣ್ಣಿಂದ ನೀರು ಜಿನುಗುತ್ತೆ. ಮೈಸೂರಿನ ಅರಣ್ಯದ ಬಳಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಚಿರತೆಮರಿಯನ್ನೂ ಮುತುವರ್ಜಿ ವಹಿಸಿ ಬದುಕಿಸಲಾಗಿತ್ತು. ಈ ಚಿರತೆ ಮರಿ ಅಷ್ಟೊಂದು ಮುಗ್ದವಾಗಿತ್ತು.


    ಇದನ್ನೂ ಓದಿ: Uttara Kannada: ನಡೆದೇಹೋಯ್ತು ಭಯಂಕರ ದೈತ್ಯ ನರಕಾಸುರನ ವಧೆ!


    ಅಂದ್ರೆ, ಮಾಂಸಾಹಾರ ತಿನ್ನೋಕೂ ಗೊತ್ತಿರ್ಲಿಲ್ವಂತೆ. ಆದ್ರೆ ಈಗ ಚಿಕನ್ ತಿನ್ನುವಷ್ಟರ ಮಟ್ಟಿಗೆ ಮರಿ ಚಿರತೆ ಗುಣಮುಖವಾಗಿದೆ ಅಂತ ವೈದ್ಯತು ತಿಳಿಸಿದ್ರು. ಒಟ್ನಲ್ಲಿ ಹುಲಿ-ಚಿರತೆ ಮರಿ ರಕ್ಷಿಸಿದ ಈ ಬನ್ನೇರುಘಟ್ಟ ಉದ್ಯಾನವನದ ವೈದ್ಯರಿಗೆ ಶ್ಲಾಘನೆ ಹೇಳೋಣ ಅಲ್ವಾ..

    Published by:ಗುರುಗಣೇಶ ಡಬ್ಗುಳಿ
    First published: