Bengaluru: ಈ ಪಾರ್ಕಿನಲ್ಲಿ ರನ್ನಿಂಗ್, ಜಾಗಿಂಗ್ ಮಾಡಂಗಿಲ್ಲ! ಸೂಚನಾ ಫಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಸಾಮಾನ್ಯವಾಗಿ ಬೆಂಗಳೂರಿನಲ್ಲಿರುವ ಪಾರ್ಕ್ ಗಳಲ್ಲಿ ಕೆಲವು ನಿರ್ಬಂಧಗಳನ್ನು ಮಾಡಲಾಗಿರುತ್ತವೆ. ನಾಯಿಗಳನ್ನು ಸಾರ್ವಜನಿಕರು ಉದ್ಯಾನವನದ ಒಳಗಡೆ ತರುವಂತಿಲ್ಲ, ಇಲ್ಲಿ ಬೆಳೆದಿರುವ ಹೂಗಳನ್ನು ಕೀಳುವಂತಿಲ್ಲ, ಉಗಿಯುವಂತಿಲ್ಲ , ಇಲ್ಲಿರುವ ಆಸ್ತಿ-ಪಾಸ್ತಿಗಳನ್ನು ನಾಶಮಾಡುವಂತಿಲ್ಲ, ಹುಟ್ಟಿದ ಹಬ್ಬಗಳನ್ನು ಆಚರಿಸುವಂತಿಲ್ಲ, ಫೋಟೋಗ್ರಫಿ ಮಾಡುವಂತಿಲ್ಲ ಹೀಗೆ ಹಲವು ಸೂಚನೆ ಮತ್ತು ನಿರ್ಬಂಧಗಳನ್ನು ಮಾಡಿರುತ್ತಾರೆ. ಆದರೆ ಇದೇ ಬೆಂಗಳೂರಿನಲ್ಲಿನ ಪಾರ್ಕ್ ಒಂದರಲ್ಲಿ ನೀಡಿರುವ ವಿಚಿತ್ರ ಸೂಚನೆಯ ಫಲಕದ ಚಿತ್ರಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ನೆಟ್ಟಿಗರ ಟೀಕೆ ಹಾಗು ತಮಾಷೆಯ ಕಾಮೆಂಟ್ಗಳಿಗೆ ಗುರಿಯಾಗಿದೆ.

ಬೆಂಗಳೂರಿನ ಪಾರ್ಕ್

ಬೆಂಗಳೂರಿನ ಪಾರ್ಕ್

  • Share this:
ಬೆಂಗಳೂರಿನ ಪಾರ್ಕ್ (Park) ಒಂದರಲ್ಲಿ ಹಾಕಿರುವ “ ಇಲ್ಲಿ ಜಾಗಿಂಗ್, ರನ್ನಿಂಗ್ ಮಾಡಬಾರದು” ಎಂಬ ಸೂಚನೆ ಇರುವ ಫಲಕ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕತ್ ವೈರಲ್ ಆಗುತ್ತಿದೆ. ಅದಕ್ಕೆ ನೆಟ್ಟಿಗರು ಹಲವಾರು ರೀತಿಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ದೂದ್ ಸಾಗರ್ ಫಾಲ್ಸ್ ಮುಂದೆ ಯುವಕರು ಮಾಡಿದ್ದ ನಾಗಿಣಿ ಡ್ಯಾನ್ಸ್ ಹೆಚ್ಚು ಸುದ್ಧಿ ಮಾಡಿತ್ತು. ವ್ಯಕ್ತಿಯೊಬ್ಬರು ನಾವು ಅದೇ ರೀತಿ ಪಾರ್ಕ್ ಅಲ್ಲಿ ನಾಗಿಣಿ ಡ್ಯಾನ್ಸ್ ಮಾಡಬಹುದಾ ಎಂದು ತಮಾಷೆಯಾಗೆ ಕಾಮೆಂಟ್ಸ್ ಹಾಕಿದ್ದಾರೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿರುವ (Bengaluru) ಪಾರ್ಕ್ ಗಳಲ್ಲಿ ಕೆಲವು ನಿರ್ಬಂಧಗಳನ್ನು ಮಾಡಲಾಗಿರುತ್ತವೆ. ನಾಯಿಗಳನ್ನು ಸಾರ್ವಜನಿಕರು ಉದ್ಯಾನವನದ ಒಳಗಡೆ ತರುವಂತಿಲ್ಲ, ಇಲ್ಲಿ ಬೆಳೆದಿರುವ ಹೂಗಳನ್ನು ಕೀಳುವಂತಿಲ್ಲ, ಉಗಿಯುವಂತಿಲ್ಲ ಹೀಗೆ ಹಲವು ಸೂಚನೆ ಮತ್ತು ನಿರ್ಬಂಧಗಳನ್ನು ಮಾಡಿರುತ್ತಾರೆ.

ಇದೇ ಬೆಂಗಳೂರಿನಲ್ಲಿನ ಪಾರ್ಕ್ ಒಂದರಲ್ಲಿ ನೀಡಿರುವ ವಿಚಿತ್ರ ಸೂಚನೆಯ ಫಲಕದ ಚಿತ್ರಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ನೆಟ್ಟಿಗರ ಟೀಕೆ ಹಾಗು ತಮಾಷೆಯ ಕಾಮೆಂಟ್ಗಳಿಗೆ ಗುರಿಯಾಗಿದೆ.

ಪಾರ್ಕಿನಲ್ಲಿ ರನ್ನಿಂಗ್, ಜಾಗಿಂಗ್ ಮಾಡುವಂತಿಲ್ಲ
ದೊಡ್ಡ ದೊಡ್ಡ ನಗರಗಳಲ್ಲಿ ಪಾರ್ಕ್ ಗಳನ್ನು ನಿರ್ಮಿಸುವುದೇ ಜನರ ಒಳಿತಿಗಾಗಿ. ಎಲ್ಲಾ ಪಾರ್ಕ್ ಗಳು ರನ್ನಿಂಗ್, ಜಾಗಿಂಗ್, ವಾಕಿಂಗ್ ಗೆ ಮೊದಲ ಆದ್ಯತೆ ನೀಡುತ್ತವೆ. ಆದರೆ ಇಲ್ಲೊಂದು ಪಾರ್ಕ್ ಗೆ ಹಾಕಿರುವ ಸೂಚನ ಫಲಕ ಅಚ್ಚರಿಯುಂಟು ಮಾಡಿದೆ. ಏಕೆಂದರೆ ಈ ರೀತಿಯಾದ ಸೂಚನಾ ಫಲಕವನ್ನು ಇಲ್ಲಿಯವರೆಗೂ ಯಾವ ಉದ್ಯಾನವನದ ಮುಂದೆಯು ಸಹ ಹಾಕಿರಲಿಲ್ಲ ಆದ ಕಾರಣ ಅದನ್ನು ಗಮನಿಸಿದ ವ್ಯಕ್ತಿಯು ಅದರ ಚಿತ್ರವನ್ನು ಸೆರೆಹಿಡಿದು ಅದನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ಫೋಟೋವನ್ನು ಇತರೆ ನೆಟ್ಟಿಗರೂ ಸಹ ಹಂಚಿಕೊಳ್ಳುವ ಮೂಲಕ ವೈರಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ:  BBMP: ಬೆಂಗಳೂರಲ್ಲಿ ವಾರ್ಡ್​ಗಳ ಸಂಖ್ಯೆ 243ಕ್ಕೆ ಏರಿಕೆ; ವಾರ್ಡ್ ನಂ.​ 55ಕ್ಕೆ ಪುನೀತ್​ ರಾಜ್​ಕುಮಾರ್ ಹೆಸರು

ಸಾಮಾಜಿಕ ಜಾಲತಾಣ ಒಂದರಲ್ಲಿ ಹಂಚಿಕೆಯಾಗಿರುವ , ಬೆಂಗಳೂರಿನ ಉದ್ಯಾನವದ ಮುಂದೆ ಹಾಕಿರುವ ಬೋರ್ಡ್ನ ಸೂಚನೆ ಹೀಗಿದೆ,” ಇಲ್ಲಿ ಜನರು ಓಡುವಂತಿಲ್ಲ, ಜಾಗಿಂಗ್ ಮಾಡುವಂತಿಲ್ಲ ಹಾಗೂ ಆಂಟಿ ಕ್ಲಾಕ್ ವೈಸ್ ರೀತಿಯಲ್ಲಿ ನಡೆದಾಡುವಂತಿಲ್ಲ” ಈ ಸೂಚನೆಯನ್ನು ಬಿಬಿಎಂಪಿ ಹೊರಡಿಸಿರುತ್ತದೆ ಎಂದು ಹಾಕಲಾಗಿದೆ.

ಬೆಂಗಳೂರಿನಲ್ಲಿ ಈ ಮಂಡಳಿಯು ಅಲ್ಲಿಯ ಜನರ ಎಲ್ಲಾ ಮೂಲಭೂತ ಸವಲತ್ತುಗಳು ಹಾಗೂ ನಾಗರೀಕ ಸೌಕರ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಇಲ್ಲಿ ಬಿಬಿಎಂಪಿ ಅವರು ಹಾಕಿರುವ ಸೂಚನೆಯ ಬೋರ್ಡ್ ಅನ್ನು ವ್ಯಕ್ತಿ ಒಬ್ಬರು ತಮ್ಮ ಮೊಬೈಲ್ ಅಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಹಾಗೂ ಆ ಚಿತ್ರಣದ ಕೆಳಗೆ “ ಇಂದು ಪಾರ್ಕ್ ಅಲ್ಲಿ ನಾನು ಕಂಡ ಸೂಚನೆ” ಎಂದು ಬರೆದು ಕೊಂಡಿದ್ದಾರೆ.

ಪೋಸ್ಟ್ ನೋಡಿ ನೆಟ್ಟಿಗರಿಂದ ಹಾಸ್ಯಾಸ್ಪದ ಕಾಮೆಂಟ್ ಗಳು ಹೀಗಿತ್ತು
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಹಂಚಿಕೆಯಾದಾಗಿಂದಲೂ ಈ ಚಿತ್ರಣವು ಭಾರಿ ಸುದ್ದಿಯಾಗುತ್ತಿದೆ. ಕಾಮೆಂಟ್ ಅಲ್ಲಿ ನೆಟ್ಟಿಗರು ಹಲವಾರು ಹಾಸ್ಯಾಸ್ಪದವಾದ ಕಾಮೆಂಟ್ ಗಳನ್ನು ಮಾಡುವ ಮೂಲಕ ಈ ಸೂಚನೆ ಇರುವ ಚಿತ್ರಣದಿಂದ ಮನರಂಜನೆ ತೆಗೆದು ಕೊಳ್ಳುತ್ತಿದ್ದಾರೆ. ಒಬ್ಬರಂತು ವಿಚಿತ್ರವಾಗಿ ಅಲ್ಲಿ ನಾಗಿಣಿ ಡ್ಯಾನ್ಸ್ ಮಾಡಬಹುದ? ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Chikkamagaluru Rains: ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ, ಅಲ್ಲಲ್ಲಿ ಭೂ ಕುಸಿತ, ಮನೆಗಳು ನೆಲಸಮ

ಮತ್ತೊಬ್ಬರು ನಾನೇನಾದರು ಆ ಪಾರ್ಕ್ ಅಲ್ಲಿ ಓಡಿದರೆ ನನ್ನನ್ನು ಹಿಡಿಯಲು ಅಲ್ಲಿನ ಸಿಬ್ಬಂದಿಗಳು ಓಡಿಬರುತ್ತಾರೊ ಅಥವಾ ಆ ಸೂಚನೆಯನ್ನು ಪಾಲಿಸಲು ಸುಮ್ಮನೆ ನಿಂತಿರುತ್ತಾರೊ? ಎಂದು ವಿನೋದವಾಗಿ ಕೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರು ನಾನು ಇಲ್ಲಿ ಮೂನ್ ವಾಕ್ ಮಾಡಬಹುದಾ ? ನಾವು ಆಂಟಿ ಕ್ಲಾಕ್ ವೈಸ್ ರೀತಿಯಲ್ಲಿ ನಡೆಯಬಾರದು ಸರಿ ತೆವಳಬಹುದಾ? ಹೀಗೆ ಅನೇಕ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಈ ಪಾರ್ಕ್ ಮುಂದೆ ನೇತು ಹಾಕಿರುವ ಬಿಬಿಎಂಪಿಯ ಫಲಕವನ್ನು ಜನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ.
Published by:Ashwini Prabhu
First published: