ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(Bruhat Bengaluru Mahanagara Palike)ಗೆ ನಗರದಲ್ಲಿರುವ ದೊಡ್ಡ ದೊಡ್ಡ ಮಾಲ್ ಗಳು ಆಸ್ತಿ ತೆರಿಗೆ (Property Tax) ಉಳಿಸಿಕೊಂಡಿದ್ದು, ಪಾವತಿಸಲು ಇನ್ನು ಮನಸ್ಸು ಮಾಡುತ್ತಿಲ್ಲ. ಅದೇ ಸಾಮಾನ್ಯ ಜನರು ಆಸ್ತಿ ತೆರಿಗೆ ಪಾವತಿಸುವಲ್ಲಿ ಸ್ವಲ್ಪ ತಡ ಮಾಡಿದರೂ ಬಿಬಿಎಂಪಿ (BBMP) ದಂಡದ ಸಹಿತ ತೆರಿಗೆಯನ್ನು ಪಾವತಿ ಮಾಡಿಸಿಕೊಳ್ಳುತ್ತದೆ. ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರೂ ತೆರಿಗೆ ಕಟ್ಟಲು ಕಳ್ಳಾಟ ಮಾಡುತ್ತಿವೆ. ಎಷ್ಟೇ ಬಾರಿ ನೋಟಿಸ್ ಕೊಟ್ಟರೂ ಮಾಲ್ ಮಾಲೀಕರು ಮಾತ್ರ ಡೋಂಟ್ ಕೇರ್ ಅನ್ನುತ್ತಿದ್ದಾರೆ. ನಗರದ ಮಾಲ್ ಗಳಿಂದ ಬಿಬಿಎಂಪಿಗೆ ತೆರಿಗೆ ವಂಚನೆ ಆಗಿರೋದೆಷ್ಟು.? ಯಾವ ಯಾವ ಮಾಲ್ ಗಲು ಎಷ್ಟು ತೆರಿಗೆ ಬಾಕಿ ಇವೆ ಅನ್ನೋ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 43 ಮಾಲ್ಗಳಿದ್ದು, ಈ ಪೈಕಿ 9 ಮಾಲ್ಗಳು ಬರೋಬ್ಬರಿ 69 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಪ್ರಸಕ್ತ ವರ್ಷ ಸೇರಿದಂತೆ ಈ ಹಿಂದಿನ ವರ್ಷ ಬಾಕಿ ಸೇರಿದಂತೆ ಒಟ್ಟು 98,96,79,281 ರೂ. ಬಾಕಿ ಇದೆ.
ಬಿಬಿಎಂಪಿ ಕಾಯ್ದೆ 148ರ ಅನ್ವಯ ಕಾರಣ ಕೇಳಿ ಪತ್ರ ಬರೆದರೂ ಮಾಲ್ ಮಾಲೀಕರು ಮಾತ್ರ ತೆರಿಗೆ ಕಟ್ಟಿಲ್ಲ. ಇದೀಗ ಆಸ್ತಿ ತೆರಿಗೆ ಪಾವತಿಸದಿದ್ದಲಿ ಜಪ್ತಿ ವಾರೆಂಟ್ ಜಾರಿಗೊಳಿಸಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲು ಪಾಲಿಕೆ ಚಿಂತನೆ ನಡೆಸಿದೆ.
ಇದನ್ನೂ ಓದಿ: Price Hike: LPG ಸಿಲಿಂಡರ್ ಬೆಲೆ ಏರಿಕೆ: ಮತ್ತಷ್ಟು ತುಟ್ಟಿಯಾಗುತ್ತಾ ಹೋಟೆಲ್ ಆಹಾರ? ಮಾಲೀಕರು ಹೇಳೋದೇನು?
ಯಾವ ಮಾಲ್ ಗಳು ಎಷ್ಟು ತೆರಿಗೆ ಬಾಕಿ ಉಳಿಸಿಕೊಂಡಿವೆ? ಇಲ್ಲಿದೆ ಮಾಹಿತಿ
ಮಾಲ್ ಹೆಸರು | ಬಾಕಿ ತೆರಿಗೆ (ರೂ .ಗಳಲ್ಲಿ) |
ರಾಯಲ್ಮೀನಾಕ್ಷಿ ಮಾಲ್ | 1,49,66,178 ರೂ. ಬಾಕಿ |
ರಾಕ್ ಲೈನ್ ಮಾಲ್ | 6,64,90,228 ರೂ ಬಾಕಿ |
ವರ್ಜಿನಿಯಾ ಮಾಲ್ | 64,95,459 ರೂ ಬಾಕಿ |
ಸೋಲ್ಸ್ಪೇಸ್ ಅರೇನಾ ಮಾಲ್ (ಟೋಟಲ್ ಮಾಲ್) | 85,18,189 ರೂ ಬಾಕಿ, |
ವಿ ಆರ್ ಮಾಲ್ | 3,90,56,952 ರೂ ಬಾಕಿ |
ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್ ಮಾಲ್ | 9,86,587 ರೂ ಬಾಕಿ |
ಜಿಟಿ ವರ್ಲ್ಡ್ ಮಾಲ್ | 3,85,06,085 ರೂ ಬಾಕಿ |
ಮಂತ್ರಿ ಮಾಲ್ | 20,33,34,000 ರೂ ಬಾಕಿ |
ಲೂಲು ಹೈಪರ್ ಮಾರ್ಕೆಟ್ | 18,66,29,925 ರೂ ಬಾಕಿ |
ಕಳೆದ ನಾಲ್ಕು ವರ್ಷಗಳಿಂದ ಮಂತ್ರಿಮಾಲ್ ಆಸ್ತಿ ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಳ್ಳುತ್ತಾ ಬಂದಿದೆ. ಕಳೆದ ವರ್ಷ ಅಕ್ಟೋಬರ್ 2021ರಲ್ಲಿ ಬೀಗ ಹಾಕಿದಾಗ ತಾತ್ಕಾಲಿಕ 5 ಕೋಟಿ ಕಟ್ಟಿ ಮಂತ್ರಿ ಮಾಲ್ ತಪ್ಪಿಸಿಕೊಂಡಿತ್ತು. ಉಳಿದ ಬಾಕಿ 27 ಕೋಟಿಯನ್ನ ಅಕ್ಟೋಬರ್ ಅಂತ್ಯಕ್ಕೆ ಪಾವತಿ ಮಾಡೋಕೆ ಡೆಡ್ ಲೈನ್ ಕೊಡಲಾಗಿತ್ತು. ಅಕ್ಟೋಬರ್ 31 ರ ಬಳಿಕ ಹಲವು ಬಾರಿ ಕೇಳಿದ್ರು ಬಾಕಿ ಪಾವತಿ ಮಾಡಿರಲಿಲ್ಲ. ಅಕ್ಟೋಬರ್ ಮುಗಿದ್ರೂ ತೆರಿಗೆ ಕಟ್ಟದೆ ಇದ್ದಿದ್ದಕ್ಕೆ ನವೆಂಬರ್ 15 ರಂದು ಮತ್ತೆ ಬೀಗ ಹಾಕೋಕೆ ಪಾಲಿಕೆ ಮುಂದಾಗಿತ್ತು.
ಇದನ್ನೂ ಓದಿ: Tata Motors: ವಾಣಿಜ್ಯ ವಾಹನಗಳ ಮೇಲಿನ ಬೆಲೆ ಏರಿಸಲು ಮುಂದಾದ ಜನಪ್ರಿಯ ಕಂಪನಿ.. ಇದಕ್ಕೆ ಕಾರಣವೇನು ಗೊತ್ತಾ?
ನವೆಂಬರ್ 15 ರಂದು ಮಂತ್ರಿಮಾಲ್ ಗೆ 15 ದಿನ ಕಾಲಾವಕಾಶ ಕೊಡಲಾಗಿತ್ತು. ಆದರೆ ನವೆಂಬರ್ ಕಳೆದು ಡಿಸೆಂಬರ್ ಬಂದರೂ ತೆರಿಗೆ ಕಟ್ಟದೆ ಮಂತ್ರಿ ಮಾಲ್ ತಪ್ಪಿಸಿಕೊಂಡಿತ್ತು. ಹೀಗಾಗಿ ಡಿಸೆಂಬರ್ ಲ್ಲಿ ಬಿಬಿಎಂಪಿ ಅಧಿಕಾರಿಗಳು ಸತತ ಮೂರನೇ ಬಾರಿಗೆ ಮಂತ್ರಿ ಮಾಲ್ ಗೆ ಬೀಗ ಜಡಿದು, ಉಳಿದ ತೆರಿಗೆ ಹಣ ಕಟ್ಟಿ ಎಂದು ವಾರ್ನಿಂಗ್ ಕೊಟ್ಟಿದ್ದರು.
ನಂತರ ಒಂದಿಷ್ಟು ಮೊತ್ತ ಪಾವತಿಸಿದ ನಂತರ ಮಾಲ್ ತೆರೆಯಲು ಬಿಬಿಎಂಪಿ ಅವಕಾಶ ನೀಡಿತ್ತು. ಸದ್ಯ 20 ಕೋಟಿಗೂ ಅಧಿಕ ತೆರಿಗೆ ಬಾಕಿಯನ್ನು ಮಂತ್ರಿ ಮಾಲ್ ಉಳಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ