• Home
 • »
 • News
 • »
 • bengaluru-urban
 • »
 • Zev Siegl: ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಮಸಾಲಾ ದೋಸೆ ತಿಂದ Starbucks ಸಂಸ್ಥೆಯ ಸಹ-ಸಂಸ್ಥಾಪಕ..!

Zev Siegl: ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಮಸಾಲಾ ದೋಸೆ ತಿಂದ Starbucks ಸಂಸ್ಥೆಯ ಸಹ-ಸಂಸ್ಥಾಪಕ..!

"ನಿಮ್ಮ ಸ್ಥಳೀಯ ಆಹಾರ, ಕಾಫಿ ಹಾಗೂ ತುಂಬು ಹೃದಯದ ಸ್ವಾಗತಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಾನು ಈ ಅದ್ಭುತ ಅನುಭವವನ್ನು ಸಿಯಾಟಲ್ಲಿಗೆ ತೆಗೆದುಕೊಂಡು ಹೋಗುತ್ತೇನೆ" ಎಂದು ಜೇವ್ ಅವರು ಬರೆದುಕೊಂಡಿದ್ದಾರೆ.

"ನಿಮ್ಮ ಸ್ಥಳೀಯ ಆಹಾರ, ಕಾಫಿ ಹಾಗೂ ತುಂಬು ಹೃದಯದ ಸ್ವಾಗತಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಾನು ಈ ಅದ್ಭುತ ಅನುಭವವನ್ನು ಸಿಯಾಟಲ್ಲಿಗೆ ತೆಗೆದುಕೊಂಡು ಹೋಗುತ್ತೇನೆ" ಎಂದು ಜೇವ್ ಅವರು ಬರೆದುಕೊಂಡಿದ್ದಾರೆ.

"ನಿಮ್ಮ ಸ್ಥಳೀಯ ಆಹಾರ, ಕಾಫಿ ಹಾಗೂ ತುಂಬು ಹೃದಯದ ಸ್ವಾಗತಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಾನು ಈ ಅದ್ಭುತ ಅನುಭವವನ್ನು ಸಿಯಾಟಲ್ಲಿಗೆ ತೆಗೆದುಕೊಂಡು ಹೋಗುತ್ತೇನೆ" ಎಂದು ಜೇವ್ ಅವರು ಬರೆದುಕೊಂಡಿದ್ದಾರೆ.

 • Share this:

  ಬೆಂಗಳೂರು(Bengaluru) ಹೇಗೆ ತನ್ನ ಮಾಹಿತಿ ತಂತ್ರಜ್ಞಾನ, ಕೂಲ್ ವಾತಾವರಣ ಹಾಗೂ ಉದ್ಯಾನವನಗಳಿಗೆ ಹೆಸರುವಾಸಿಯಾಗಿದೆಯೋ ಅದೇ ರೀತಿಯಾಗಿ ತನ್ನ ಕೆಲ ಐಕಾನಿಕ್ ಹೋಟೆಲ್(Iconic Hotel) ಗಳಿಗೂ ಪ್ರಸಿದ್ಧಿಪಡೆದಿದೆ. ನಗರದಲ್ಲಿ ಕಂಡುಬರುವ ಹಲವು ರೆಸ್ಟೋರೆಂಟುಗಳ ಪೈಕಿ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನವೂ ಒಂದು. ಬೆಂಗಳೂರಿನ ವಿದ್ಯಾರ್ಥಿ ಭವನ(Vidyarthi Bhavan) ವಿಶೇಷವಾಗಿ ತನ್ನ ಮಸಾಲಾ ದೋಸೆಗಳಿಗಾಗಿ(Masala Dosa) ಸಾಕಷ್ಟು ಹೆಸರುವಾಸಿಯಾಗಿದೆ.


  ಸಾಕಷ್ಟು ಹಳೆಯದಾದ ವಿದ್ಯಾರ್ಥಿ ಭವನದಲ್ಲಿ ಇಂದಿಗೂ ಸಾಂಪ್ರದಾಯಿಕ ಶೈಲಿಯಲ್ಲೇ ಹಿಟ್ಟನ್ನು ರುಬ್ಬಿ ಗರಿ ಗರಿಯಾದ ಮಸಾಲಾ ದೋಸೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ನಗರದ ಮೂಲೆ ಮೂಲೆಗಳಿಂದಲೂ ಜನರು ಈ ಹೋಟೆಲ್ ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕೇವಲ ಸಾಮಾನ್ಯ ಜನರಷ್ಟೇ ಅಲ್ಲದ ಗಾಂಧಿ ಭವನಕ್ಕೆ ದೇಶ-ವಿದೇಶಗಳ ಗಣ್ಯ ವ್ಯಕ್ತಿಗಳು, ಸೆಲಿಬ್ರಿಟಿಗಳೂ ಸಹ ಭೇಟಿ ನೀಡಿರುವ ಉದಾಹರಣೆಗಳಿವೆ. ಇತ್ತೀಚಿಗಷ್ಟೇ ವಿದ್ಯಾರ್ಥಿ ಭವನ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಿಂದೊಮ್ಮೆ ಇಂದಿನ ಯುಕೆ ಪ್ರಧಾನಿ ರಿಶಿ ಸುನಕ್ ಅವರು ಭೇಟಿ ನೀಡಿ ದೋಸೆ ತಿಂದಿರುವ ಬಗ್ಗೆಯೂ ಪೋಸ್ಟ್ ಹಂಚಿಕೊಂಡಿತ್ತು.


  ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ ವಿಶ್ವಖ್ಯಾತಿಯ ಸ್ಟಾರ್ಬಕ್ಸ್ ಸಂಸ್ಥೆಯ ಸಹ-ಸಂಸ್ಥಾಪಕ


  ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಸಂಪನ್ನವಾಗಿದೆ. ಈ ಸಮಾವೇಶಕ್ಕೆ ದೇಶ-ವಿದೇಶಗಳ ಉದ್ದಿಮೆದಾರರು, ದೈತ್ಯ ಸಂಸ್ಥೆಗಳ ನಾಯಕರಾದಿಯಾಗಿ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಸ್ಟಾರ್ಬಕ್ಸ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿರುವ ಜೇವ್ ಸೀಗಲ್ ಸಹ ನಗರಕ್ಕೆ ಭೇಟಿ ನೀಡಿದ್ದರು. ತಮ್ಮ ವೇಳಾಪಟ್ಟಿಯಲ್ಲಿ ಸಮಯ ಮಾಡಿಕೊಂಡು ಜೇವ್ ಇತ್ತೀಚಿಗಷ್ಟೇ ಸ್ಥಳೀಯ ಉಪಹಾರ ಸವಿಯಲೆಂದು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದರು.


  ಇದನ್ನೂ ಓದಿ: Supreme Court: ಆರ್ಥಿಕ ದುರ್ಬಲ ವರ್ಗಕ್ಕೆ ಮೀಸಲಾತಿ; ಸುಪ್ರೀಂನಲ್ಲಿ ಕೇಂದ್ರಕ್ಕೆ ಜಯ


  ಈ ಸಂದರ್ಭದಲ್ಲಿ ಈ ವಿಐಪಿ ವ್ಯಕ್ತಿಗೆ ಉತ್ತಮ ಅತಿಥಿ ಸತ್ಕಾರ ಮಾಡಿದ ವಿದ್ಯಾರ್ಥಿ ಭವನ ಅವರಿಗೆ ತನ್ನ ವಿಶೇಷ ಮಸಾಲಾ ದೋಸೆ ಹಾಗೂ ಫಿಲ್ಟರ್ ಕಾಫಿಯನ್ನು ಸರ್ವ ಮಾಡಿದ್ದು, ಜೇವ್ ಅವರು ಇದಕ್ಕೆ ಅದ್ಭುತವಾಗಿ ಸ್ಪಂದಿಸಿದರೆನ್ನಲಾಗಿದೆ.


  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್


  ಈ ಬಗ್ಗೆ ವಿದ್ಯಾರ್ಥಿ ಭವನವು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿದ್ದು ಜೇವ್ ಅವರು ಉತ್ತಮ ಅನುಭವ ಪಡೆದುಕೊಂಡಿರುವುದಾಗಿ ಹೇಳಿದೆ. ಈ ಅನುಭವಕ್ಕೆ ಸಂಬಂಧಿಸಿದಂತೆ ಜೇವ್ ಮಾತನಾಡುತ್ತಾ ಈ ರೀತಿ ಬರೆದುಕೊಂಡಿದ್ದಾರೆ, "ನಿಮ್ಮ ಸ್ಥಳೀಯ ಆಹಾರ, ಕಾಫಿ ಹಾಗೂ ತುಂಬು ಹೃದಯದ ಸ್ವಾಗತಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಾನು ಈ ಅದ್ಭುತ ಅನುಭವವನ್ನು ಸಿಯಾಟಲ್ಲಿಗೆ ತೆಗೆದುಕೊಂಡು ಹೋಗುತ್ತೇನೆ".


  ಇನ್ನು, ಈ ಭೇಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಭವನವೂ ಸಹ ತನ್ನ ಕೃತಜ್ಞತೆ ವ್ಯಕ್ತಪಡಿಸುತ್ತ ಪೋಸ್ಟ್ ಮಾಡಿದ್ದು ಅದರಲ್ಲಿ, "ನಾವು ಸ್ಟಾರ್ಬಕ್ಸ್ ಸಂಸ್ಥೆಯ ಸಹ-ಸಂಸ್ಥಾಪಕರಾದ ಜೇವ್ ಅವರು ಇಂದು ಸಂಜೆ ನಮ್ಮ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿರುವುದಕ್ಕೆ ಹೆಮ್ಮೆ ಹಾಗೂ ಆನಂದ ಪಡುತ್ತಿದ್ದೇವೆ. ಅವರು ಮಸಾಲೆ ದೋಸೆ ಹಾಗೂ ಫಿಲ್ಟರ್ ಕಾಫಿಯ ರುಚಿಯನ್ನು ಸವಿದರು ಹಾಗೂ ನಮ್ಮ ಅತಿಥಿ ಅಭಿಪ್ರಾಯ ಪುಸ್ತಕದಲ್ಲೂ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು" ಎಂದು ಬರೆದುಕೊಂಡಿದೆ.


  ನೆಟ್ಟಿಗರ ಕಾಮೆಂಟ್ಸ್


  ವಿದ್ಯಾರ್ಥಿ ಭವನದ ತನ್ನ ಇನ್ಸ್ಟಾದಲ್ಲಿ ಜೇವ್ ಅವರ ಕುರಿತಾದ ಪೋಸ್ಟ್ ಮಾಡಿದ ಮೇಲೆ ಅನೇಕ ಇನ್ಸ್ಟಾ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, "ಇದು ಅದ್ಭುತವಾಗಿದೆ, ಸ್ಟಾರ್ಬಕ್ಸ್ ಸಂಸ್ಥಾಪಕರು ನಮ್ಮ ವಿಬಿಯಲ್ಲಿ ಮಸಾಲೆ ದೋಸೆ ಹಾಗೂ ಫಿಲ್ಟರ್ ಕಾಫಿ ಸವಿದಿದ್ದಾರೆ, ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ" ಎಂದಿದ್ದಾರೆ.


  ಇನ್ನೊಬ್ಬರು, "ನೀವು ನಿಮ್ಮ ಭೇಟಿಯನ್ನು ಸ್ಮರಣೀಯವಾಗುವಂತೆ ಮಾಡಿದುದಕ್ಕೆ ಧನ್ಯವಾದಗಳು" ಎಂದು ಹೇಳಿದರೆ ಮಗದೊಬ್ಬರು "ಈ ಅನುಭವದಿಂದ ಪ್ರೇರಿತವಾಗಿ ಮುಂದೆ ಸ್ಟಾರ್ಬಕ್ಸ್ ಸಹ ಫಿಲ್ಟರ್ ಕಾಫಿ ಸರ್ವ್ ಮಾಡಬಹುದೆಂದು ಆಶಿಸುತ್ತೇನೆ" ಎಂದಿದ್ದಾರೆ.


  ಇದನ್ನೂ ಓದಿ: Electric Car: 4 ಲಕ್ಷದ ಹೊಸ ಮೈಕ್ರೋ ಎಲೆಕ್ಟ್ರಿಕ್​ ಕಾರು! ಜಸ್ಟ್ 2 ಸಾವಿರ ಕೊಟ್ಟು ಮನೆಗೆ ತನ್ನಿ!


  ಅಷ್ಟಕ್ಕೂ ಕಳೆದ ಜುಲೈನಲ್ಲಿ, ಸ್ಟಾರ್ಬಕ್ಸ್ ತನ್ನ ಭಾರತ ಶಾಖೆಗಳಲ್ಲಿ ಸ್ಥಳೀಯ ತಿನಿಸು, ಫಿಲ್ಟರ್ ಕಾಫಿ ಹಾಗೂ ಮಸಾಲಾ ಚಹಾಗಳನ್ನು ತನ್ನ ಮೆನುವಿನಲ್ಲಿ ಸೇರಿಸಿಕೊಳ್ಳುತ್ತಿದೆ ಎಂಬ ವರದಿಗಳು ಬಂದಿದ್ದವು. ಏನೇ, ಆಗಲಿ ಭಾರತೀಯತೆಯ ಸ್ಪರ್ಶವನ್ನು ಈ ಅಂತಾರಾಷ್ಟ್ರೀಯ ಸಂಸ್ಥೆಗಳು ಹೊಂದಿದಾಗ ಅವುಗಳ ವ್ಯಾಪಾರದಲ್ಲಿ ಸಹಜವಾಗಿ ಅಭಿವೃದ್ಧಿಯಾಗುತ್ತದೆ ಎಂಬುದು ಸುಳ್ಳಲ್ಲ ಎಂದಷ್ಟೇ ಹೇಳಬಹುದು.

  Published by:Latha CG
  First published: