• Home
  • »
  • News
  • »
  • bengaluru-urban
  • »
  • Temple Timings: ಗವಿ ಗಂಗಾಧರೇಶ್ವರ ದೇಗುಲ ದರ್ಶನ ಬಂದ್; ಸಂಜೆ ಈ ಸಮಯಕ್ಕೆ ಮತ್ತೆ ಓಪನ್

Temple Timings: ಗವಿ ಗಂಗಾಧರೇಶ್ವರ ದೇಗುಲ ದರ್ಶನ ಬಂದ್; ಸಂಜೆ ಈ ಸಮಯಕ್ಕೆ ಮತ್ತೆ ಓಪನ್

ಗವಿ ಗಂಗಾಧರೇಶ್ವರ ದೇಗುಲ

ಗವಿ ಗಂಗಾಧರೇಶ್ವರ ದೇಗುಲ

Surya Grahan 2022: ಗವಿಗಂಗಾಧರೇಶ್ವರ ದೇವಾಲಯ ಆವರಣದ ಶಾಂತಿ ಹೋಮ ಶುರುವಾಗಿದೆ. ಗ್ರಹಣ ನಿವಾರಣೆಗಾಗಿ ಶಾಂತಿ ಹೋಮ ನಡೆಸಲಾಗುತ್ತಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಇಂದು ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru News) ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯ ದರ್ಶನ (Gavi Ganga Dhareshwar Temple Darshan) ನಿರ್ಬಂಧಿಸಲಾಗಿದೆ. ಸಂಜೆಯವರೆಗೂ ಗವಿ ಗಂಗಾಧರೇಶ್ವರ ದೇವಾಲಯ ಬಂದ್ ಇರಲಿದೆ. ಸಂಜೆ 6:30ಕ್ಕೆ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ.  6:30 ರ ಬಳಿಕ ದೇವಾಲಯ ಸ್ವಚ್ಚಕಾರ್ಯ ನಡೆಯಲಿದೆ. ದೇವಾಲಯ ಸ್ವಚ್ಚ ಮಾಡಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಮತ್ತೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.


    ಗವಿಗಂಗಾಧರೇಶ್ವರ ದೇವಾಲಯ ಆವರಣದ ಶಾಂತಿ ಹೋಮ ಶುರುವಾಗಿದೆ. ಗ್ರಹಣ ನಿವಾರಣೆಗಾಗಿ ಶಾಂತಿ ಹೋಮ ನಡೆಸಲಾಗುತ್ತಿದೆ.


    ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಪೂಜೆ ಇರಲಿದೆಯೇ?
    ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ದೇವಾಲಯದಲ್ಲಿ ಎಂದಿನಂತೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಮಧ್ಯಾಹ್ನ ಗ್ರಹಣ ಆರಂಭ ಕಾಲದಲ್ಲಿ ದೇವರಿಗೆ ವಿಶೇಷ ಅಭಿಷೇಕ ನಡೆಸಲಾಗುತ್ತದೆ. ಶ್ರೀಕಂಠೇಶ್ವರ. ಸಂಜೆಯವರೆಗೂ ಎಂದಿನಂತೆ‌ ಭಕ್ತರಿಗೆ ದರ್ಶನ ನೀಡಲಿದ್ದಾನೆ ಎಂದು ತಿಳಿಸಲಾಗಿದೆ.


    ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯ
    ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯ ಬಂದ್ ಆಗಲಿದೆ. ಬೆಳಗ್ಗೆ 10:30 ರ ನಂತರ ದೇವಾಲಯದ ಬಾಗಿಲು ಬಂದ್ ಆಗಲಿದ್ದು ನಂತರ ಸಂಜೆ 7:45 ರ ನಂತರ ದೇವಾಲಯದ ಬಾಗಿಲು ಒಪನ್ ಆಗಲಿದೆ. 10:30 ರವರೆಗೆ ಮಾತ್ರ ಇಂದು ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.


    ಇದನ್ನೂ ಓದಿ: Bengaluru News: ಬೆಂಗಳೂರು ಪೊಲೀಸರ ವೆಬ್ ವಿಳಾಸ ಬದಲು


    ಹನುಮನ ಜನ್ಮಸ್ಥಳ ಅಂಜನಾದ್ರಿಯಲ್ಲಿ ದರ್ಶನ ಲಭ್ಯ
    ಅಂತೆಯೇ ಇನ್ನೊಂದು ಪ್ರಮುಖ ದೇಗುಲ ಅಂಜನಾದ್ರಿ ದೇವಸ್ಥಾನ ಬಂದ್ ಇರುವುದಿಲ್ಲ. ಗಂಗಾವತಿಯ ತಾಲೂಕಿನ ಅಂಜನಾದ್ರಿಗೆ ದೇವಸ್ಥಾನ ಓಪನ್ ಇರುತ್ತದೆ. ಹನುಮನ ಜನ್ಮಸ್ಥಳ ಅಂಜನಾದ್ರಿಯಲ್ಲಿ ಗ್ರಹಣ ಸಂದರ್ಭದಲ್ಲಿ ಬಂದ್ ಮಾಡುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ: Hubballi News: ವಿಮಾನಕ್ಕಿಂತ ಬಸ್ ಟಿಕೆಟ್ ದರವೇ ಹೆಚ್ಚು! ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟವರಿಗೆ ಶಾಕ್


    ಕೊಪ್ಪಳ ಜಿಲ್ಲೆಯ ಎರಡು ದೇವಾಲಯಗಳು ಬಂದ್ ಆಗಲಿದೆ.  ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನ, ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನ ಬಂದ್ ಆಗಲಿದೆ.
    ಮಧ್ಯಾಹ್ನ 4 ಗಂಟೆಯಿಂದ 7 ಗಂಟೆಯವರೆಗೂ ದೇವಸ್ಥಾನ ಬಂದ್ ಮಾಡಲಾಗುವುದು. ಗ್ರಹಣ ವಿಮೋಚನೆಯ ನಂತರ ಪೂಜೆ ನಡೆಸಿ ನಂತರ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: