• Home
 • »
 • News
 • »
 • bengaluru-urban
 • »
 • Solar Eclipse Time Checking: ನಿಮ್ಮೂರಲ್ಲಿ ಸೂರ್ಯ ಗ್ರಹಣ ಕಾಣುವ ಸಮಯವನ್ನು ನೀವೇ ಚೆಕ್ ಮಾಡಿ

Solar Eclipse Time Checking: ನಿಮ್ಮೂರಲ್ಲಿ ಸೂರ್ಯ ಗ್ರಹಣ ಕಾಣುವ ಸಮಯವನ್ನು ನೀವೇ ಚೆಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Solar Eclipse 2022 Timings Check: ನೀವೂ ಸಹ ಆರಾಮವಾಗಿ ಕುಳಿತ ಸ್ಥಳದಿಂದಲೇ ನಿಮ್ಮೂರಲ್ಲಿ ಸೂರ್ಯ ಗ್ರಹಣ ಕಾಣುವ ಸಮಯವನ್ನು ಚೆಕ್ ಮಾಡಬಹುದು. 

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಇಂದಿನ ಸೂರ್ಯ ಗ್ರಹಣ (Solar Eclipse 2022) ಎಲ್ಲರಲ್ಲೂ ಆಸಕ್ತಿ ಹೆಚ್ಚಿಸಿದೆ. ಊರಲ್ಲೇ ಇದ್ದು ನೀವು ನಿಮ್ಮೂರಲ್ಲೇ ನೋಡಬಹುದು. ಆದ್ರೆ ಯಾವ ಸಮಯಕ್ಕೆ ನಮ್ಮೂರಲ್ಲಿ ಸೂರ್ಯ ಗ್ರಹಣ (Surya Grahan 2022) ನೋಡಬಹುದು? ಎಲ್ಲಾ ಊರಲ್ಲೂ ಒಂದೇ ಸಮಯಕ್ಕೆ ಸೂರ್ಯ ಗ್ರಹಣ ಕಾಣುತ್ತಾ? ಹೀಗೆ ನಿಮ್ಮೂರಲ್ಲಿ ಸೂರ್ಯ ಗ್ರಹಣ ಎಷ್ಟೊತ್ತಿಗೆ ವೀಕ್ಷಿಸಬಹುದು? ನಿಮ್ಮೂರಲ್ಲಿ ಗ್ರಹಣ ಯಾವ ಸಮಯಕ್ಕೆ ಕಾಣುತ್ತೆ (Check Solar Eclipse Timings) ಆನ್​ಲೈನ್​ನಲ್ಲಿ ಹೀಗೆ ನೀವೇ ಚೆಕ್ ಮಾಡಬಹುದು.


  ನೀವೂ ಸಹ ಆರಾಮವಾಗಿ ಕುಳಿತ ಸ್ಥಳದಿಂದಲೇ ನಿಮ್ಮೂರಲ್ಲಿ ಸೂರ್ಯ ಗ್ರಹಣ ಕಾಣುವ ಸಮಯವನ್ನು ಚೆಕ್ ಮಾಡಬಹುದು.  ಅಥವಾ ಇಲ್ಲಿ ಕ್ಲಿಕ್ ಮಾಡಿ 


  ಮೊದಲು ಈ ವೆಬ್​ಸೈಟ್​ನಲ್ಲಿ World Clock ಸೆಕ್ಷನ್​ನಲ್ಲಿ ನಿಮ್ಮ ಊರಿನ ಹೆಸರನ್ನು ಸರ್ಚ್ ಮಾಡಿ, ಉದಾಹರಣೆಗೆ Bengaluru, Hubballi ಹೀಗೆ ನಿಮ್ಮ ಊರಿನ ಹೆಸರನ್ನು ಸರ್ಚ್ ಮಾಡಿ.


  ನಂತರ ಇಂದಿನ ಸೂರ್ಯ ಗ್ರಹಣವನ್ನು ಆಯ್ಕೆ ಮಾಡಿ. ಹೀಗೆ ಆಯ್ಕೆ ಮಾಡಲು ಇಲ್ಲಿ ಕ್ಲಿಕ್ ಮಾಡಿ


  ಉದಾಹರಣೆಗೆ, ಹುಬ್ಬಳ್ಳಿಯಲ್ಲಿ ಯಾವ ಸಮಯಕ್ಕೆ ಗ್ರಹಣ ಗೋಚರವಾಗುತ್ತೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ


  ಹೀಗೆ ನೀವೇ ನಿಮ್ಮ ಊರಿನಲ್ಲಿ ಗ್ರಹಣದ ಸಮಯವನ್ನು ಸುಲಭವಾಗಿ ಚೆಕ್ ಮಾಡಬಹುದು.


  ಇದನ್ನೂ ಓದಿ: Temple Timings: ಗವಿ ಗಂಗಾಧರೇಶ್ವರ ದೇಗುಲ ದರ್ಶನ ಬಂದ್; ಸಂಜೆ ಈ ಸಮಯಕ್ಕೆ ಮತ್ತೆ ಓಪನ್


  ಮಲ್ಪೆ ಬೀಚ್​ನಲ್ಲಿ ಸೂರ್ಯಗ್ರಹಣ ವೀಕ್ಷಿಸಿ!
  ಸೂರ್ಯಗ್ರಹಣ ಕುರಿತು ಯಾವುದೇ ಆತಂಕಪಡದೇ ವೈಜ್ಞಾನಿಕ ರೀತಿಯಲ್ಲಿ ಅದನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. ಸೂರ್ಯಗ್ರಹಣ ಸಮಯ ಉಡುಪಿಯ ಮಲ್ಲೆ ಸಮುದ್ರ‌ ಕಿನಾರೆಯಲ್ಲಿ ಇಂತಹದ್ದೊಂದು ಅಪೂರ್ವ ಅವಕಾಶವನ್ನು ಸಂಘವು ಕಲ್ಪಿಸುತ್ತಿದೆ. ಅಲ್ಲದೇ, ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ವೈಜ್ಞಾನಿಕ ವಿಧಾನದ ಮೂಲಕ ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ.


  ಇದನ್ನೂ ಓದಿ: Eclipse: ಸೂರ್ಯಗ್ರಹಣದಿಂದ ಈ ರಾಶಿಯವರಿಗೆ ಲಾಭ, ಹಣದ ಹರಿವು ಹೆಚ್ಚಲಿದೆ


  ಯಾವಾಗ ಸೂರ್ಯಗ್ರಹಣ?
  2022 ರ ಎರಡನೇ ಸೂರ್ಯಗ್ರಹಣವು ಇದೇ ಅಕ್ಟೋಬರ್ 25 ರಂದು ಸಂಭವಿಸಲಿದೆ. ಆ ದಿನ ಉಡುಪಿ ಭಾಗದಲ್ಲಿ ಸಾಯಂಕಾಲ 5.08 ನಿಮಿಷಕ್ಕೆ ಆರಂಭವಾಗಿ 6.28ಕ್ಕೆ ಕೊನೆಗೊಳ್ಳಲಿದೆ. ಆದರೆ ಆ ದಿನ ಸೂರ್ಯಾಸ್ತವು 6.06 ಗಂಟೆಗೆ ನಡೆಯಲಿದೆ. ಆದರೆ 5.50ರ ಸಮಯದಲ್ಲಿ ಈ ಭಾಗದಲ್ಲಿ ಗರಿಷ್ಠ ಪ್ರಮಾಣದ‌ ಗ್ರಹಣವು ಗೋಚರಿಸಲಿದೆ.

  Published by:ಗುರುಗಣೇಶ ಡಬ್ಗುಳಿ
  First published: