ಬೆಂಗಳೂರು: ಅದು ದೇಶದಲ್ಲಿಯೇ (Country) ಪ್ರಪ್ರಥಮ ಸ್ಮಾರ್ಟ್ ಬಸ್ ಸ್ಟ್ಯಾಂಡ್ (Bus Stand). ಅಲ್ಲಿವೆ ಭದ್ರತಾ ಕ್ಯಾಮೆರಾಗಳು, ಆಧುನಿಕ ಆಸನ ವ್ಯವಸ್ಥೆ, ವೆಂಡಿಂಗ್ ಮೆಷಿನ್, ಕುಡಿಯುವ ನೀರು, ಮೊಬೈಲ್/ ಲ್ಯಾಪ್ಟಾಪ್ ಚಾರ್ಜಿಂಗ್ ಸಾಕೆಟ್ಗಳು, BMI/ಹೆಲ್ತ್ ಕಿಯೋಸ್ಕ್, ಮಾರ್ಗ ನಕ್ಷೆ ಹೀಗೆ ಹತ್ತು ಹಲವು ಅಧುನಿಕ ಸೌಲಭ್ಯಗಳ ಸ್ಪರ್ಶ ದೊರಕಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ (Smart Bus Stand) ಎಲ್ಲಿದೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೀವು ನೋಡಲೇ ಬೇಕು.
ದೇಶದಲ್ಲಿಯೇ ಮೊದಲ ಸ್ಮಾರ್ಟ್ ಬಸ್ ಸ್ಟ್ಯಾಂಡ್
ಈ ದೇಶದಲ್ಲಿಯೇ ಮೊದಲ ಸ್ಮಾರ್ಟ್ ಬಸ್ ಸ್ಟ್ಯಾಂಡ್ನಲ್ಲಿ ಏನಿಲ್ಲ ಕೇಳಿ. ಇಲ್ಲಿ ಎಲ್ಲವೂ ನಿಮಗೆ ಕುಳಿತಲ್ಲೇ ಸಿಗಲಿದೆ. ಇಲ್ಲಿ ಸುರಕ್ಷತೆ ಜೊತೆಗೆ ಹೆಣ್ಣುಮಕ್ಕಳಿಗೆ ಸಿಗುತ್ತೆ ಸ್ಯಾನಿಟರಿ ಪ್ಯಾಡ್, ಕುಳಿತಲ್ಲೆ ಲ್ಯಾಪ್ ಟಾಪ್, ಮೊಬೈಲ್ ಚಾರ್ಜ್ ಹಸಿವಾದ್ರೆ ಸ್ನ್ಯಾಕ್ಸ್. ಇದು ಕನಸಲ್ಲ, ನಿಜ.
ಹೌದು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಒಟೆರಾ ಹೊಟೇಲ್ ಬಳಿ ಸ್ಮಾರ್ಟ್ ಬಸ್ ಸ್ಟ್ಯಾಂಡ್ ತಲೆ ಎತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಟೌನ್ಶಿಪ್ ಅಥಾರಿಟಿ ಇದನ್ನು ನಿರ್ಮಿಸಿದ್ದು, ಇದು ದೇಶದಲ್ಲಿಯೇ ಮೊದಲು ಎನ್ನಲಾಗಿದೆ. ಸುಮಾರು 22 ಲಕ್ಷ ವೆಚ್ಚದಲ್ಲಿ ಈ ಸ್ಮಾರ್ಟ್ ಬಸ್ ಸ್ಟ್ಯಾಂಡ್ ನಿರ್ಮಿಸಲಾಗಿದೆ. ಇದು ದೇಶಕ್ಕೆ ಮಾದರಿಯಾಗಿದೆ. ಇಲ್ಲಿಯವರೆಗೆ ಎಲ್ಲಿಯು ಇಂತಹ ಅತ್ಯಾಧುನಿಕ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಕಂಡಿಲ್ಲ ಎಂದು ಎಲ್ಸಿಟಾ ಕಾರ್ಯನಿರ್ವಣಾಧಿಕಾರಿ ಅನಿರುದ್ದ ಗುಡಿ ತಿಳಿಸಿದ್ದಾರೆ.
ಇನ್ನೂ ಸ್ಮಾರ್ಟ್ ಬಸ್ ಸ್ಟ್ಯಾಂಡ್ ನಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇದೆ. ತಿನ್ನಲು ಸ್ನ್ಯಾಕ್ಸ್ ವೆಂಡಿಂಗ್ ಮಶಿನ್ ಇದೆ. ಹೆಣ್ಣಮಕ್ಕಳ ಸುರಕ್ಷತೆಗಾಗಿ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳು ಮತ್ತು ಸ್ಯಾನಿಟರಿ ಪ್ಯಾಡ್ ಬೂತ್ ಇದೆ. ಜೊತೆಗೆ ಹೆಣ್ಣು ಮಕ್ಕಳ ಭದ್ರತೆ ದೃಷ್ಟಿಯಿಂದ ಪ್ಯಾನಿಕ್ ಬಟನ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಬಸ್ ಸ್ಟ್ಯಾಂಡ್ನಲ್ಲಿದೆ ಎಲ್ಲಾ ಸೌಲಭ್ಯ
ಈ ಎಲ್ಲದರ ಜೊತೆಗೆ ಮಳೆ ನೀರು ಕೊಯ್ಲು ವಿಧಾನದ ಮೂಲಕ ಮಿನಿ ವರ್ಟಿಕಲ್ ಗಾರ್ಡನ್, ಮೊಬೈಲ್ ಮತ್ತು ಲ್ಯಾಪ್ ಟಾಪ್ ಚಾರ್ಜಿಂಗ್ ಗೆ ಇ ಚಾರ್ಜಿಂಗ್ ವ್ಯವಸ್ಥೆ ಇದೆ. ಇದರ ಜೊತೆಗೆ ಕಸ ತುಂಬಿದ ತಕ್ಷಣ ಮಾಹಿತಿ ನೀಡುವ ಸ್ಮಾರ್ಟ್ ಡಸ್ಟ್ ಬಿನ್, ಪ್ರಯಾಣಿಕರು ಬಸ್ ಸ್ಟ್ಯಾಂಡ್ನಲ್ಲಿದ್ದಾಗ ಮಾತ್ರ ಹೊತ್ತಿಕೊಳ್ಳುವ ದೀಪಗಳು. ಒಟ್ಟಾರೆ ಪ್ರಯಾಣಿಕರಿಗೆ ವಿವಿಧ ಉದ್ದೇಶಕ್ಕೆ ಬಳಕೆಯಾಗುವ ಮೂಲಕ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಜನಸ್ನೇಹಿಯಾಗಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯ.
ಇನ್ನೂ ಕುಡಿಯುವ ನೀರಿಲ್ಲದೆ, ಪ್ರಯಾಣಿಕರಿಗೆ ಸರಿಯಾಗಿ ಜಾಗವಿಲ್ಲದ ಅದೆಷ್ಟೋ ಬಸ್ ನಿಲ್ದಾಣಗಳ ನಡುವೆ ಸ್ಮಾರ್ಟ್ ಬಸ್ ನಿಲ್ದಾಣ ಹೆಚ್ಚು ಉಪಯುಕ್ತವಾಗಿದೆ. ರಾತ್ರಿ ವೇಳೆ ತಡವಾಗಿ ಬಂದಾಗ ಕುಡಿಯಲು ನೀರು, ಆಹಾರ ಜೊತೆಗೆ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಬೇರೆ ಬಸ್ ಸ್ಟ್ಯಾಂಡ್ಗಳಲ್ಲಿ ಗಗನ ಕುಸುಮಾ ಎನ್ನಬಹುದು. ಆದರೆ ಎಲೆಕ್ಟ್ರಾನಿಕ್ ಸಿಟಿ ಬಳಿ ನಿರ್ಮಿಸಲಾಗಿರುವ ಸ್ಮಾರ್ಟ್ ಸಿಟಿ ಬಸ್ ನಿಲ್ದಾಣದಲ್ಲಿ ತಿನ್ನಲು ತಿಂಡಿ, ಕುಡಿಯಲು ನೀರು ದೊರೆಯುತ್ತದೆ ಎಂದು ಬಿಎಂಟಿಸಿ ಬಸ್ ನಿರ್ವಾಹಕ ಮಂಜುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಜೈಲಿನಲ್ಲಿ ಖೈದಿಗಳಿಗೆ ಬೇಜಾರೇ ಆಗಲ್ಲ, ರಾಜ್ಯ ಪ್ರಶಸ್ತಿ ವಿಜೇತ ಸೆಲ್ ಇದು
ಒಟ್ಟಿನಲ್ಲಿ ಐಟಿ ಬಿಟಿ ಖ್ಯಾತಿಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಸರಿಗೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜನಸ್ನೇಹಿ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಮಾರ್ಟ್ ಬಸ್ ನಿಲ್ದಾಣಗಳು ನಿರ್ಮಾಣ ಮಾಡುವ ಗುರಿಯನ್ನು ಎಲ್ಸಿಟಾ ಹೊಂದಿದ್ದು, ಅದು ಆದಷ್ಟು ಬೇಗ ಕಾರ್ಯರೂಪಕ್ಕೆ ಎಂಬುದು ನಮ್ಮ ಆಶಯವಾಗಿದೆ.
ಆದೂರು ಚಂದ್ರು ನ್ಯೂಸ್ 18 ಕನ್ನಡ ಆನೇಕಲ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ