SL Bhyrappa: ಎಸ್​ ಎಲ್ ಭೈರಪ್ಪ ಕಾದಂಬರಿ ವಂಶವೃಕ್ಷ ಆಧಾರಿತ ನಾಟಕ; ನೋಡೋಕೆ ಇಲ್ಲಿದೆ ಮಾಹಿತಿ

ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ‘ ಕನ್ನಡ ಸಾಹಿತ್ಯ ಲೋಕದಲ್ಲಿಯೇ ವಿಶಿಷ್ಟ ಕಾದಂಬರಿ. ಈ ಕಾದಂಬರಿಯನ್ನು ಇದೀಗ ರಾಜಧಾನಿಯಲ್ಲಿರುವ ಜನರು ಪರದೆ ಮೇಲೆ ನೋಡಬಹುದಾಗಿದೆ. ಎಲ್ಲಿ? ಯಾವಾಗ? ಅನ್ನೋ ಮಾಹಿತಿ ಇಲ್ಲಿದೆ.

ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ

ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ

 • Share this:
  ಬೆಂಗಳೂರು: ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ (S. L. Bhyrappa) ಅವರ ಕಾದಂಬರಿ ‘ವಂಶವೃಕ್ಷ‘ ಆಧಾರಿತ ನಾಟಕ ಪ್ರದರ್ಶನವು ಇದೇ ಆಗಸ್ಟ್ 21 ನೇ ತಾರೀಕಿನಂದು ಪ್ರದರ್ಶನಗೊಳ್ಳಲಿದೆ. ಸಾಹಿತ್ಯ ಲೋಕದಲ್ಲಿಅತೀ ಹೆಚ್ಚು ಸಂಚಲನ ಮೂಡಿಸಿದ ಕಾದಂಬರಿ ಪುಸ್ತಕದಲ್ಲಿ ಎಸ್. ಎಲ್. ಭೈರಪ್ಪ ಅವರ ‘ವಂಶವೃಕ್ಷ‘ವೂ ಒಂದಾಗಿದೆ. ಇದೀಗ ಈ ಕಾದಂಬರಿಯನ್ನ ತೆರೆಯ ಮೇಲೆ ಕಲಾವಿದರು ಪ್ರದರ್ಶಿಸಲಿದ್ದಾರೆ.  ಬೆಂಗಳೂರಿನಲ್ಲಿ  (Bengaluru) ಆಗಸ್ಟ್ 21ರ ಒಂದೇ ದಿನ ಎರಡು ಪ್ರದರ್ಶನ ಕಾಣಲಿದೆ. ಅಭಿರುಚಿ ಚಂದ್ರು ನಿರ್ದೇಶನ, ಸದಾಶಿವ ಭಟ್ ಸಂಗೀತದಲ್ಲಿ ನಾಟಕವು ಮೂಡಿ ಬರಲಿದೆ. ಹಾಗಾದರೆ ಎಲ್ಲಿ ನಾಟಕ ನೋಡಬಹುದು? ಟಿಕೆಟ್ ಬುಕ್ ಮಾಡುವುದು ಹೇಗೆ? ಎಲ್ಲ ವಿವರ ಇಲ್ಲಿದೆ ನೋಡಿ.

  ಎಲ್ಲಿ? ಯಾವಾಗ?
  ವಂಶವೃಕ್ಷ ಕಾದಂಬರಿ ಆಧಾರಿತ ನಾಟಕ ಪ್ರದರ್ಶನವು ಆಗಸ್ಟ್ 21 ರ ಭಾನುವಾರದಂದು ಬೆಂಗಳೂರಿನ ಜಯನಗರ ವಿಜಯ ಕಾಲೇಜು ಹಿಂಭಾಗದಲ್ಲಿರುವ ಯುವ ಪಥದ ವಿವೇಕ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.

  novelist sl bhyrappa describes gyanvapi mosque in novels avarana pvn
  ಎಸ್​ ಎಲ್​ ಭೈರಪ್ಪ


  ಯಾವ ಸಮಯ?
  ಇದೇ ವಿವೇಕ ಸಭಾಂಗಣದಲ್ಲಿ ಭಾನುವಾರ ಎರಡು ಪ್ರದರ್ಶನ ತೆರೆ ಮೇಲೆ ಮೂಡಿಬರಲಿದೆ. ಮೊದಲ ಪ್ರದರ್ಶನ ಬೆಳಿಗ್ಗೆ 11ಕ್ಕೆ ಆದರೆ, ಎರಡನೇ ಪ್ರದರ್ಶನ ಸಾಯಂಕಾಲ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ.

  vijaya collage bengaluru ನಾಟಕ ನೋಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಇದನ್ನೂ ಓದಿ: Bengaluru News: ಬೆಂಗಳೂರು ಜನರಿಗೆ ಸಿಹಿಸುದ್ದಿ! ಪಾದಚಾರಿಗಳಿಗೆ ಗುಡ್ ನ್ಯೂಸ್ ನೀಡಿದ ಬಿಬಿಎಂಪಿ

  ಟಿಕೆಟ್ ಕಾಯ್ದಿರಿಸುವುದು ಹೇಗೆ?
  ಕಲಾಸಕ್ತರು ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದರಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಆಸಕ್ತರು 9880695659 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಮುಂಗಡ ಟಿಕೆಟ್ ಪಾವತಿಯನ್ನು ಆನ್ ಲೈನ್ ಮೂಲಕ ಮಾಡಬಹುದಾಗಿದೆ.

  ಸಂಪರ್ಕಿಸಬಹುದಾದ ಸಂಖ್ಯೆ: 9880695659 

  ಇದನ್ನೂ ಓದಿ: Bengaluru News: ಬೆಂಗಳೂರಿನ ಪ್ರಮುಖ ರಸ್ತೆ 1 ತಿಂಗಳು ಬಂದ್; ಬದಲಿ ಮಾರ್ಗ ಇಲ್ಲಿದೆ

  ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ‘ ಕನ್ನಡ ಸಾಹಿತ್ಯ ಲೋಕದಲ್ಲಿಯೇ ವಿಶಿಷ್ಟ ಕಾದಂಬರಿ. ಈ ಕಾದಂಬರಿಯನ್ನು ಇದೀಗ ರಾಜಧಾನಿಯಲ್ಲಿರುವ ಜನರು ಪರದೆ ಮೇಲೆ ನೋಡಬಹುದಾಗಿದೆ.
  Published by:guruganesh bhat
  First published: